ಕಲಬುರಗಿ: ಜಿಲ್ಲೆಯ ಜೇವರ್ಗಿ ತಾಲೂಕಿನ ಕೂಡಲಗಿ ಗ್ರಾಮದ ಬಳಿ ನಿನ್ನೆ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಶಾಂತಪ್ಪ ಕೂಡಲಗಿ ಸಹೋದರ ಹಣಮಂತ ಕೂಡಲಗಿ(40) ಎಂಬಾತನ ಕೊಲೆಯಾಗಿತ್ತು. ಈ ಪ್ರಕರಣ ಇದೀಗ ರಾಜಕೀಯ ತಿರುವು ಪಡೆದುಕೊಂಡಿದೆ.

ಹಣಮಂತ ಕೂಡಲಗಿಯನ್ನ ಕೊಲೆ ಮಾಡಿದ್ದರ ಜೊತೆಗೆ ಶಿವಕಾಂತ, ಕಿರಣ ಎಂಬುವರ ಮೇಲೂ ಮಾರಣಾಂತಿಕ ಹಲ್ಲೆ ನಡೆಸಲಾಗಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ಒಟ್ಟು 30 ಜನರ ಮೇಲೆ ಎಫ್​ಐಆರ್ ದಾಖಲಿಸಲಾಗಿದೆ. ಜೊತೆಗೆ ಬಿಜೆಪಿ ಮಾಜಿ ಶಾಸಕ ದೊಡ್ಡಪ್ಪಗೌಡ ಪಾಟೀಲ್ ನರಿಬೋಳ ಮತ್ತು ಸಹೋದರ ಬಸವರಾಜ್ ಪಾಟೀಲ್ ನರಿಬೋಳ ವಿರುದ್ಧವೂ ಕೇಸ್ ದಾಖಲಾಗಿದೆ. ಇವರ ಮೇಲೆ ಕೊಲೆಗೆ ಕುಮ್ಮಕ್ಕು ನೀಡಿರುವ ಆರೋಪ ಕೇಳಿಬಂದಿದ್ದು ಶರಣಬಸಪ್ಪ ಹೊಸಮನಿ ಎಂಬುವವರು ನೀಡಿದ ದೂರಿನ ಮೇಲೆ ಕೇಸ್ ದಾಖಲಿಸಲಾಗಿದೆ.

ಹಣಮಂತ ಕೂಡಲಗಿ ಕಾರ್​ನಲ್ಲಿ ತೆರಳುತ್ತಿದ್ದಾಗ ಕಾರ್​ನ್ನ ಅಡ್ಡಗಟ್ಟಿ ಕೊಚ್ಚಿ ಕೊಲೆ ಮಾಡಲಾಗಿತ್ತು. ನೆಲೋಗಿ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ.

The post ರಾಜಕೀಯ ತಿರುವು ಪಡೆದ ಜಿ.ಪಂ ಸದಸ್ಯನ ಸಹೋದರನ ಕೊಲೆ.. ಬಿಜೆಪಿ ಮಾಜಿ ಶಾಸಕನ ವಿರುದ್ಧ ಕೇಸ್ appeared first on News First Kannada.

Source: newsfirstlive.com

Source link