ಸ್ಯಾಂಡಲ್ವುಡ್ ನಟ ಪುನೀತ್ ರಾಜ್ಕುಮಾರ್ ನುಡಿ ನಮನಕ್ಕೆ ಕೆಲವೇ ಗಂಟೆಗಳು ಬಾಕಿ ಇವೆ. ಗಾಯತ್ರಿ ವಿಹಾರ್ ಮೈದಾನದ ಮಂಟಪದಲ್ಲಿ ಇದಕ್ಕಾಗಿ ಭಾರೀ ಸಿದ್ಧತೆ ನಡೆಸಿಕೊಳ್ಳಲಾಗಿದೆ. ಪುನೀತ್ ರಾಜಕುಮಾರ್ಗೆ ನಮನ ಸಲ್ಲಿಸಲು ತಯಾರಿ ಮಾಡಿಕೊಳ್ಳಲಾಗಿದೆ. ಪುನೀತ್ ನುಡಿ ನಮನಕ್ಕೆ ಕಾಲಿವುಡ್, ಬಾಲಿವುಡ್, ಟಾಲಿವುಡ್ ಗಣ್ಯರು ಆಗಮಿಸುತ್ತಿದ್ದಾರೆ.
ಇನ್ನು, ಬಹುಭಾಷಾ ನಟ ಪ್ರಕಾಶ್ ರೈ ಕೂಡ ಬೆಂಗಳೂರಿಗೆ ಆಗಮಿಸಿದ್ದಾರೆ. ಕೆಂಪೇಗೌಡ ಇಂಟರ್ನ್ಯಾಷನಲ್ ಏರ್ಪೋರ್ಟ್ನಿಂದ ಗಾಯತ್ರಿ ವಿಹಾರ್ ಮೈದಾನದ ಮಂಟಪಕ್ಕೆ ಬಂದಿಳಿದಿದ್ದಾರೆ. ಬಂದ ಕೂಡಲೇ ರಾಘಣ್ಣನನ್ನು ತಬ್ಬಿ ಸಂತೈಸಿದರು. ಜತೆಗೆ ಧೈರ್ಯ ತುಂಬಿದರು.