ಬೆಂಗಳೂರು: ಗೋಕಾಕ್ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ರಮೇಶ್ ಜಾರಕಿಹೊಳಿ ರಾಜಕಾರಣದಲ್ಲಿ ದಿಢೀರ್ ಸಕ್ರಿಯರಾಗಿದ್ದಾರೆ ಎನ್ನಲಾಗಿದೆ. ಇಂದು ಏಕಾಏಕಿ ಮುಂಬೈಗೆ ಹೋಗಿ, ಮಹಾರಾಷ್ಟ್ರದ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್‌ರನ್ನು ಭೇಟಿಯಾಗಿದ್ದಾರೆ. ರಾಜ್ಯ ಸಚಿವ ಸಂಪುಟ ಪುನಾರಚನೆಯಾಗಲಿದೆ ಎಂಬ ಚರ್ಚೆಯ ಹಿನ್ನೆಲೆ ದೇವೇಂದ್ರ ಫಡ್ನವಿಸ್‌ರನ್ನು ಭೇಟಿಯಾಗಿದ್ದಾರೆ ಎನ್ನಲಾಗಿದೆ.

ತಮ್ಮ ವಿರುದ್ಧದ ಸಿಡಿ ಪ್ರಕರಣದ ಆರೋಪ ಹಿನ್ನೆಲೆ ತಮ್ಮ ಬಳಿಯಿದ್ದ ಸಚಿವ ಸ್ಥಾನಕ್ಕೆ ಪಕ್ಷಕ್ಕೆ ತನ್ನಿಂದ ಮುಜುಗರ ಆಗಬಾರದೆಂದು ರಮೇಶ್ ಜಾರಕಿಹೊಳಿ ರಾಜೀನಾಮೆ ನೀಡಿದ್ದರು .ಪ್ರಕರಣದಲ್ಲಿ ತಾನು ನಿರಾಪರಾಧಿ ಎಂಬುದು ಸಾಬೀತಾದ ಕೂಡಲೇ ತಮ್ಮನ್ನು ಮತ್ತೆ ಕ್ಯಾಬಿನೆಟ್‌ಗೆ ಸೇರ್ಪಡೆ ಮಾಡಿಕೊಳ್ಳಬೇಕೆಂದು ರಮೇಶ್ ಜಾರಕಿಹೊಳಿ ಹೇಳಿದ್ದರಂತೆ.

ಸದ್ಯ ತಮ್ಮ ವಿರುದ್ಧ ಕೇಳಿ ಬಂದಿದ್ದ ಆರೋಪದಲ್ಲಿ ಆರೋಪಿಗಳಾದ ನರೇಶ್ ಗೌಡ ಮತ್ತು ಶ್ರವಣ್ ಎಸ್‌ಐಟಿ ಮುಂದೆ ಹಾಜರಾದ ಕಾರಣ.. ಪ್ರಕರಣದ ತನಿಖೆಯನ್ನು ಚುರುಕುಗೊಳಿಸಿ ತನ್ನನ್ನು ಇದರಿಂದ ಮುಕ್ತನನ್ನಾಗಿ ಮಾಡಿ ಎನ್ನುತ್ತಿದ್ದಾರಂತೆ. ತಾನು ನಿರಾಪರಾಧಿ ಎಂದು ಗೊತ್ತಾದ ಕೂಡಲೇ ಕ್ಯಾಬಿನೆಟ್‌ಗೆ ಸೇರ್ಪಡೆಯಾಗಲು ಈಗಿನಿಂದಲೇ ತಾಲೀಮು ಆರಂಭಿಸಿದ್ದಾರಂತೆ.

ಇದರ ಮೊದಲ ಹೆಜ್ಜೆಯಾಗಿ ಇಂದು ಮಹಾರಾಷ್ಟ್ರದ ಮಾಜಿ ಸಿಎಂ ದೇವೇಂದ್ರ ಫಡ್ನವಿಸ್‌ರನ್ನು ಭೇಟಿಯಾದ ರಮೇಶ್ ಜಾರಕಿಹೊಳಿ.. ಈ ಮೂಲಕ ಪ್ರಕರಣ ಮುಗಿದ ಕೂಡಲೇ ಕ್ಯಾಬಿನೆಟ್ ಸೇರ್ಪಡೆಯಾಗಲು ಈಗಿನಿಂದಲೇ ತಾಲೀಮು ಆರಂಭಿಸಿದ್ದಾರೆ ಎನ್ನಲಾಗಿದೆ.

The post ರಾಜಕಾರಣದಲ್ಲಿ ದಿಢೀರ್ ಸಕ್ರಿಯರಾದ್ರಾ ರಮೇಶ್ ಜಾರಕಿಹೊಳಿ.. ಫಡ್ನವಿಸ್ ಭೇಟಿಯಾಗಿದ್ದೇಕೆ..? appeared first on News First Kannada.

Source: newsfirstlive.com

Source link