ರಾಜಮೌಳಿ ‘RRR’ನಲ್ಲಿ ಸದ್ದಿಲ್ಲದೆ ಕಾಣಿಸಿಕೊಂಡ್ರಾ ಸ್ಯಾಂಡಲ್​ವುಡ್​ ಈ ನಟ?


ರಾಜಮೌಳಿ ಸಿನಿಮಾಗಳೆಂದರೆ ಅಲ್ಲಿ ಸಾಕಷ್ಟು ಕಲಾವಿದರ ದಂಡೇ ಇರುತ್ತದೆ. ರಾಜಮೌಳಿ ಸಿನಿಮಾಗಳು ಪ್ಯಾನ್​ ಇಂಡಿಯಾ ಸಿನಿಮಾಗಳಾಗಿರುವುದರಿಂದ ಆಯಾ ಭಾಷೆಗೆ ಸಂಬಂಧ ಪಟ್ಟ ನಟರನ್ನು ಹಾಕಿಕೊಂಡು ಸಿನಿಮಾ ಮಾಡುವುದು ರಾಜಮೌಳಿಯ ಬ್ಯುಸಿನೆಸ್​ ತಂತ್ರದ ಒಂದು ಭಾಗ.

ಈ ಹಿಂದೆ ರಾಜಮೌಳಿ ”ಈಗ” ಸಿನಿಮಾದಲ್ಲಿ ಸುದೀಪ್​ ಸ್ಟಾರ್​ ವಿಲನ್​ ಆಗಿ ಮಿಂಚಿದ್ದಲ್ಲದೆ, ಪ್ಯಾನ್​ ಇಂಡಿಯಾ ಸ್ಟಾರ್​ ಆಗಿ ಲಾಂಚ್ ಕೂಡ​ ಆಗಿದ್ದರು. ನಂತರ ರಾಜಮೌಳಿಯ ‘ಬಾಹುಬಲಿ-1’ ಲ್ಲಿ ಕೂಡ ಸುದೀಪ್​ ಇದ್ದು, ಅಸ್ಲಾಂ ಖಾನ್​ ಪಾತ್ರದಲ್ಲಿ ಮತ್ತೊಮ್ಮೆ ತಮ್ಮ ನಟನೆಯನ್ನು ಪ್ರೂ ಮಾಡಿದ್ದರು. ಆದರೆ ”ಬಾಹುಬಲಿ-2” ರಲ್ಲಿ ಸುದೀಪ್​ ಇರುತ್ತಾರೆ ಎಂದು ಸಾಕಷ್ಟು ಮಂದಿ ಊಹಿಸಿದ್ದರು. ಆದರೆ ಸುದೀಪ್​ ಇರಲಿಲ್ಲ. ನಂತರ ಸೆಟ್ಟೇರಿದ ‘ಆರ್ ಆರ್ ಆರ್’ ಸಿನಿಮಾದಲ್ಲಿ ರಾಮ್​ ಚರಣ್​, ಜ್ಯೂ. ಎನ್​ ಟಿ ಆರ್, ಅಜಯ್ ದೇವಗನ್​, ಆಲಿಯಾ ಭಟ್​, ಶ್ರೀಯಾ ಶರಣ್, ಹೀಗೆ ಬೇರೆ ಬೇರೆ ಭಾಷೆಯ ಸ್ಟಾರ್​ ಕಲಾವಿದರ ದಂಡೇ ಇದೆ. ಆದರೆ ಕನ್ನಡದ ಯಾವ ಸ್ಟಾರ್​ ನಟರು ಇಲ್ಲದೆ ಇರುವುದು ಕೊಂಚ ಬೇಸರ ಉಂಟು ಮಾಡಿತ್ತು.

ಇದನ್ನೂ ಓದಿ:‘ಥ್ರಿಬಲ್​ ಆರ್’​ನಲ್ಲಿ ಐಟಂ ಸಾಂಗ್​? ರಾಜಮೌಳಿಗೆ ಫ್ಯಾನ್ಸ್​ ಕೇಳ್ತಿರೋ ಪ್ರಶ್ನೆಯೇನು ಗೊತ್ತಾ?

ಆದರೆ ಈಗ ಸಿಕ್ಕಿರೋ ಮಾಹಿತಿ ಪ್ರಕಾರ ”ಥ್ರಿಬಲ್​ ಆರ್”​ ನಲ್ಲಿ ಕನ್ನಡದ ಸ್ಟಾರ್ ನಟರಿಲ್ಲದಿದ್ದರು, ಪ್ರತಿಭಾವಂತ ನಟ ಅರುಣ್​ ಸಾಗರ್​ ‘ಥ್ರಿಬಲ್​ ಆರ್’ ಸಿನಿಮಾದ ಒಂದು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರಂತೆ. ಚಿತ್ರದ ಪ್ರಾರಂಭದಲ್ಲೇ ಕಾಣಿಸಿಕೊಳ್ಳುವ ಅರುಣ್​ ಸಾಗರ್, ಪಾತ್ರ ತುಂಬಾ ಚಿಕ್ಕದಾದರೂ, ಬಹಳ ಮುಖ್ಯ ಪಾತ್ರವಂತೆ. ಈ ವಿಚಾರದ ಬಗ್ಗೆ ರಾಜಮೌಳಿ ಎಲ್ಲು ಹೇಳದೆ ಇದ್ರೂ, ಮುಂದಿನ ದಿನಗಳಲ್ಲಿ ಸತ್ಯ ಹೊರ ಬೀಳಲಿದೆ.

News First Live Kannada


Leave a Reply

Your email address will not be published. Required fields are marked *