ಬೆಂಗಳೂರು: ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ ಆಕ್ಸಿಜನ್ ಕೊರತೆಯಿಂದ ರೋಗಿಗಳು ಸಾವನ್ನಪ್ಪಿದ ಬೆನ್ನಲ್ಲೇ ಸಂಸದ ಡಿ.ಕೆ. ಸುರೇಶ್​.. ಆರ್​. ಆರ್. ನಗರದ ರಾಜರಾಜೇಶ್ವರಿ ಮೆಡಿಕಲ್ ಕಾಲೇಜಿನಲ್ಲಿ 200 ಕ್ಕೂ ಹೆಚ್ಚು ಜನ ಆಕ್ಸಿಜನ್​ ಸಮಸ್ಯೆಯಿಂದ ಸಾವು ಬದುಕಿನ ಮಧ್ಯೆ ಹೋರಾಡುತ್ತಿದ್ದಾರೆ ಎಂದು ಸಿಎಂ ಬಿ.ಎಸ್. ಯಡಿಯೂರಪ್ಪ ಅವರಿಗೆ ಮನವಿ ಮಾಡಿಕೊಂಡಿದ್ದಾರೆ.

ಆರ್. ಆರ್. ನಗರದ ರಾಜರಾಜೇಶ್ವರಿ ಮೆಡಿಕಲ್ ಕಾಲೇಜಿನಲ್ಲಿ ಸಂಜೆ 5 ಗಂಟೆಗೆ ಆಕ್ಸಿಜನ್ ಮುಕ್ತಾಯ ಆಗ್ತಿದೆ. ಆಡಳಿತ ಮಂಡಳಿ ಈಗಾಗಲೇ ಜಿಲ್ಲಾಧಿಕಾರಿಗಳಿಗೂ ತಿಳಿಸಿದೆ. ನಾನು ಕೂಡ ಕರೆ ಮಾಡಿ ತಿಳಿಸಿದ್ದೇನೆ. ಆರೋಗ್ಯ ಕಾರ್ಯದರ್ಶಿಗಳಿಗೆ ಮುಖ್ಯ ಕಾರ್ಯದರ್ಶಿಗಳಿಗೆ ವಿಷಯ ತಿಳಿಸಿದ್ದೇನೆ. ಯವಿಟ್ಟು ಆಕ್ಸಿಜನ್ ವ್ಯವಸ್ಥೆ ಮಾಡಿಸಿ ಜನರ ಜೀವ ಉಳಿಸಿ ಮತ್ತೊಮ್ಮೆ ಚಾಮರಾಜನಗರದ ಘಟನೆ ರೀತಿಯಲ್ಲಿ ಇಲ್ಲಿ ಆಗುವುದು ಬೇಡ ಎಂದು ಮನವಿ ಮಾಡಿದ್ದಾರೆ.

The post ರಾಜರಾಜೇಶ್ವರಿ ಮೆಡಿಕಲ್ ಕಾಲೇಜಿನಲ್ಲಿ 200 ಜನರ ಪ್ರಾಣ ಅಪಾಯದಲ್ಲಿದೆ- ಡಿ.ಕೆ. ಸುರೇಶ್ ಮನವಿ appeared first on News First Kannada.

Source: newsfirstlive.com

Source link