ರಾಜಕಾರಣ ಮಾಡ್ತಾ ಕುಳಿತರೆ ಜಿಲ್ಲೆಯಲ್ಲಿ ಏನೂ ಅಭಿವೃದ್ಧಿ ಮಾಡೋಕಾಗಲ್ಲ -ಸುಮಲತಾ

ರಾಜಕಾರಣ ಮಾಡ್ತಾ ಕುಳಿತರೆ ಜಿಲ್ಲೆಯಲ್ಲಿ ಏನೂ ಅಭಿವೃದ್ಧಿ ಮಾಡೋಕಾಗಲ್ಲ -ಸುಮಲತಾ

ಮಂಡ್ಯ: ರಾಜಕಾರಣ ಮಾಡ್ತಾ ಕುಳಿತರೆ ನಮ್ಮ ಜಿಲ್ಲೆಯಲ್ಲಿ ಏನು ಅಭಿವೃದ್ಧಿ ಮಾಡಕ್ಕೆ ಆಗಲ್ಲಾ ಅಂತ ಮಂಡ್ಯದಲ್ಲಿ ಸಂಸದೆ ಸುಮಲತಾ ಅಂಬರೀಶ್ ಹೇಳಿಕೆ ನೀಡಿದ್ದಾರೆ.

ಸರ್ಕಾರನಾದ್ರೂ ನಡೆಸಲಿ.. O&M, ಖಾಸಗಿಯವರಾದ್ರೂ ನಡೆಸಲಿ, ನನ್ನದು ಒಂದೇ ನಿಲುವು ಮೈ ಶುಗರ್ ಕಾರ್ಖಾನೆ ಆರಂಭಿಸೋದು. 2 ವರ್ಷ ಆಗ್ತಿದೆ ಓಪನ್ ಮಾಡ್ಸಿ, ಬರಿ ನಾವು ಮಾತು ಕೇಳ್ತಿದ್ದೇವೆ. ಪ್ರತಿಭಟನೆ ಮಾಡ್ತಾರೆ, ಹೊರಗಡೆ 20 ಜನ ವಿರೋಧ ಮಾಡ್ತಾರೆ. 20 ಜನರ ಮಾತು ಕೇಳಿದ್ರೆ ನೂರಾರು ಜನ ರೈತರು ನಷ್ಟಕ್ಕೀಡಾಗಿದ್ದಾರೆ. ಯಾರು ಉತ್ತರ ಹೇಳ್ತಾರೆ? ರೈತರ ಜವಾಬ್ಧಾರಿ ಯಾರು ತಗೊಳ್ತಾರೆ..? ಅಂತ ಸುಮಲತಾ ಪ್ರಶ್ನಿಸಿದ್ರು.

ಅಲ್ಲದೇ, ಇದರಿಂದ ಯಾರಿಗೆ ಒಳ್ಳೆಯದಾಗಬೇಕು ಅಂತ ಯೋಚನೆ ಮಾಡಬೇಕು. ರಾಜಕಾರಣ ಮಾಡ್ತಾ ಕೂತರೆ ಜಿಲ್ಲೆಯಲ್ಲಿ ಏನೂ ಮಾಡಕ್ಕಾಗಲ್ಲ. 20 ವರ್ಷ ಮೈ ಶುಗರ್ ಕಾರ್ಖಾನೆ ಬಂದ್ ಮಾಡಿದ್ರೇ ಯಾರು ಪ್ರತಿಭಟನೆ ಮಾಡಲ್ಲ. ಕಾರ್ಖಾನೆ ಪ್ರಾರಂಭ ಮಾಡಬೇಕು ಅಂದಾಗ ಪ್ರತಿಭಟನೆಗೆ ಕೂರುವ ಕೆಲ ಜನ ಇದ್ದಾರೆ. ಇದರಲ್ಲಿ ಅವರ ಉದ್ದೇಶ ಏನು ಅಂತ ನಿಮಗೆ ಗೊತ್ತಾಗಬೇಕು ಅಂತ ಹೇಳಿದ್ರು.

ಇನ್ನೂ ಮನ್ಮುಲ್ ಹಗರಣದ ವಿಚಾರದ ಬಗ್ಗೆ ಮಾತಾಡಿದ ಅವ್ರು, ನಾನು ಮಂಡ್ಯಕ್ಕೆ ಬಂದಿಲ್ಲಾ ಆದ್ರೆ ಮಾಹಿತಿ ಪಡೆದುಕೊಂಡಿದ್ದೇನೆ. ಡಿಸಿ, ಎಸ್​ಪಿ, ಸಚಿವರ ಬಳಿಯೂ ಫೋನ್​ನಲ್ಲಿ ಮಾತನಾಡಿದ್ದೇನೆ ಎಂದರು. ನಾನು ಮಾಧ್ಯಮದ ಮುಂದೆ ಕಾಣಿಸಿಕೊಂಡಿಲ್ಲ ಅಷ್ಟೇ. ನಾನು ಕೆಲಸ ಏನು ಮಾಡ್ಬೇಕೋ ಮಾಡ್ತಿದ್ದೀನಿ. ಮೀಡಿಯಾ ಮುಂದೆ ನಿಂತು ಭಾಷಣ ಮಾಡಿ ಪ್ರಚಾರ ಗೀಟಿಸಿಕೊಳ್ಳೋದು ನನಗೆ ಇಷ್ಟ ಇಲ್ಲ. ಎಲ್ಲಿದ್ರೂ ಕೆಲಸ ಮಾಡಬೇಕು ಅಷ್ಟೇ, ಸರ್ಕಾರಕ್ಕೂ ಪತ್ರ ಬರೆದಿದ್ದೇನೆ.. ಅವರಿಂದ ಉತ್ತರ ಸಹ ಬಂದಿದೆ. ಇದು ರಾಜ್ಯ ಸರ್ಕಾರಕ್ಕೆ ಸಂಬಂಧಿಸಿದ ವಿಷಯ, ಆದ್ರೂ ನನ್ನ ಕಡೆಯಿಂದ ನನ್ನ ಕೆಲಸ ಮಾಡ್ತಿದ್ದೇನೆ ಎಂದರು.

ರಾಜಕಾರಣವಾಗಿ ಕಾಂಮೇಟ್ ಮಾಡಲ್ಲ. ರಾಜಕಾರಣ ಸ್ವಲ್ಪ ಸುಮ್ಮನಿದ್ರೇ ಎಲ್ಲಾರು ಉದ್ದಾರ ಆಗ್ತಾರೆ. ಎಲ್ಲಾ ವಿಷಯಕ್ಕೂ ರಾಜಕಾರಣ ತಂದಿರೋದಕ್ಕೆ ನಾವು ಕಷ್ಟದಲ್ಲಿದ್ದೇವೆ. ಮನ್ಮುಲ್ ಹಗರಣದ ತನಿಖೆಯಾಗಲಿ, ತಪ್ಪಿತಸ್ಥರ ವಿರುದ್ದ ಕ್ರಮ ವಹಿಸಲಿ ಅಂತ ಹೇಳಿದ್ರು.

 

The post ರಾಜಕಾರಣ ಮಾಡ್ತಾ ಕುಳಿತರೆ ಜಿಲ್ಲೆಯಲ್ಲಿ ಏನೂ ಅಭಿವೃದ್ಧಿ ಮಾಡೋಕಾಗಲ್ಲ -ಸುಮಲತಾ appeared first on News First Kannada.

Source: newsfirstlive.com

Source link