ರಾಜಕೀಯ ಬೆಳೆ ಬೇಯಿಸಿಕೊಳ್ಳಲು ಸಾವರ್ಕರ್​ ಹೆಸರು ಬಳಕೆ ಶೋಭೆಯಲ್ಲ: ಬಿವೈ ವಿಜಯೇಂದ್ರ | Savarkar was brought to the road and insulted by the Congress party: B.Y. Vijayendra


ಯಾರು ಏನ್ನ ಬೇಕಾದ್ರು ತಿನ್ನಬಹುದು ಅದಕ್ಕೆ ಸ್ವಾತಂತ್ರ್ಯ ಇದೆ. ನಾನು ಮಾಂಸ ತಿಂದು ಬಸವೇಶ್ವರ ದೇವಸ್ಥಾನಕ್ಕೆ ಹೋಗುತ್ತೇನೆ ಎನ್ನುವ ಬಂಡತನ ಯಾರೋ ಒಪ್ಪೋದಿಲ್ಲ. ನಮ್ಮ ನಾಡಿನಲ್ಲಿ ಒಂದು ಸಂಸ್ಕೃತಿ ಒಂದು ಪರಂಪರೆಯಿದೆ.

ರಾಜಕೀಯ ಬೆಳೆ ಬೇಯಿಸಿಕೊಳ್ಳಲು ಸಾವರ್ಕರ್​ ಹೆಸರು ಬಳಕೆ ಶೋಭೆಯಲ್ಲ: ಬಿವೈ ವಿಜಯೇಂದ್ರ

ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ


ಗದಗ: ಸಾವರ್ಕರ್​​ರನ್ನು ರಸ್ತೆಗೆ ತಂದು ಕಾಂಗ್ರೆಸ್ (Congress) ಪಕ್ಷದಿಂದ ಅಪಮಾನ ಮಾಡಲಾಗಿದೆ. ಹೀಗೆ ಅವಹೇಳನಕಾರಿಯಾಗಿ ನಡೆದುಕೊಳ್ಳುವುದು ಸರಿಯಲ್ಲ ಎಂದು ಗದಗದಲ್ಲಿ ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿಕೆ ನೀಡಿದರು. ರಾಜಕೀಯ ಬೆಳೆ ಬೇಯಿಸಿಕೊಳ್ಳಲು ರಸ್ತೆಗೆ ತಂದಿದ್ದು ಶೋಭೆಯಲ್ಲ. ಯಡಿಯೂರಪ್ಪಗೆ ಹೈಕಮಾಂಡ್ ಹೆಚ್ಚಿನ ಜವಾಬ್ದಾರಿ ಕೊಟ್ಟಿದೆ. ಸಂಪತ್‌ಗೆ 50 ಲಕ್ಷ ಆಮಿಷವೊಡ್ಡಿದ್ದಾರೆ ಎಂಬ ಆರೋಪ ವಿಚಾರವಾಗಿ ಪ್ರತಿಕ್ರಿಯೆ ನೀಡಿದ್ದು, ಕಾಂಗ್ರೆಸ್‌ನವರು ಪಾಪ ಆತಂಕದಲ್ಲಿದ್ದಾರೆ. ವಿಜಯದ ನಾಗಾಲೋಟದಲ್ಲಿದ್ದ ಕಾಂಗ್ರೆಸ್‌ಗೆ ಹಿನ್ನೆಡೆಯಾಗಿದೆ. ಇತ್ತೀಚೆಗೆ ನಡೆದ ರಾಜಕೀಯ ಬೆಳವಣಿಗೆಯಿಂದ ಆತಂಕ ಶುರುವಾಗಿದೆ ಎಂದು ಬಿ.ವೈ.ವಿಜಯೇಂದ್ರ ಹೇಳಿಕೆ ನೀಡಿದರು.

TV9 Kannada


Leave a Reply

Your email address will not be published.