ಜಗ್ಗೇಶ್ ಮತ್ತು ನಿರ್ದೇಶಕ ಸಂತೋಷ್ ಆನಂದ್ ರಾಮ್ ಕಾಂಬಿನೇಷನ್ನಲ್ಲಿ ಮೂಡಿಬರುತ್ತಿರುವ ಬಹು ನಿರೀಕ್ಷಿತ ಇನಿಮಾ ‘ರಾಘವೇಂದ್ರ ಸ್ಟೋರ್ಸ್’. ಈ ಸಿನಿಮಾದಲ್ಲಿ ಜಗ್ಗೇಶ್ ನಾಯನಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಸಿನಿಮಾದ ಶೂಟಿಂಗ್ ಈಗಾಗಲೇ ಭರದಿಂದ ಸಾಗುತ್ತಿದ್ದು ಚಿತ್ರೀಕರಣದಲ್ಲಿ ಜಗ್ಗೇಶ್ ಸಕ್ರಿಯರಾಗಿ ಪಾಲ್ಗೊಂಡಿದ್ದಾರೆ.
ಆದರೆ ಚಿತ್ರದಲ್ಲಿ ಜಗ್ಗೇಶ್ಗೆ ಜೋಡಿಯಾಗಿ ಯಾರು ಕಾಣಿಸಿಕೊಳ್ಳಲಿದ್ದಾರೆ ಎಂಬ ಪ್ರಶ್ನೆಗೆ ಉತ್ತರವನ್ನ ಮಾತ್ರ ನಿರ್ದೇಶಕ ಸಂತೋಷ್ ಆನಂದ್ ರಾಮ್ ಬಿಟ್ಟಕೊಟ್ಟಿರಲಿಲ್ಲ.ಆದರೆ ಸದ್ಯ ವಿಚಾರವನ್ನು ಚಿತ್ರ ತಂಡ ಅಧಿಕೃತವಾಗಿ ಹೇಳಿಕೊಂಡಿದೆ.ಇದೇ ಮೊಟ್ಟಮೊದಲ ಬಾರಿಗೆ ನವರಸ ನಾಯಕ ಜಗ್ಗೇಶ್ ಜೊತೆಗೆ ‘ಸಿಂಪಲ್ ಆಗಿ ಒಂದು ಲವ್ ಸ್ಟೋರಿ’ ಸಿನಿಮಾ ಖ್ಯಾತಿಯಾ ನಟಿ ಶ್ವೇತಾ ಶ್ರೀವಾತ್ಸವ್ ಕಾಣಿಸಿಕೊಳ್ಳಲಿದ್ದಾರೆ.
ಇನ್ನು ‘ರಾಘವೇಂದ್ರ ಸ್ಟೋರ್ಸ್’ಸಿನಿಮಾವನ್ನು ಕನ್ನಡದ ಹೆಮ್ಮೆಯ ಸಿನಿಮಾ ಸಂಸ್ಥೆ ‘ಹೊಂಬಾಳೆ ಸಿನಿಮಾ ಸಂಸ್ಥೆ’ ನಿರ್ಮಾಣ ಮಾಡುತ್ತಿದ್ದು, ಸಮಾಜದ ಕೌಟುಂಬಿಕ ಸಮಸ್ಯೆಗಳನ್ನು ಪ್ರತಿಬಿಂಬಿಸುವ ಕಥೆ ಈ ಸಿನಿಮಾದಲ್ಲಿ ಇರಲಿದೆ. ಈ ವಿಚಾರವನ್ನು ಹಾಸ್ಯಾಸ್ಪದವಾಗಿ ತೋರಿಸಲು ಪ್ರಯತ್ನಿಸಿದ್ದೇವೆ ಎಂದು ನಿರ್ದೇಶಕ ಸಂತೋಷ್ಆನಂದ್ರಾಮ್ ಮಾಹಿತಿ ನೀಡಿದ್ದಾರೆ. ಎಲ್ಲಾ ಅಂದುಕೊಂಡಂತೆ ಆದರೆ ಈ ವರ್ಷದ ಮಧ್ಯ ಭಾಗದಲ್ಲಿ ‘ರಾಘವೇಂದ್ರ ಸ್ಟೋರ್ಸ್’ ಥಿಯೇಟರ್ಗೆ ಲಗ್ಗೆ ಇಡುವ ಸಾಧ್ಯತೆ ಇದೆ ಎನ್ನಲಾಗ್ತಿದೆ.
The post ‘ರಾಘವೇಂದ್ರ ಸ್ಟೋರ್ಸ್ ’ಜಗ್ಗಣ್ಣನಿಗೆ ಹೀರೋಯಿನ್ ಫಿಕ್ಸ್..! appeared first on News First Kannada.