ರಾಜಧಾನಿಯಲ್ಲಿ ಮುಂದುವರಿದ ಮಳೆ ಕಾಟ: ಮೆಜೆಸ್ಟಿಕ್ ಬಳಿ ಕೆಎಸ್ಆರ್​​ಟಿಸಿ ಬಸ್ ಮೇಲೆ ಬಿದ್ದ ಮರ | Rain havoc continues in bangalore huge tree fell on ksrtc bus near majestic

ರಾಜಧಾನಿಯಲ್ಲಿ ಮುಂದುವರಿದ ಮಳೆ ಕಾಟ: ಮೆಜೆಸ್ಟಿಕ್ ಬಳಿ ಕೆಎಸ್ಆರ್​​ಟಿಸಿ ಬಸ್ ಮೇಲೆ ಬಿದ್ದ ಮರ

ರಾಜಧಾನಿಯಲ್ಲಿ ಮುಂದುವರಿದ ಮಳೆ ಕಾಟ: ಮೆಜೆಸ್ಟಿಕ್ ಬಳಿ ಕೆಎಸ್ಆರ್​​ಟಿಸಿ ಬಸ್ ಮೇಲೆ ಬಿದ್ದ ಮರ

ಬೆಂಗಳೂರು: ರಾಜಧಾನಿಯಲ್ಲಿ ಮಳೆ ಕಾಟ ಮುಂದುವರಿದಿದೆ. ಅನಾಹುತಗಳು ಅಲ್ಲಲ್ಲಿ ಘಟಿಸುತ್ತಿವೆ. ಸಾವು ನೋವಿನ ಪ್ರಕರಣಗಳು ವರದಿಯಾಗಿಲ್ಲವಾದರೂ, ಆಸ್ತಿಪಾಸ್ತಿ ನಷ್ಟ, ಜನತೆಗೆ ಕಷ್ಟಗಳು ಒದಗಿಬರುತ್ತಿವೆ. ಮೆಜೆಸ್ಟಿಕ್ ಬಳಿ ಕೆಎಸ್ಆರ್​​ಟಿಸಿ ಬಸ್ ಮೇಲೆ ಮರ ಬಿದ್ದಿದೆ.

ಗುರುವಾರ ರಾತ್ರಿ 10 ಗಂಟೆಯಲ್ಲಿ ಬಸ್ ಬೆಂಗಳೂರಿನಿಂದ ಮಂಗಳೂರಿಗೆ ಹೊರಟಿತ್ತು. KSRTC ಬಸ್ ಮೇಲೆ ಮರ ಉರುಳಿಬಿದ್ದ ಪರಿಣಾಮ ಬಸ್‌ನ ಕಿಟಿಕಿ ಗಾಜು ಜಖಂಗೊಂಡಿದೆ. ಬಸ್‌ನಲ್ಲಿದ್ದ 15 ಪ್ರಯಾಣಿಕರು ಅಪಾಯದಿಂದ ಪಾರಾಗಿದ್ದಾರೆ. ಪೊಲೀಸರು ಮತ್ತು ಬಿಬಿಎಂಪಿ ಸಿಬ್ಬಂದಿ ಮರ ತೆರವುಗೊಳಿಸಿದ್ದಾರೆ.

(rain havoc continues in bangalore huge tree fell on ksrtc bus near majestic)

TV9 Kannada

Leave a comment

Your email address will not be published. Required fields are marked *