ಚೆನ್ನೈ: ಪಂಚರಾಜ್ಯಗಳ ಚುನಾವಣೆಗೂ ಮುನ್ನ ಪರಪ್ಪನ ಅಗ್ರಹಾರದಿಂದ ಬಿಡುಗಡೆಗೊಂಡು ರಾಜಕೀಯಕ್ಕೆ ಬರುವುದಿಲ್ಲ ಎಂದಿದ್ದ ಜಯಲಲಿತಾ ಆಪ್ತೆ ಶಶಿಕಲಾ ಇದೀಗ ಮತ್ತೊಮ್ಮೆ ರಾಜಕೀಯಕ್ಕೆ ಎಂಟ್ರಿ ಕೊಡೋ ಸೂಚನೆ ನೀಡುವ ಮೂಲಕ ಸಂಚಲನ ಮೂಡಿಸಿದ್ದಾರೆ.

ಸೋಷಿಯಲ್ ಮೀಡಿಯಾದಲ್ಲಿ ಎಐಎಡಿಎಂಕೆ ಕೇಡರ್​ ಜೊತೆಗೆ ಶಶಿಕಲಾ ಫೋನ್​​ನಲ್ಲಿ ಮಾತನಾಡಿರುವ ಆಡಿಯೋ ಸಂಭಾಷಣೆ ವೈರಲ್ ಆಗಿದೆ. ಆಡಿಯೋದಲ್ಲಿ.. ನಾನು ಖಂಡಿತ ಬರುತ್ತೇನೆ. ಈ ಕೊರೊನಾ ವೈರಸ್​ ಪರಿಸ್ಥಿತಿ ಸ್ವಲ್ಪ ಸುಧಾರಿಸಲಿ ಎಂದು ಹೇಳಿದ್ದಾರೆ ಎನ್ನಲಾಗಿದೆ. ಅಲ್ಲದೇ.. ಡೋಂಟ್ ವರಿ.. ನಾನು ವಾಪಸ್ ಬರ್ತೇನೆ.. ಪಕ್ಷವನ್ನ ಸರಿಪಡಿಸೋಣ.. ಧೈರ್ಯದಿಂದಿರಿ.. ಕೊರೊನಾ ಸೋಂಕು ಮುಗಿಯುತ್ತಲೇ ನಾನು ವಾಪಸ್ ಬರ್ತೇನೆ ಎಂದು ಶಶಿಕಲಾ ಆಡಿಯೋದಲ್ಲಿ ಮಾತನಾಡಿದ್ದಾರೆ ಎನ್ನಲಾಗಿದೆ.

ಇನ್ನು ಆಡಿಯೋ ಕುರಿತು ಅಮ್ಮಾ ಮುನ್ನೇತ್ರ ಕಳಗಂ ಮೂಲಗಳು ಹರಿದಾಡುತ್ತಿರುವ ಆಡಿಯೋ ಅಸಲಿ ಆಡಿಯೋ ಆಗಿದ್ದು ಪಕ್ಷದ ಬೆಳವಣಿಗೆಗಳನ್ನು ಅವರು ಹತ್ತಿರದಿಂದ ಗಮನಿಸ್ತಿದ್ದಾರೆ, ಕೆಲವೇ ತಿಂಗಳಲ್ಲಿ ಒಂದು ನಿರ್ಧಾರ ತೆಗೆದುಕೊಳ್ಳಲಿದ್ದಾರೆ ಎಂದು ಮಾಹಿತಿ ನೀಡಿವೆ.

ಇದನ್ನೂ ಓದಿ: ಸಕ್ರಿಯ ರಾಜಕಾರಣಕ್ಕೆ ನಿವೃತ್ತಿ ಘೋಷಿಸಿದ ಶಶಿಕಲಾ ನಟರಾಜನ್

The post ರಾಜಕೀಯಕ್ಕೆ ಮತ್ತೆ ಎಂಟ್ರಿ ಕೊಡ್ತಾರಾ ಶಶಿಕಲಾ? ಪಾರ್ಟಿ ಸದಸ್ಯರಿಗೆ ಹಿಂಟ್ ಕೊಟ್ಟ ಚಿನ್ನಮ್ಮ appeared first on News First Kannada.

Source: newsfirstlive.com

Source link