ರಾಜರತ್ನನ ಎಂಟ್ರಿಗೆ ಯೂಟ್ಯೂಬ್ ಶೇಕ್.. ಜೇಮ್ಸ್ ಅಬ್ಬರಕ್ಕೆ ಹಳೆ ರೆಕಾರ್ಡ್ಸ್​​ ಎಲ್ಲ ಉಡೀಸ್​..!


ಜೇಮ್ಸ್ ಟೀಸರ್​ ಅಬ್ಬರಕ್ಕೆ ಯೂಟ್ಯೂಬ್ ಶೇಕ್ ಶೇಕ್. ರಾಜರತ್ನನ ಎಂಟ್ರಿಗೆ ದಾಖಲೆಗಳೆಲ್ಲಾ ಪೀಸ್ ಪೀಸ್. ಇನ್ನು ಪವರ್​ ಸ್ಟಾರ್​ ಟೀಸರ್ ನೋಡಿ ಬಾಹುಬಲಿ ಪ್ರಭಾಸ್ ಬಹುಪರಾಕ್ ಜೇಮ್ಸ್ ಅಂದ್ರಾವೆ. ಹಾಗಾದ್ರೆ, ಜೇಮ್ಸ್ ಮಾಡಿದ ದಾಖಲೆ ಏನು? ಟೀಸರ್ ನೋಡಿ ಟಾಲಿವುಡ್ ರೆಬೆಲ್ ಸ್ಟಾರ್ ಏನಂದ್ರು? ಅಪ್ಪು ಅಭಿಮಾನಿ ದೇವರುಗಳು ಇಷ್ಟ ಪಟ್ಟು ಹೆಮ್ಮೆ ಪಡೋ ಸ್ಟೋರಿ ಇದೋ ನಿಮ್ಮ ಮುಂದೆ.

ಪವರ್​ಸ್ಟಾರ್ ಪುನೀತ್ ರಾಜ್​ಕುಮಾರ್​ ಕೊನೆಯದಾಗಿ ನಟಿಸಿರುವ ಜೇಮ್ಸ್ ಚಿತ್ರದ ಟೀಸರ್ ರಿಲೀಸ್ ಆಗಿದ್ದು, ಭರ್ಜರಿ ರೆಸ್ಪಾನ್ಸ್ ಪಡೆದುಕೊಂಡಿದೆ. ಅಪ್ಪು ಎಂಟ್ರಿ ನೋಡಿದ ಅಭಿಮಾನಿಗಳು ಬೋಲೋ ಬೋಲೋ ಜೇಮ್ಸ್ ಅಂತಾ ಜೈಕಾರ ಹಾಕ್ತಿದ್ದಾರೆ. ಒಮ್ಮೆ ನೋಡಿದರೆ ಮತ್ತೊಮ್ಮೆ, ಮತ್ತೊಮ್ಮೆ ನೋಡಿದರೆ ಮಗದೊಮ್ಮೆ ನೋಡುತ್ತಾ ನೋಡುತ್ತಾ ರಾಜರತ್ನನ ಸಾಹಸವನ್ನ ಕಣ್ತುಂಬಿಸಿಕೊಳ್ಳುತ್ತಿದೆ ಅಪ್ಪು ಅಭಿಮಾನಿ ದೇವರಗಳ ಬಳಗ.

ಜೇಮ್ಸ್ ಎಂಟ್ರಿಗೆ ಹಳೆ ದಾಖಲೆಗಳೆಲ್ಲ ಮಟಾಶ್
ಕೇವಲ 24 ಗಂಟೆಗಳಲ್ಲೇ ಒಂದು ಕೋಟಿ ವ್ಯೂಸ್

ರಾಜರತ್ನನ ಅಬ್ಬರಕ್ಕೆ ಡಿಜಿಟಲ್ ಲೋಕದ ಹಳೆ ರೆಕಾರ್ಡ್ಸ್​​​​​​​​ಗಳು ಪೀಸ್ ಪೀಸ್ ಆಗಿದೆ. ಟೀಸರ್ ಬಿಡುಗಡೆಯಾದ 24 ಗಂಟೆಗಳಲ್ಲಿ 10 ಮಿಲಿಯನ್ ವೀವ್ಸ್ ಕಂಡಿದ್ದು, ಇದು ಸೋಶಿಯಲ್ ಸಮುದ್ರಲ್ಲಿ ಹೊಸ ದಾಖಲೆ ಎನ್ನಲಾಗಿದೆ.

ಪವರ್ ಫ್ಯಾನ್ಸ್ ಅಬ್ಬರಕ್ಕೆ ತಬ್ಬಿಬಾಯ್ತು ಯ್ಯೂಟ್ಯೂಬ್
ಬರಿ ಸ್ಯಾಂಪಲ್ ಅಷ್ಟೆ, ಮುಂದೈತೆ ದಾಖಲೆಗಳ ಹಬ್ಬ

ದೊಡ್ಮನೆ ಅಭಿಮಾನಿಗಳ ಸಂಭ್ರಮಕ್ಕೆ ಯ್ಯೂಟ್ಯೂಬ್​ ಕೂಡ ನಡುಗಿ ಹೋಗಿದೆ. ಜೇಮ್ಸ್ ಟೀಸರ್ ವೀಕ್ಷಣೆಯನ್ನು ಲೆಕ್ಕ ಹಾಕಲು ಸಾಧ್ಯವಾಗದೇ ಕೆಲ ಗಂಟೆಗಳ ಕಾಲ ಯ್ಯೂಟ್ಯೂಬ್ ಸ್ಟಕ್ ಆಗೋಗಿತ್ತು. ಇದನ್ನು ಕಂಡ ಪುನೀತ್ ಅಭಿಮಾನಿಗಳು ‘ಇದು ಬರಿ ಸ್ಯಾಂಪಲ್ ಅಷ್ಟೇ, ಮುಂದಿದೆ ಮಾರಿಹಬ್ಬ’ ಅಂತಿದ್ದಾರೆ.

ಮೊದಲಿನಿಂದಲೂ ರೆಕಾರ್ಡ್​ ಬ್ರೇಕ್ ಮಾಡಿಯೇ ಅಭ್ಯಾಸ
ಟ್ರೆಂಡ್ ಮುಂದುವರಿಸಿದ ‘ರಾಜರತ್ನ’ನ ಅಭಿಮಾನಿಗಳು

ಹಳೆ ರೆಕಾರ್ಡ್​ಗಳ ಬಗ್ಗೆ ಅಪ್ಪು ಫ್ಯಾನ್ಸ್ ತಲೆಕೆಡಿಸಿಕೊಳ್ಳಲ್ಲ. ಏಕಂದ್ರೆ, ಒಬ್ರು ರೆಕಾರ್ಡ್​ ಸೃಷ್ಟಿಸಿದ್ರೆ ಅದನ್ನ ಬ್ರೇಕ್ ಮಾಡೋದು ಪವರ್ ಸ್ಟಾರ್ ಅಭಿಮಾನಿಗಳ ಜಾಯಮಾನ. ಇದನ್ನೇ ಜೇಮ್ಸ್ ಟೀಸರ್ ಗಟ್ಟಿಯಾಗಿ ಹೇಳಿದೆ. ಅದನ್ನು ಚಾಚೂ ತಪ್ಪದೇ ಫ್ಯಾನ್ಸ್ ಫಾಲೋ ಮಾಡ್ತಿದ್ದಾರೆ.

News First Live Kannada


Leave a Reply

Your email address will not be published.