ರಾಜಕೀಯಕ್ಕೆ ಬರಲು ಆಹ್ವಾನ ಕೊಟ್ಟ ಶ್ರೀರಾಮುಲು, ಈ ಬಗ್ಗೆ ಸ್ಪಷ್ಟ ನಿಲುವು ಹಂಚಿಕೊಂಡ ಜನಾರ್ದನ ರೆಡ್ಡಿ | Sri ramulu invites janardhana reddy for politics bellary


ರಾಜಕೀಯಕ್ಕೆ ಬರಲು ಆಹ್ವಾನ ಕೊಟ್ಟ ಶ್ರೀರಾಮುಲು, ಈ ಬಗ್ಗೆ ಸ್ಪಷ್ಟ ನಿಲುವು ಹಂಚಿಕೊಂಡ ಜನಾರ್ದನ ರೆಡ್ಡಿ

ರಾಜಕೀಯಕ್ಕೆ ಬರಲು ಆಹ್ವಾನ ಕೊಟ್ಟ ಶ್ರೀರಾಮುಲು, ಈ ಬಗ್ಗೆ ಸ್ಪಷ್ಟ ನಿಲುವು ಹಂಚಿಕೊಂಡ ಜನಾರ್ದನ ರೆಡ್ಡಿ

ಬಳ್ಳಾರಿ: ಮಾಜಿ ಸಚಿವ ಜನಾರ್ದನ ರೆಡ್ಡಿ(Janardhana Reddy) ರಾಜಕೀಯ ರಂಗಪ್ರವೇಶದ ಸುಳಿವು ನೀಡಿದ್ದಾರೆ. ತಾವು ಸ್ಪರ್ಧೆ ಮಾಡಿದ್ರೇ ಗೆಲ್ಲೋ ಅವಕಾಶಗಳಿರೋ ಕ್ಷೇತ್ರದ ಪಟ್ಟಿಯನ್ನು ತೆರೆದಿಟ್ಟಿದ್ದಾರೆ. ರಾಜಕೀಯ ಬೇಡ ಎನ್ನುತ್ತಲೇ ತಾವು ಸ್ಪರ್ಧೆ ಮಾಡೋ ಕ್ಷೇತ್ರಗಳ ಪಟ್ಟಿಯ ಬಗ್ಗೆ ಹೇಳಿದ್ರು. ನನಗೆ ಬಳ್ಳಾರಿ, ಗಂಗಾವತಿ, ಕೊಪ್ಪಳ, ಯಲಬುರ್ಗಾ, ಬೆಂಗಳೂರಿನ ಕೆ.ಆರ್.ಪುರಂ, ಬಿಟಿಎಂ ಲೇಔಟ್, ಕೋಲಾರದಲ್ಲಿ ಸ್ಪರ್ಧಿಸುವಂತೆ ಡಿಮ್ಯಾಂಡ್ ಮಾಡ್ತಿದ್ದಾರೆ ಎಂದು ಜನಾರ್ದನ ರೆಡ್ಡಿ ರಾಜಕೀಯ ರಂಗಪ್ರವೇಶದ ಸುಳಿವು ನೀಡಿದ್ದಾರೆ.

ನನ್ನ ಸಹೋದರರು ಶಾಸಕರಾಗಿದ್ದಾರೆ, ನಾನೂ ಶಾಸಕನಿದ್ದಂತೆ. ನನ್ನ ಮಿತ್ರ ಶ್ರೀರಾಮುಲು ಬಳ್ಳಾರಿ ಉಸ್ತುವಾರಿಯಾಗಿದ್ದಾರೆ. ಅವರು ಮಂತ್ರಿ ಆದರೆ ನಾನು ಕೂಡ ಮಂತ್ರಿಯಾದಂತೆ. ನಾನು ಕೇವಲ ರಾಜಕೀಯಕ್ಕಾಗಿ ಬಳ್ಳಾರಿಗೆ ಬಂದಿಲ್ಲ. ಬಳ್ಳಾರಿಯನ್ನು ಅಭಿವೃದ್ಧಿ ಮಾಡುವುದಕ್ಕಾಗಿ ಬಂದಿದ್ದೇನೆ. ಬಳ್ಳಾರಿಯಲ್ಲಿ ಇನ್ನೊಂದೆರಡು ವರ್ಷದಲ್ಲಿ ಕ್ರಿಕೆಟ್ ವರ್ಲ್ಡ್‌ಕಪ್ ನಡೆಯುವ ಮಟ್ಟಕ್ಕೆ ಬಳ್ಳಾರಿ ಅಭಿವೃದ್ಧಿ ಮಾಡುವೆ. ಈ ಹಿಂದೆ ನಾನು ಹೇಳಿದ ಕೆಲಸಗಳು ವೇಗವಾಗಿ ನಡೀತಿತ್ತು. ಈಗ ಆಗುತ್ತಿಲ್ಲ ಎಂದು ಸಚಿವ ಶ್ರೀರಾಮುಲು ಹೇಳಿದ್ದಾರೆ. ಹೀಗಾಗಿ ಚಿಂತೆ ಮಾಡಬೇಡ ಎಂದು ರಾಮುಲುಗೆ ತಿಳಿಸಿದ್ದೇನೆ ಎಂದು ಬಳ್ಳಾರಿಯಲ್ಲಿ ಮಾಜಿ ಸಚಿವ ಜನಾರ್ದನ ರೆಡ್ಡಿ ತಾವು ರಾಜಕೀಯಕ್ಕೆ ಮತ್ತೆ ಎಂಟ್ರಿ ಕೊಡುವ ಬಗ್ಗೆ ಆಸೆ ವ್ಯಕ್ತಪಡಿಸಿದ್ದಾರೆ.

ಇನ್ನು ಮತ್ತೊಂದೆಡೆ ಜನಾರ್ದನ ರೆಡ್ಡಿ ಕಾಲದಲ್ಲಿ ಅಭಿವೃದ್ಧಿ ಕೆಲಸಗಳು ಆಗುತ್ತಿತ್ತು. ಅವರು ಮಾಡಿರುವಷ್ಟು ಅಭಿವೃದ್ಧಿ ಕೆಲಸ ನನ್ನಿಂದ ಆಗಿಲ್ಲ ಎಂದು ಬಳ್ಳಾರಿಯಲ್ಲಿ ಉಸ್ತುವಾರಿ ಸಚಿವ ಬಿ.ಶ್ರೀರಾಮುಲು ಹೇಳಿಕೆ ನೀಡಿದ್ದಾರೆ. ಖಾಸಗಿ ಕಾರ್ಯಕ್ರಮದಲ್ಲಿ ಮಾತನಾಡಿದ ಸಚಿವ ಶ್ರೀರಾಮುಲು, ಜನಾರ್ದನ ರೆಡ್ಡಿ ಹೊಗಳಿ, ಸಕ್ರೀಯ ರಾಜಕೀಯಕ್ಕೆ ಬರಲು ಆಹ್ವಾನ ನೀಡಿದ್ದಾರೆ. ಜನಾರ್ದನ ರೆಡ್ಡಿ ಕಾಲದಲ್ಲಿ ಅಭಿವೃದ್ಧಿ ಕೆಲಸಗಳು ಆಗುತ್ತಿತ್ತು. ಅವರು ಮಾಡಿರುವಷ್ಟು ಅಭಿವೃದ್ಧಿ ಕೆಲಸ ನನ್ನಿಂದ ಆಗಿಲ್ಲ. ಕ್ಯಾಬಿನೆಟ್‌ನಲ್ಲಿ ಜನಾರ್ದನ ರೆಡ್ಡಿ ಕೇಳಿದ ಕೆಲಸ ಆಗುತ್ತಿತ್ತು. ಜನಾರ್ದನ ರೆಡ್ಡಿಗೆ ಇರುವಷ್ಟು ಶಕ್ತಿ ನನಗೆ ಈಗ ಇಲ್ಲ. ನಾನು 34 ಸಚಿವರಲ್ಲಿ ಒಬ್ಬನಾಗಿದ್ದೇನೆ ಅಷ್ಟೇ. ಗಟ್ಟಿಯಾಗಿ ಮಾತಾಡಿದ್ರೆ ಏನಾಗುತ್ತೋ ಎಂಬ ಭಯವಿದೆ. ಹೀಗಾಗಿ ನಿಮ್ಮ ಸಹಕಾರ ಬೇಕಾಗಿದೆ ಎಂದ ಶ್ರೀರಾಮುಲು, ರಾಜಕೀಯಕ್ಕೆ ಬರುವಂತೆ ಜನಾರ್ದನ ರೆಡ್ಡಿಗೆ ಆಹ್ವಾನ ನೀಡಿದ್ದಾರೆ.

TV9 Kannada


Leave a Reply

Your email address will not be published.