ರಾಜಕೀಯಕ್ಕೆ ವಿದಾಯ ಹೇಳಿದ ರಜಿನಿ.. ಅನ್ನಾತೆ ಶೂಟಿಂಗ್​ನಲ್ಲಿ ಬ್ಯುಸಿ

ರಾಜಕೀಯಕ್ಕೆ ವಿದಾಯ ಹೇಳಿದ ರಜಿನಿ.. ಅನ್ನಾತೆ ಶೂಟಿಂಗ್​ನಲ್ಲಿ ಬ್ಯುಸಿ

ಚೆನ್ನೈ: ರಾಜಕೀಯ ಪಕ್ಷ ಪ್ರಾರಂಭಿಸುತ್ತೇನೆಂದು ಘೋಷಿಸುವ ಮೂಲಕ ತಮಿಳುನಾಡು ರಾಜಕೀಯದಲ್ಲಿ ಹೊಸ ಅಲೆ ಎಬ್ಬಿಸುವ ಭರವಸೆ ಮೂಡಿಸಿದ್ದ ಸೌತ್ ಸೂಪರ್​​​ಸ್ಟಾರ್ ರಜಿನಿಕಾಂತ್ ಅನಾರೋಗ್ಯದ ಕಾರಣ ನೀಡಿ ರಾಜಕೀಯಕ್ಕೆ ಇತ್ತೀಚೆಗೆ ನಿವೃತ್ತಿ ಘೋಷಿಸಿದರು.
ರಾಜಕೀಯದ ಆಟದಿಂದ ದೂರವುಳಿದ ರಜಿನಿಕಾಂತ್ ಇದೀಗ ಮತ್ತೆ ಸಿನಿಮಾ ಶೂಟಿಂಗ್​ಗಳಲ್ಲಿ ಬ್ಯುಸಿಯಾಗ್ತಿದ್ದಾರೆ. ಕೊರೊನಾ ಲಾಕ್​ಡೌನ್​ನಿಂದಾಗಿ ಅರ್ಧಕ್ಕೆ ನಿಂತಿದ್ದ ಅನ್ನಾತೆ ಸಿನಿಮಾ ಶೂಟಿಂಗ್​ನಲ್ಲಿ ರಜಿನಿಕಾಂತ್ ಸದ್ಯ ಬ್ಯುಸಿಯಾಗಿದ್ದಾರೆ. ಚೆನ್ನೈನ ಫೋರಮ್ ಮಾಲ್​ನಲ್ಲಿ ಇಂದು ಅನ್ನಾತೆ ಸಿನಿಮಾದ ಶೂಟಿಂಗ್ ನಡೆಯುತ್ತಿದ್ದು ರಜಿನಿಕಾಂತ್ ಶೂಟಿಂಗ್​ನಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.
ಇತ್ತೀಚೆಗೆ ರಜಿನಿಕಾಂತ್ ಅನಾರೋಗ್ಯದಿಂದಾಗಿ ಕೆಲವು ಚೆಕ್​ಅಪ್​ಗಳನ್ನ ಮಾಡಿಸಿಕೊಳ್ಳಲು ಚೆನ್ನೈಗೆ ತೆರಳಿದ್ದರು. ಇದೇ ವರ್ಷದ ನವೆಂಬರ್ 4 ಕ್ಕೆ ಅನ್ನಾತೆ ಸಿನಿಮಾ ಬಿಡುಗಡೆಯಾಗಲಿದೆ ಎನ್ನಲಾಗಿದೆ.

The post ರಾಜಕೀಯಕ್ಕೆ ವಿದಾಯ ಹೇಳಿದ ರಜಿನಿ.. ಅನ್ನಾತೆ ಶೂಟಿಂಗ್​ನಲ್ಲಿ ಬ್ಯುಸಿ appeared first on News First Kannada.

Source: newsfirstlive.com

Source link