ಬೆಂಗಳೂರು: ಐಪಿಎಸ್​ ಐಎಎಸ್​ ಅಧಿಕಾರಿಗಳು ರಾಜಕೀಯಕ್ಕೆ ಎಂಟ್ರಿ ಆಗೋದು ಇತ್ತೀಚೆಗೆ ಕಾಮನ್.. ಆದ್ರೆ, ಎಂಟ್ರಿಯಾದ ಕೆಲವೇ ದಿನಗಳಲ್ಲಿ ಮಾಜಿ ಐಎಪಿಎಸ್ ಅಧಿಕಾರಿ ಅಣ್ಣಾಮಲೈ ತಮಿಳುನಾಡಿನಲ್ಲಿ ತಮ್ಮದೇ ಛಾಪು ಮೂಡಿಸಿದ್ದಾರೆ. ಈಗ ಅಣ್ಣಾಮಲೈ ಹಾದಿಯನ್ನೇ ತುಳಿಯಲು ರಾಜ್ಯದ ಮತ್ತೊಬ್ಬ ಐಪಿಎಸ್​ ಅಧಿಕಾರಿ ಸಿದ್ಧವಾಗಿದ್ದಾರೆ ಅನ್ನೋ ಸುದ್ದಿ ಸದ್ದು ಮಾಡ್ತಿದೆ!

ಅಣ್ಣಾಮಲೈ ಹಾದಿ ತುಳಿಯುತ್ತಾರಾ ರವಿ ಚೆನ್ನಣ್ಣನವರ್​?
ಅಣ್ಣಾಮಲೈ.. ಕರ್ನಾಟಕದ ಸಿಂಗಮ್ ಅಂತಲೇ ಖ್ಯಾತಿ ಗಳಿಸಿದ್ದ ಖಡಕ್​ ಐಪಿಎಸ್​ ಅಧಿಕಾರಿ.. ಆದ್ರೆ, ಒಂದು ದಿನ ತಮ್ಮ ಖಾಕಿ ಬಟ್ಟೆಗೆ ಗುಡ್​​ ಬೈ ಹೇಳಿ ಪಾಲಿಟಿಕ್ಸ್​​ಗೆ ಎಂಟ್ರಿ ಕೊಟ್ರು.. ಕಳೆದ ತಮಿಳುನಾಡು ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಿ ಕಡಿಮೆ ಅಂತರದಿಂದ ಸೋಲುಂಡ ಅಣ್ಣಾಮಲೈ ಪಕ್ಷಕ್ಕಾಗಿ ದುಡಿಯುವ ಮಾತು ಕೊಟ್ಟಿದ್ರು.. ಸದ್ಯ, ತಮಿಳುನಾಡು ಪಾಲಿಟಿಕ್ಸ್​​ನಲ್ಲಿ ಌಕ್ಟೀವ್​ ಆಗಿರುವ ಅವರು ಆ ರಾಜ್ಯದ ಕಮಲ ಪಾಳಯದ ಸಾರಥಿಯಾಗಿದ್ದಾರೆ.

ಇಷ್ಟೆಲ್ಲಾ ನಾವ್​ ಯಾಕ್​ ಹೇಳ್ತಿದ್ದೀವಿ ಅಂದ್ರೆ, ಅಣ್ಣಾಮಲೈ ಕರ್ನಾಟಕದಿಂದಲೇ ಗುರುತಿಸಿಕೊಂಡಂಥ ಅಧಿಕಾರಿ.. ಈಗ ಅವರಂತೆಯೇ ರಾಜ್ಯದ ಮತ್ತೊಬ್ಬ ರಾಜಕೀಯಕ್ಕೆ ಎಂಟ್ರಿ ಕೊಡ್ತಾರೆ ಎಂಬ ಗುಮಾನಿಗಳು ಎಬ್ಬಿದೆ. ಅವರೇ ರವಿ ಡಿ ಚೆನ್ನಣ್ಣನವರ್​​ ಹೌದು.. ಐಪಿಎಸ್​ ಅಧಿಕಾರಿ ರವಿ ಡಿ ಚೆನ್ನಣ್ಣನವರ್​ ಅಣ್ಣಾಮಲೈ ರೀತಿಯೇ ರಾಜಕೀಯಕ್ಕೆ ಎಂಟ್ರಿ ಕೊಡ್ತಾರಾ ಎಂಬ ಪ್ರಶ್ನೆಗಳು ಮೂಡಿವೆ.

ರಾಜಕೀಯಕ್ಕೆ ರವಿ ಚೆನ್ನಣ್ಣನವರ್​!?
ಈಗಾಗಲೇ ಅಣ್ಣಾಮಲೈ ಬಿಜೆಪಿ ಸೇರ್ಪಡೆಯಾಗಿದ್ದು ತಮಿಳುನಾಡು ರಾಜ್ಯಾಧ್ಯಕ್ಷರಾಗಿದ್ದಾರೆ. ಈ ಮಧ್ಯೆ ರವಿ ಚೆನ್ನಣ್ಣನವರ್​ ನಡೆ ಚರ್ಚೆಗೆ ಗ್ರಾಸವಾಗಿದ್ದು, ಮುಂದಿನ ಚುನಾವಣೆಗೆ ಪದಾರ್ಪಣೆ ಮಾಡ್ತಾರೆ ಅಂತಾ ಹೇಳಲಾಗ್ತಿದೆ. ಅದಕ್ಕಾಗಿ ಐಪಿಎಸ್​ ಅಧಿಕಾರಿ ಹಲವು ಮಠಗಳ ಯಾತ್ರೆ ಕೈಗೊಂಡಿದ್ದಾರೆ. ಚಿತ್ರದುರ್ಗದ ಬಸವ ಮಾಚಿದೇವ ಮಹಾಸ್ವಾಮಿಗಳನ್ನ ಭೇಟಿ ಮಾಡಿರುವ ಚೆನ್ನಣ್ಣನವರ್, ಕಾಗಿನೆಲೆ ಪೀಠದ ನಿರಂಜನಾನಂದಪುರಿ ಶ್ರೀಗಳ ಆಶೀರ್ವಾದವನ್ನೂ ಪಡೆದಿದ್ದಾರೆ.

ಹರಿಹರ ಪೀಠದ ವಚನಾನಂದ ಶ್ರೀಗಲು, ಬೋವಿ ಪೀಠದ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿವನ್ನೂ ಚೆನ್ನಣ್ಣನವರ್ ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ. ಮುಂದಿನ ಚುನಾವಣೆಯಲ್ಲಿ ಮೀಸಲು ಕ್ಷೇತ್ರದಿಂದ ಸ್ಪರ್ಧಿಸುವ ಇರಾದೆಯನ್ನ ರವಿಯವರು ಹೊಂದಿದ್ದಾರೆ ಎನ್ನಲಾಗ್ತಿದೆ.

ದೊಡ್ಡಬಳ್ಳಾಪುರ ಅಥವಾ ನೆಲಮಂಗಲ ಮೀಸಲು ಕ್ಷೇತ್ರಗಳ ಮೇಲೆ ಕಣ್ಣಿಟ್ಟಿದ್ದಾರೆ ಎನ್ನಲಾಗಿದೆ. ಒಟ್ಟಾರೆ, ರವಿ ಚೆನ್ನಣ್ಣನವರ್​ ಅವರ ಮಠಗಳ ಯಾತ್ರೆಯ ಹಿಂದೆ ಇಷ್ಟೆಲ್ಲಾ ಸುದ್ದಿಗಳು ಗುಲ್ಲೆದ್ದಿವೆ. ಆದ್ರೆ, ತಮ್ಮ ರಾಜಕೀಯ ಎಂಟ್ರಿಯ ಊಹಾಪೋಹಗಳ ಬಗ್ಗೆ ಖುದ್ದಿ ಅವರೇ ಸ್ಪಷ್ಟನೆ ನೀಡಬೇಕಿದೆ.

The post ರಾಜಕೀಯಕ್ಕೆ ರವಿ ಚೆನ್ನಣ್ಣನವರ್? -ಗುಮಾನಿ ಹುಟ್ಟಿಸಿದ IPS ಅಧಿಕಾರಿಯ ‘ಮಠಗಳ ಯಾತ್ರೆ’ appeared first on News First Kannada.

Source: newsfirstlive.com

Source link