ರಾಜಮೌಳಿ ದಾರಿ ಹಿಡಿದ ಬೋಯಪಾಟಿ ಶ್ರೀನು.. ಸೆಟ್ಟೇರುತ್ತಾ BBB..?


ರಾಜಮೌಳಿ ಸಿನಿಮಾಗಳು ಸೃಷ್ಟಿಸಿದ ದಾಖಲೆಯ ದಾರಿಗಳು ಇದೆಯಲ್ಲ ಅವು ಎಷ್ಟೋ ನಿರ್ದೇಶಕರಿಗೆ ಹೊಸ ಹೊಸ ರಾಹದಾರಿ ಇದ್ದಂಗೆ. ಜಕ್ಕಣ್ಣನ ಸಿನಿಮಾಗಳು ಹೊಸ ದಾರಿಯನ್ನ ಸೃಷ್ಟಿಸುತ್ತವೆ ಇನ್ನುಳಿದ ಹೊಸ ಸಿನಿಮಾಗಳು ಆ ದಾರಿಗಳಲ್ಲೇ ಸಾಗುತ್ತವೆ..

ಭಾರತೀಯ ಚಿತ್ರರಂಗದಲ್ಲಿ ತನ್ನ ರೆಕಾರ್ಡನೇ ತಾನೇ ಅಳಿಸಿ ಹೊಸ ದಾಖಲೆಗಳನ್ನ ಸೃಷ್ಟಿಸುತ್ತಾ ಮೆರವಣಿಗೆ ಮಾಡ್ತಿರೋರು ಎಸ್.ಎಸ್.ರಾಜಮೌಳಿ. ಮಗಧೀರ ಸಿನಿಮಾ ಬರೋ ತನಕ ರಾಜಮೌಳಿ ಸಿನಿಮಾ ಟಾಲಿವುಡ್ ಸಿನಿಮಾ ರಂಗಕ್ಕೆ ಮಾತ್ರ ಸೀಮಿತವಾಗಿತ್ತು. ಆದ್ರೆ ಮಗಧೀರ ಚಿತ್ರದ ನಂತರ ರಾಜಮೌಳಿ ಮಾಡಿದ್ದೇಲ್ಲವು ಪ್ಯಾನ್ ಇಂಡಿಯಾ ಸಿನಿಮಾಗಳೇ. ಮಾಡಿದ್ರೇ ರಾಜಮೌಳಿ ಸಿನಿಮಾ ರೇಂಜ್​​ಗೆ ಮಾಡಬೇಕು ಅನ್ನೋ ಮಾತುಗಳು ಈಗ ಎಲ್ಲಾ ಚಿತ್ರರಂಗದಲ್ಲಿ ಕೇಳಿ ಬರುತ್ತದೆ. ಈ ಕಾರಣಕ್ಕೆ ರಾಜಮೌಳಿ ದಾರಿಯನ್ನ ಅನೇಕ ನಿರ್ದೇಶಕ ನಿರ್ಮಾಪಕರು ಹಿಡಿಯೋದುಂಟು.

ಈಗ ವಿಷಯವೆನಂದ್ರೆ ರಾಜಮೌಳಿ ದಾರಿಯನ್ನ ಟಾಲಿವುಡ್​​ನ ಸ್ಟಾರ್ ಡೈರೆಕ್ಟರ್ ಒಬ್ಬರು ಹಿಡಿತೌವ್ರೆ. ಬಾಹುಬಲಿ ಸಿನಿಮಾಗಳ ನಂತರ ರಾಜಮೌಳಿ ಏನ್ ಮಾಡ್ತಾರೇ ಅಂತ ಎಲ್ಲರೂ ಅಂದಾಜಿಸುತ್ತಿದ್ದಾಗ ಥ್ರಿಬಲ್ ಆರ್ ಅಂತ ಟೈಟಲ್ ಅನೌನ್ಸ್ ಮಾಡಿದ್ರು.. ಇದೇನಿದು ಥ್ರಿಬಲ್ ಆರ್ ಅಂತ ಕೇಳುತ್ತಿದ್ದಾಗಲೇ ರಾಜಮೌಳಿ , ರಾಮ್ ಚರಣ್ ತೇಜ , ತಾರಾಕ್ ರಾಮ್ ಅಂದ್ರು. ಈ ಮೂರು ಆರ್​ಗಳು ಸೇರಿದಾಗ ಥ್ರಿಬಲ್ ಆರ್ ಆಗುತ್ತೆ , ಥ್ರಿಬಲ್ ಆರ್ ಒಳ ಅರ್ಥ ರೌದ್ರ ರಣ ರುಧಿರ ಅಂತ ಸಾರಿದ್ರು. ಈಗ ಈ ದಾರಿಯನ್ನ ಟಾಲಿವುಡ್​​ನ ಮತ್ತೊಬ್ಬ ಡೈರೆಕ್ಟರ್ ಹಿಡಿಯುತ್ತಿದ್ದಾರೆ. ಆ ಡೈರೆಕ್ಟರ್ ಹೆಸರು ಬೊಯಪಾಟಿ ಶ್ರೀನು.

ಬೊಯಪಾಟಿ ಶ್ರೀನು. ಟಾಲಿವುಡ್ ಸಿನಿಮಾ ರಂಗದ ಮಾಸ್ ಡೈರೆಕ್ಟರ್. ಮೊನ್ನೆ ಬಾಲಯ್ಯನ ಜೊತೆ ಸೇರಿ ಅಖಂಡ ಸಿನಿಮಾ ಮಾಡಿ ಗೆದ್ದಿದ್ದಾರೆ. ಈ ಖುಷಿಯಲ್ಲಿ ಈಗ ರಾಜಮೌಳಿ ಸಕ್ಸಸ್ ಫಾರ್ಮುಲವನ್ನ ಹಿಡಿಯಲ್ ಸ್ಕೇಚ್ ಹಾಕಿದ್ದಾರೆ. ಅದೇನೆಂದರೆ ಮಲ್ಟಿ ಸ್ಟಾರರ್ ಸಿನಿಮಾ. ಮೌಳಿ RRR ಮಾಡಿದ್ರೆ ಶ್ರೀನು BBB ಮಾಡಲು ಸ್ಕೇಚ್ ಹಾಕೋವ್ರೆ. ಮಲ್ಟಿಸ್ಟಾರರ್ ಸಿನಿಮಾವೊಂದಕ್ಕೆ ಶ್ರೀನು ಪ್ಲಾನ್ ಮಾಡಿದ್ದಾರೆ. ಬೊಯಪಾಟಿ ಶ್ರೀನು ಅವರ ಸಿನಿ ಸ್ಕೆಚ್​​ನ ಪ್ರಕಾರ ಮಲ್ಟಿಸ್ಟಾರರ್​ಗಳು ಯಾಱರು ಅನ್ನೋ ಪ್ರಶ್ನೆಗೆ ಉತ್ತರ ಬಾಲಯ್ಯ.

ಹೌದು ನಂದಮೂರಿ ಬಾಲಕೃಷ್ಣ ಹಾಗೂ ಅಲ್ಲು ಅರ್ಜುನ್ ಅವರನ್ನ ಒಂದೇ ಸಿನಿಮಾದಲ್ಲಿ ನಿಲ್ಲಿಸಲು ಪ್ಲಾನ್ ಮಾಡಿದ್ದಾರೆ ಶ್ರೀನು. ಬಾಲಯ್ಯ ಮತ್ತು ಅಲ್ಲು ಅರ್ಜುನ್ ಜೊತೆ ಈಗಾಗಲೇ ಕೆಲಸ ಮಾಡಿಸಿ ಸೈ ಅನ್ನಿಸಿಕೊಂಡಿದ್ದಾರೆ ಶ್ರೀನು. ಮಲ್ಟಿಸ್ಟಾರರ್ ಸಿನಿಮಾವನ್ನ ಮಾಡುವ ಯೋಚನೆಯಲ್ಲಿ ನಿರ್ದೇಶಕ ಬೊಯಪಾಟಿ ಶ್ರೀನು ಇದ್ದಾರೆ ಎನ್ನಲಾಗಿದೆ. ಈ ವಿಚಾರವನ್ನ ಟಾಲಿವುಡ್ ಪಂಡಿತರು ರಾಜಮೌಳಿ RRR.. ಬೊಯಪಾಟಿ ಶ್ರೀನು BBB ಅಂತ ಬಣ್ಣಿಸಲು ಶುರುಹಚ್ಚಿಕೊಂಡಿದ್ದಾರೆ.

News First Live Kannada


Leave a Reply

Your email address will not be published. Required fields are marked *