‘ರಾಜಕೀಯ ಹಾಳು ಮಾಡಿದ್ದೀರಿ.. ಶಿಕ್ಷಣವನ್ನೂ ಹಾಳು ಮಾಡ್ಬೇಡಿ’ ಸಿದ್ದರಾಮಯ್ಯಗೆ ಬಿಸಿ ನಾಗೇಶ್ ತಪರಾಕಿ


ಉಡುಪಿ ಜಿಲ್ಲೆಯ ಕುಂದಾಪುರ ಸರ್ಕಾರಿ ಜೂನಿಯರ್ ಕಾಲೇಜಿಗೆ ಹಿಜಾಬ್ ಧರಿಸಿ ಬಂದ ಮುಸ್ಲಿಂ ವಿದ್ಯಾರ್ಥಿನಿಯರನ್ನ ಗೇಟ್​ನಲ್ಲಿಯೇ ತಡೆದ ಪ್ರಕರಣ ಭಾರೀ ಚರ್ಚೆಗೆ ಗ್ರಾಸವಾಗ್ತಿದೆ.

ಇದೇ ವಿಚಾರಕ್ಕೆ ಶಿಕ್ಷಣ ಸಚಿವ ಬಿಸಿ ನಾಗೇಶ್ ಪ್ರತಿಕ್ರಿಯಿಸಿ.. ದೇಶದಲ್ಲಿ ಒಂದಿಷ್ಟು ಪಕ್ಷ ಕೇವಲ ರಾಜಕೀಯ ಮಾಡೋಕೆ ಹುಟ್ಟಿವೆ. ಅವರಿಗೆ ರಾಷ್ಟ್ರದ ಪ್ರಗತಿ, ಏಕತೆ ಬಗ್ಗೆ ಕಾಳಜಿ ಇಲ್ಲ. ಮತಕ್ಕಾಗಿ ಯಾರಿಗೆ ಬೇಕಾದ್ರೂ ಬೆಂಬಲ ನೀಡ್ತಾರೆ. ಅವರ ಹಿತಕ್ಕಾಗಿ ಯಾರು ಹೇಗಾದರೂ ಇರೋಕೆ ಬಿಡ್ತಾರೆ ಎಂದು ಕಾಂಗ್ರೆಸ್​ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

‘ಇದು ಬಿಜೆಪಿ ಕುತಂತ್ರ’ ಅನ್ನೋ ಸಿದ್ದರಾಮಯ್ಯರ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು.. ಅವರು ಸ್ವತಃ ವಕೀಲರಾಗಿದ್ದರೂ ಜನರ ದಿಕ್ಕು ತಪ್ಪಿಸುತ್ತಿದ್ದಾರೆ. ಅದು ಬೇಸರದ ಸಂಗತಿಯಾಗಿದೆ. 2018ರಲ್ಲಿ ಅವರು ಸಿಎಂ ಆಗಿದ್ದಾಗ ರೂಲ್ ಮಾಡಿದ್ರು. ರೂಲ್ 11 ಅನ್ವಯ ಯೂನಿಫಾರಂ‌ ಬಗ್ಗೆ ಅವರಿಗೆ ನನಗಿಂತ ಹೆಚ್ಚು ಗೊತ್ತಿದೆ. ಬಿಜೆಪಿ ಸರ್ಕಾರ ಬಂದಾಗ ಯುನಿಫಾರ್ಮ್​ ಬಂದಿಲ್ಲ. ರಘುಪತಿ ಭಟ್ ಬಗ್ಗೆ ಏಕವಚನ ಪ್ರಯೋಗ ಅವರಿಗೆ ಶೋಭೆ ತರೋದಿಲ್ಲ. ಪ್ರಜಾಪ್ರಭುತ್ವ ಬಗ್ಗೆ‌ ಅವರಿಗೆ ಇರೋ ಕಾಳಜಿ ತೋರುತ್ತದೆ. ಅವರು ರಾಜಕೀಯ ಹಾಳು ಮಾಡಿದ್ದಾಗಿದೆ, ಶಿಕ್ಷಣ ಕ್ಷೇತ್ರ ಹಾಳುಮಾಡಬೇಡಿ. ಯೂನಿಫಾರಂ ಸಮಾನತೆ ಹಾಗೂ ಭ್ರಾತೃತ್ವಕ್ಕಾಗಿ ಮಾಡಿದ್ದು ಎಂದು ವಾಗ್ದಾಳಿ ನಡೆಸಿದ್ದಾರೆ.

ಏನಿದು ಪ್ರಕರಣ..?
ಕುಂದಾಪುರ ಸರ್ಕಾರಿ ಜೂನಿಯರ್ ಕಾಲೇಜಿನ 26 ವಿದ್ಯಾರ್ಥಿನಿಯರು ಹಿಜಾಬ್ ಧರಿಸಿ ಕಾಲೇಜಿಗೆ ಬರುತ್ತಿದ್ದರು. ಕಾಲೇಜಿನ ಗೇಟ್ ಬಳಿ ಬರುತ್ತಿದ್ದಂತೆಯೇ ಪ್ರಿನ್ಸಿಪಾಲ್ ಬಿ.ಜಿ.ರಾಮಕೃಷ್ಣ ಅವರು ವಿದ್ಯಾರ್ಥಿನಿಯರನ್ನ ತಡೆದು, ಸಮವಸ್ತ್ರ ಮಾತ್ರ ಧರಿಸಿ ಒಳಬರುವಂತೆ ಸೂಚನೆ ನೀಡಿದರು. ಆಗ ವಿದ್ಯಾರ್ಥಿನಿಯರು ಪ್ರಿನ್ಸಿಪಾಲ್ ಜೊತೆ ಕ್ಲಾಸ್​ಗೆ ಪ್ರವೇಶ ನೀಡುವಂತೆ ಪರಿಪರಿಯಾಗಿ ಬೇಡಿಕೊಂಡು ಕಣ್ಣೀರು ಇಟ್ಟಿದ್ದರು. ಕೊನೆಗೂ ವಿದ್ಯಾರ್ಥಿನಿಯರ ಒತ್ತಾಯಕ್ಕೆ ಮಣಿಯದ ಪ್ರಾಂಶುಪಾಲರು ಕಾಲೀಜಿನ ಗೇಟ್ ಹಾಕಿಸಿದ್ದರು.

ಕೇಸರಿ ಶಾಲು ಹೊದ್ದ ಬಂದ ವಿದ್ಯಾರ್ಥಿಗಳು
ಮತ್ತೊಂದು ಕಡೆ ಮುಸ್ಲಿಂ ವಿದ್ಯಾರ್ಥಿನಿಯರು ಹಿಜಾಬ್ ಧರಿಸಿ ಕಾಲೇಜಿಗೆ ಬಂದಿರೋದಕ್ಕೆ ಪ್ರತಿಯಾಗಿ ಕುಂದಾಪುರದ ಭಂಡಾರ್ಕರ್ಸ್​​ ಕಾಲೇಜಿನ ವಿದ್ಯಾರ್ಥಿಗಳು ಕೇಸರಿ ಶಾಲು ಧರಿಸಿ, ಶ್ರೀರಾಮ್ ಘೋಷಣೆ ಕೂಗಿದರು.

News First Live Kannada


Leave a Reply

Your email address will not be published.