ಬೆಂಗಳೂರು: ಬೊಮ್ಮಾಯಿ ಸರ್ಕಾರದ ವಿರುದ್ಧ ಕೇಳಿಬಂದ 40 ಪರ್ಸೆಂಟ್ ಆರೋಪ. ಈಗ ರಾಜಕೀಯ ತಿರುವು ಪಡೆದುಕೊಂಡಿದೆ. ಆಡಳಿತ ಮತ್ತು ವಿಪಕ್ಷಗಳ ನಡುವಿನ ಜಟಾಪಟಿಗೆ ಕಾರಣವಾಗಿದೆ. ಪರಿಷತ್ ಚುನಾವಣೆ ಹೊತ್ತಲ್ಲೇ ಬೊಮ್ಮಾಯಿ ಸರ್ಕಾರಕ್ಕೆ ಪರ್ಸೆಂಟ್ ಫೈಟ್ ಬಿಸಿ ತುಪ್ಪವಾಗಿದೆ. ಸರ್ಕಾರವನ್ನೇ ವಜಾಮಾಡಬೇಕು ಅಂತ ಕಾಂಗ್ರೆಸ್ ಆಗ್ರಹಿಸುತ್ತಿದೆ. ಇದರ ಬೆನ್ನಲ್ಲೇ ಪರ್ಸೇಂಟೇಜ್ ತನಿಖೆಗೆ ಆದೇಶ ಹೊರಬಿದ್ದಿದೆ.
ರಾಜ್ಯ ರಾಜಕರಣಲ್ಲಿ ಪರ್ಸೆಂಟೇಜ್ ವಿಚಾರ ಮತ್ತೆ ಮುನ್ನೆಲೆಗೆ ಬಂದಿದೆ. ಬೊಮ್ಮಾಯಿ ಸರ್ಕಾರದ ವಿರುದ್ಧ ಗಂಭೀರ ಆರೋಪ ಕೇಳಿ ಬಂದಿದೆ. ಗುತ್ತಿಗೆದಾರ ಸಂಘ ಪ್ರಧಾನಿ ಮೋದಿಗೆ ಪತ್ರ ಬರೆದಿದ್ದಾರೆ. ಟೆಂಡರ್ನಲ್ಲಿ ಸರ್ಕಾರ 40 ಪರ್ಸೆಂಟ್ ಕಮಿಷನ್ ಪಡೆಯುತ್ತಿದೆ ಅಂತಾ ದೂರಿದ್ದಾರೆ. ಗುತ್ತಿಗೆದಾರರ ಆರೋಪ ಈಗ ರಾಜಕೀಯ ತಿರುವು ಪಡೆದುಕೊಂಡಿದೆ.
ಯಾವಾಗ ಗುತ್ತಿಗೆದಾರರ ಸಂಘ ಸರ್ಕಾರದ ಮೇಲೆ ಆರೋಪ ಮಾಡ್ತೋ. ಇದನ್ನೇ ವಿಪಕ್ಷಗಳು ಅಸ್ತ್ರವಾಗಿ ಬಳಸಿಕೊಂಡವು. ರಾಜ್ಯಪಾಲರನ್ನು ಭೇಟಿ ಮಾಡಿದ ಕಾಂಗ್ರೆಸ್ ನಾಯಕರ ನಿಯೋಗ ಸರ್ಕಾರವನ್ನು ವಜಾಮಾಡುವಂತೆ ದೂರು ನೀಡಿದೆ. ಅಲ್ಲದೆ ಸುಪ್ರೀಂ ಕೋರ್ಟ್ ಜಡ್ಜ್ ಸಮ್ಮುಖದಲ್ಲಿ ತನಿಖೆಗೆ ಆಗ್ರಹಿಸಿದೆ.
ಹಾಗಾದ್ರೆ ಕರ್ನಾಟಕ ರಾಜ್ಯ ಗುತ್ತಿಗೆದಾರರ ಸಂಘ ಪ್ರಧಾನಿಗೆ ನೀಡಿದ ದೂರಿನಲ್ಲಿ ಏನಿದೆ ಅಂತ ನೋಡೋದಾದ್ರೆ.
ಕಾಮಗಾರಿ ಅರ್ಧಪಾಲು ಲಂಚಕ್ಕೆ
- ಆರೋಪ 1: ಅನುಮೋದನೆಗೂ ಮೊದಲು ಸಚಿವರಿಂದ ಲಂಚಕ್ಕೆ ಒತ್ತಾಯ
- ಆರೋಪ 2: ಟೆಂಡರ್ ಮೊತ್ತದ ಶೇ 5ರಷ್ಟು ಲಂಚಕ್ಕೆ ಸಚಿವರಿಂದ ಬೇಡಿಕೆ
- ಆರೋಪ 2: ಶೇ 2ರಷ್ಟು ತಮಗೆ ನೀಡುವಂತೆ ಕೆಲ ಸಂಸದರ ಕಿರುಕುಳ
- ಆರೋಪ 3: ಸ್ಥಳೀಯ ಜನಪ್ರತಿನಿಧಿಗಳಿಗೆ ಮುಂಗಡು ಲಂಚಕ್ಕೆ ಬೇಡಿಕೆ
- ಆರೋಪ 4: ಕಟ್ಟಡ ಕಾಮಗಾರಿಯಲ್ಲಿ ಶೇಕಡಾ 5ರಷ್ಟು ಲಂಚಕ್ಕೆ ಒತ್ತಡ
- ಆರೋಪ 5: ರಸ್ತೆ ಕಾಮಗಾರಿಗಳಲ್ಲಿ ಶೇ ಶೇಕಡಾ 10ರಷ್ಟು ಲಂಚಕ್ಕೆ ಒತ್ತಡ
- ಆರೋಪ 6: ವಿವಿಧ ಇಲಾಖೆಗಳ ಬಿಲ್ ಪಾವತಿ ಹಂತದಲ್ಲಿಯೂ ಅಕ್ರಮ
- ಆರೋಪ 7: ಹಣ ಬಿಡುಗಡೆ ಹಂತದಲ್ಲಿ 6% ರಿಂದ 8% ಲಂಚಕ್ಕೆ ಬೇಡಿಕೆ
- ಆರೋಪ 8: ಕೇಳಿದಷ್ಟು ಲಂಚ ಕೊಟ್ಟವರಿಗೆ ಮಾತ್ರ ಬಿಲ್ ಪಾವತಿ ವ್ಯವಸ್ಥೆ
ಕಾಂಗ್ರೆಸ್ ಪಕ್ಷದ ನಿಯೋಗ ಇಂದು ರಾಜ್ಯಪಾಲರನ್ನು ಭೇಟಿಮಾಡಿ, ಸಂವಿಧಾನದ 356ನೇ ಪರಿಚ್ಛೇದದಡಿ ರಾಷ್ಟ್ರಪತಿ ಆಳ್ವಿಕೆ ಹೇರಬೇಕು ಹಾಗೂ ರಾಜ್ಯ @BJP4Karnataka ಸರ್ಕಾರದ ಭ್ರಷ್ಟಾಚಾರದ ಬಗ್ಗೆ ಸುಪ್ರೀಂ ಕೋರ್ಟ್ ನ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ನ್ಯಾಯಾಂಗ ತನಿಖೆ ನಡೆಸಬೇಕು ಎಂದು ಮನವಿ ಮಾಡಿದ್ದೇವೆ. 1/4
#40%BJP pic.twitter.com/cbKtK7W5iG— Siddaramaiah (@siddaramaiah) November 25, 2021
ಪರ್ಸೆಂಟೇಜ್ ತನಿಖೆಗೆ ಆದೇಶಿಸಿದ ರಾಜ್ಯ ಸರ್ಕಾರ
ಪರ್ಸೆಂಟೇಜ್ ಬಾಂಬ್ ರಾಜಕೀಯ ತಿರುವು ಪಡೆದುಕೊಳ್ಳುತ್ತಿದ್ದಂತೆ ಸರ್ಕಾರ ಎಚ್ಚತ್ತುಕೊಂಡಿದೆ. ಪರ್ಸೆಂಟೇಜ್ ಆರೋಪದ ಬಗ್ಗೆ ತನಿಖೆ ನಡೆಸುವಂತೆ ಸಿಎಂ ಸೂಚನೆ ನೀಡಿದ್ದಾರೆ. ಸಿಎಂ ಸೂಚನೆಯಂತೆ ಸರ್ಕಾರದ ಮುಖ್ಯ ಕಾರ್ಯದರ್ಶಿ ಸಿ.ಎಸ್ ರವಿಕುಮಾರ್ ತನಿಖೆಗೆ ಆದೇಶಿಸಿದ್ದಾರೆ. ಜಲಸಂಪನ್ಮೂಲ ಇಲಾಖೆ ಅಪರ ಮುಖ್ಯಕಾರ್ಯದರ್ಶಿಗೆ ರಾಕೇಶ್ ಸಿಂಗ್ ತನಿಖೆ ಜವಾಬ್ದಾರಿ ನೀಡಿದ್ದಾರೆ. 10 ಕೋಟಿ ರೂಪಾಯಿ ಮೀರಿದ ಎಲ್ಲಾ ಟೆಂಡರ್ಗಳ ತನಿಖೆ ನಡಿಸಿ, ವರದಿ ನೀಡುವಂತೆ ಸೂಚನೆ ನೀಡಿದ್ದಾರೆ.
ಒಟ್ಟಿನಲ್ಲಿ ಪರ್ಸೆಂಟೇಜ್ ವಿಚಾರ ಆಡಳಿತ ಪಕ್ಷ-ವಿಪಕ್ಷಗಳ ನಡುವೆ ರಾಜಕೀಯ ಸಮರಕ್ಕೆ ಕಾರಣವಾಗಿದೆ. ಇದು ಪರಿಷತ್ ಚುನಾವಣೆ ಹೊತ್ತಲ್ಲೇ ರಾಜ್ಯ ಬಿಜೆಪಿ ಸರ್ಕಾರಕ್ಕೆ ಬಿಸಿ ತುಪ್ಪವಾಗಿದೆ. ಮುಂದೆ ಈ ಪರ್ಸೆಂಟೇಜ್ ಫೈಟ್ ಯಾವ ತಿರುವು ಪಡೆಯುತ್ತೋ, ಅಥವಾ ಕೇವಲ ಆರೋಪವಾಗಿಯೇ ಉಳಿಯುತ್ತೋ ಕಾದು ನೋಡಬೇಕಿದೆ.