ರಾಜಸ್ತಾನ ಮೂಲದ ನಟೋರಿಯಸ್ ಸೈಬರ್ ವಂಚಕನನ್ನು ಬಂಧಿಸಿದ ದಾವಣಗೆರೆ ಪೊಲೀಸ್​ | Davangere police arrested a notorious Cyber accused


ದಾವಣಗೆರೆ ಪೊಲೀಸರು ರಾಜಸ್ತಾನ ಮೂಲದ ನಟೋರಿಯಸ್ ಸೈಬರ್ ವಂಚಕ ಅಮನ್ ತಿವಾರಿಯನ್ನು ಬಂಧಿಸಿದ್ದಾರೆ.

ರಾಜಸ್ತಾನ ಮೂಲದ ನಟೋರಿಯಸ್ ಸೈಬರ್ ವಂಚಕನನ್ನು ಬಂಧಿಸಿದ ದಾವಣಗೆರೆ ಪೊಲೀಸ್​

ಸಾಂಧರ್ಬಿಕ ಚಿತ್ರ

ದಾವಣಗೇರೆ: ದಾವಣಗೆರೆ ಪೊಲೀಸರು ರಾಜಸ್ತಾನ ಮೂಲದ ನಟೋರಿಯಸ್ ಸೈಬರ್ ವಂಚಕ ಅಮನ್ ತಿವಾರಿಯನ್ನು ಬಂಧಿಸಿದ್ದಾರೆ.  ಆರೋಪಿ ರಕ್ಷಿತ್ ಎಂಬುವವರ ಫ್ಲಿಪ್ ಕಾರ್ಟ್ ಖಾತೆಯಿಂದ 45 ಸಾವಿರ ಎಗರಿಸಿದ್ದನು. ಈ ಕುರಿತು ದಾವಣಗೆರೆಯ ಸಿಇಎನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣ ಸಂಬಂಧ ಸೈಬರ್ ಕ್ರೈಂ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಬಂಧಿತ ಅಮಿನ್ ತಿವಾರಿಯಿಂದ 1ಲಕ್ಷದ 50 ಸಾವಿರ ನಗದು 4 ಮೊಬೈಲ್​ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಆರೋಪಿ ಓನ್ ಪಾಸ್ವರ್ಡ್ ಬಳಸುವವರನ್ನೇ ಟಾರ್ಗೆಟ್ ಮಾಡುತ್ತಿದ್ದನು. ಆರೋಪಿ ಅಮನ್ ತಿವಾರಿ ಜಿ ಮೇಲ್, ಫೇಸ್ ಬುಕ್, ಅಮೆಜಾನ್, ಫ್ಲಿಪ್ ಕಾರ್ಟ್ ಸೇರಿದಂತೆ ಎಲ್ಲಾ ಖಾತೆಗೂ ಒಂದೇ ಪಾಸ್ವರ್ಡ್ ಬಳಸುವವರನ್ನು ತನ್ನ  ಖೆಡ್ಡಾಗೆ ಕೆಡವಿಕೊಳ್ಳುತ್ತಿದ್ದನು. ಇದರಿಂದ ದಾವಣಗೆರೆ ಜನತೆ ಆನ್ ಲೈನ್ ಚೀಟಿಂಗ್ ನಿಂದ ರೋಸಿ ಹೋಗಿದ್ದರು.

ಅಕ್ರಮವಾಗಿ ಸಾಗುಸುತ್ತಿದ್ದ 17 ಟನ್ ಪಡಿತರ ಅಕ್ಕಿ ಜಪ್ತಿ

ಬೀದರ್: ಅಕ್ರಮವಾಗಿ ಸಾಗುಸುತ್ತಿದ್ದ 17 ಟನ್ ಪಡಿತರ ಅಕ್ಕಿಯನ್ನು ಬೀದರ್ ಜಿಲ್ಲೆಯ ಹುಮನಾಬಾದ್ ಎನ್​ಹೆಚ್​ 65 ನಲ್ಲಿ ಆಹಾರ ಇಲಾಖೆ ಅಧಿಕಾರಿಗಳು ಜಪ್ತಿ ಮಾಡಿದ್ದಾರೆ. ಪಡಿತರ ಅಕ್ಕಿಯನ್ನು ಬೀದರ್ ನಿಂದ ಅಕ್ರಮವಾಗಿ ಸಾಗಿಸುತ್ತಿದ್ದ ಆರೋಪ ಕೇಳಿಬಂದಿದೆ. ಹುಮನಾಬಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬಸ್ ಓವರ್ ಟೇಕ್ ಮಾಡಲು ಹೋಗಿ ಹಳ್ಳಕ್ಕೆ ಬಿದ್ದ ಕಾರು

ತಮಿಳುನಾಡು: ಬಸ್ ಓವರ್ ಟೇಕ್ ಮಾಡಲು ಹೋಗಿ ಕಾರು ಹಳ್ಳಕ್ಕೆ ಬಿದ್ದಿರುವ ಘಟನೆ ತಮಿಳುನಾಡಿನ ಕೃಷ್ಣಗಿರಿ ಜಿಲ್ಲೆ ‌ಹೊಸೂರಿನ ಸುಂಡಗಿರಿ ಬಳಿ ನಡೆದಿದೆ. ಕಾರಿನಲ್ಲಿದ್ದ 7 ಜನರಿಗೆ ಗಾಯವಾಗಿದ್ದು,  ಕೃಷ್ಣಗಿರಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಕುಟುಂಬ ಬೆಂಗಳೂರಿನಿಂದ‌ ಕಾರಿನಲ್ಲಿ ಕೃಷ್ಣಗಿರಿಗೆ ಹೊರಟಿತ್ತು. ಈ ವೇಳೆ ಬಸ್ ಓವರ್ ಟೇಕ್ ಮಾಡಲು ಹೋಗಿ ಕರು ಹಳ್ಳಕ್ಕೆ ಬಿದ್ದಿದೆ. ಕಾರಿನಲ್ಲಿದ್ದವರ ಚೀರಾಡುವ ಶಬ್ದ ಕೇಳಿ ಸ್ಥಳೀಯರು ರಕ್ಷಿಸಿದ್ದಾರೆ.

ವಿದ್ಯುತ್ ತಂತಿ ತುಳಿದು ಯುವಕ ಸಾವು

ತುಮಕೂರು: ವಿದ್ಯುತ್ ತಂತಿ ತುಳಿದು ಯುವಕ ಸಾವನ್ನಪ್ಪಿರುವ ಘಟನೆ ಪಾವಗಡ ತಾಲ್ಲೂಕಿನ ಬೊಮ್ಮತಹಳ್ಳಿಯಲ್ಲಿ ನಡೆದಿದೆ. ರಮೇಶ್ (20) ಮೃತ ದುರ್ದೈವಿ. ರಮೇಶ್ ಬೊಮ್ಮತಹಳ್ಳಿಯಲ್ಲಿ ಹಲಸಿನಹಣ್ಣು ಕೀಳಲು ಹೋಗಿದ್ದಾಗ ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿ ತುಳಿದು ಸಾವನ್ನಪ್ಪಿದ್ದಾನೆ.

ಘಟನಾ ಸ್ಥಳಕ್ಕೆ ಪಾವಗಡ ಶಾಸಕ ವೆಂಕಟರಮಣಪ್ಪ ಭೇಟಿ ನೀಡಿದ್ದು, ಪಾವಗಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಮತ್ತಷ್ಟು ಅಪರಾಧ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ

ತಾಜಾ ಸುದ್ದಿ

TV9 Kannada


Leave a Reply

Your email address will not be published. Required fields are marked *