ಸೂಪರ್ ಸ್ಟಾರ್ ಮಹೇಶ್ ಬಾಬು ಮತ್ತು ಇಂಡಿಯನ್ ಮೋಸ್ಟ್ ಟ್ಯಾಲೆಂಟೆಡ್ ಡೈರೆಕ್ಟರ್ ರಾಜಮೌಳಿ ಜೊತೆ ಸಿನಿಮಾ ಮಾಡುತ್ತಿರುವ ವಿಚಾರ ಗೊತ್ತೇ ಇದೆ. ಆರ್ಆರ್ಆರ್ ಸಿನಿಮಾ ಮುಗಿದ ನಂತರ ರಾಜಮೌಳಿ ಮತ್ತು ಮಹೆಶ್ ಹೊಸ ಸಿನಿಮಾ ಸೆಟ್ಟೇರೋದು ಪಕ್ಕಾ ಆಗಿದೆ.
ಆ ವಿಚಾರ ಎಲ್ಲರಿಗೂ ಗೊತ್ತಿರೋದೆ. ಆದರೆ ಈಗ ಹೊಸದೊಂದು ಬಾಂಬ್ ಟಾಲಿವುಡ್ ಮತ್ತು ಕಾಲಿವುಡ್ ಅಂಗಳದಲ್ಲಿ ಹಲ್ಚಲ್ ಎಬ್ಬಿಸಿದೆ. ಅದೇನಂದ್ರೆ ರಾಜಮೌಳಿ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಮಹೇಶ್ ನಾಯಕನಟನಾಗಿ ಕಾಣಿಸಿಕೊಳ್ಳುತ್ತಿರುವ ಇನ್ನು ಹೆಸರಿಡದ ಸಿನಿಮಾದ ವಿಶೇಷ ಪಾತ್ರಕ್ಕೆ ತಮಿಳಿನ ಸ್ಟಾರ್ ಹೀರೋ ಚಿಯಾನ್ ವಿಕ್ರಮ್ ಸಿನಿಮಾದ ಪ್ರಮುಖ ಪಾತ್ರವೊಂದರಲ್ಲಿ ಕಾಣಿಸಿಕೊಳ್ಳಲಿದ್ದಾರಂತೆ. ಈ ವಿಚಾರವಾಗಿ ಮಾತನಾಡಲು ವಿಕ್ರಂ ಅತಿ ಶೀಘ್ರದಲ್ಲಿ ರಾಜಮೌಳಿಯನ್ನು ಭೇಟಿ ಕೂಡ ಮಾಡಲಿದ್ದಾರಂತೆ.
ಚಿತ್ರದ ಕಥೆ ಬಗ್ಗೆ ಯಾವುದೇ ಗುಟ್ಟು ಬಿಟ್ಟು ಕೊಡದೆ , ರಾಜಮೌಳಿ ತಂದೆ ಕಥೆ ಬರೆದಿದ್ದು ಖಾಸಗಿ ವಾಹಿನಿಯ ಸಂದರ್ಶನವೊಂದರಲ್ಲಿ ರಿವೀಲ್ ಆಗಿದೆ. ಈ ಕಾಂಬಿನೇಷನ್ನಲ್ಲಿ ಮೂಡಿಬರುತ್ತಿರುವ ಸಿನಿಮಾ ಆಫ್ರಿಕಾದ ಕಾಡಿನ ಬಗ್ಗೆ ಇರಲಿದೆ ಎಂಬ ಸಣ್ಣ ಸುಳಿವನ್ನು ನೀಡಿದ್ದಾರೆ. ಆದರೆ ಸಿನಿಮಾದ ಬಗ್ಗೆ ಮತ್ತಷ್ಟು ಮಾಹಿತಿ ತಿಳಿದುಕೊಳ್ಳಬೇಕಾದರೆ ನಾವು ಇನ್ನಷ್ಟು ದಿನ ಕಾಯಲೇ ಬೇಕಿದೆ. ಒಂದು ವೇಳೆ ರಾಜಮೌಳಿ ಚಿತ್ರಕ್ಕೆ ವಿಕ್ರಮ್ ಆಯ್ಕೆ ಆಗಿದ್ದೇ ಆದರೆ, ಹೊಸ ಇತಿಹಾಸ ಸೃಷ್ಟಿ ಮಾಡೋದರಲ್ಲಿ ಯಾವುದೇ ಅನುಮಾನವೇ ಇಲ್ಲ ಅಂತಿದ್ದಾರೆ ಸಿನಿ ಪಂಡಿತರು.
The post ರಾಜಮೌಳಿ ಡೈರೆಕ್ಷನ್: ಮಹೇಶ್ ಬಾಬು ಎದುರು ಬಣ್ಣ ಹಚ್ತಾರಾ ತಮಿಳು ನಟ ವಿಕ್ರಮ್? appeared first on News First Kannada.