ದಾವಣಗೆರೆ: ಕಳೆದ ಮೂರು ವರ್ಷಗಳ ಹಿಂದೆ ಗ್ರಾಮೀಣ ಭಾಗದ ಜನರಿಗೆ ಉತ್ತಮ ಆರೋಗ್ಯ ಸೇವೆ ನೀಡಲು ನಿರ್ಮಿಸಲಾಗಿರುವ ಆರೋಗ್ಯ ಕೇಂದ್ರ ಮೂರು ವರ್ಷಗಳು ಕಳೆದರು ಆರಂಭವಾಗಿಲ್ಲ.

ಜಿಲ್ಲೆಯ ಚನ್ನಗಿರಿ ತಾಲೂಕಿನ ವಡ್ನಾಳ್​ ಗ್ರಾಮದಲ್ಲಿ 50 ಹಾಸಿಗೆಗಳ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಮೂರು ವರ್ಷಗಳ ಹಿಂದೆಯೇ ನಿರ್ಮಿಸಲಾಗಿದೆ. ಇದರಿಂದ ವಡ್ನಾಳ್, ಪಾಂಡೋಮಟ್ಟಿ, ಬೆಂಕಿಕೆರೆ ಸೇರಿ ಅನೇಕ ಹಳ್ಳಿಗಳಿಗೆ ಅನುಕೂಲವಾಗುತ್ತದೆ.

ಆದರೆ ರಾಜಕೀಯ ತಿಕ್ಕಾಟದಿಂದ ಇದುವರೆಗೂ ಆಸ್ಪತ್ರೆಯಲ್ಲಿ ಸೇವೆ ಆರಂಭವಾಗಿಲ್ಲ ಎಂಬ ಆರೋಪ ಕೇಳಿ ಬಂದಿದೆ.

ಮಾಜಿ ಶಾಸಕ ವಡ್ನಾಳ್ ರಾಜಣ್ಣ ಅವರಿಗೆ ಕೆಟ್ಟ ಹೆಸರು ತರಲು ಹಾಲಿ ಶಾಸಕರು ಈ ರೀತಿ ಮಾಡಿದ್ದಾರೆ ಎಂದು ವಡ್ನಾಳ್ ಸಹೋದರರ ಪುತ್ರ ಕಾಂಗ್ರೆಸ್ ಮುಖಂಡ ಅಶೋಕ್ ವಡ್ನಾಳ್ ಆರೋಪ ಮಾಡಿದ್ದಾರೆ. 2016ರಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ ಮಂಜೂರಾಗಿತ್ತು. ಸುಮಾರು 1 ಕೋಟಿ 83 ಲಕ್ಷ ವೆಚ್ಚದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ ನಿರ್ಮಿಸಲಾಗಿದೆ. ಆದರೆ ಇದು ಮಾಜಿ ಶಾಸಕ ರಾಜಣ್ಣ ಅವರು ಊರು ವಡ್ನಾಳ್ ಆಗಿರುವುದರಿಂದ ಶಾಸಕರು ಮಲತಾಯಿ ಧೋರಣೆ ಮಾಡುತ್ತಿದ್ದಾರೆ ಎಂದು ಆರೋಪ ಮಾಡಿದ್ದಾರೆ.

ಕೊರೊನಾದಂತಹ ಸಂಕಷ್ಟ ಸಮಯದಲ್ಲಿ ಜನರು ಆಸ್ಪತ್ರೆ, ಬೆಡ್​, ವೈದ್ಯಕೀಯ ಸೌಲಭ್ಯಗಳಿಲ್ಲದೆ ಪರಡಾಟ ನಡೆಸುತ್ತಿದ್ದಾರೆ. ಆದರೆ ಒಂದು ಕೋಟಿ ರೂಪಾಯಿಗೂ ಅಧಿಕ ಹಣ ಖರ್ಚು ಮಾಡಿ ನಿರ್ಮಿಸಿರುವ ಆಸ್ಪತ್ರೆ ಇಂದಿಗೂ ಕಾರ್ಯಾರಂಭ ಮಾಡದಿರುವ ಬಗ್ಗೆ ಸಾರ್ವಜನಿಕ ವಲಯದಿಂದ ಅಸಮಾಧಾನ ಕೇಳಿ ಬಂದಿದೆ. ಆಸ್ಪತ್ರೆ ಆರಂಭಿಸಿದ್ದರೆ ಕೋವಿಡ್ ಸಂಕಷ್ಟ ಸಮಯದಲ್ಲಿ  ಬಳಸಿಕೊಳ್ಳಬಹುದಿತ್ತು ಎಂದು ಅಭಿಪ್ರಾಯ ಪಟ್ಟಿದ್ದಾರೆ.

 

The post ರಾಜಕೀಯ ಗುದ್ದಾಟಕ್ಕೆ 3 ವರ್ಷವಾದ್ರು ಓಪನ್ ಆಗ್ದೆ ಉಳಿತಾ ಕೋಟಿ ವೆಚ್ಚದ ಆರೋಗ್ಯ ಕೇಂದ್ರ..? appeared first on News First Kannada.

Source: newsfirstlive.com

Source link