ರಾಜಸ್ಥಾನದಲ್ಲಿ 369 ಅಡಿಯ ವಿಶ್ವದ ಅತಿ ಎತ್ತರದ ಶಿವನ ಪ್ರತಿಮೆ ಇಂದು ಉದ್ಘಾಟನೆ; ಏನಿದರ ವಿಶೇಷತೆ? – World Tallest Shiva statue to be inaugurated in Rajasthan Rajsamand Today what is the Specialities


ರಾಜ್‌ಸಮಂದ್ ಜಿಲ್ಲೆಯ ವಿಶ್ವದ ಅತಿ ಎತ್ತರದ ಶಿವನ ಪ್ರತಿಮೆಯನ್ನು ನೋಡಲು 4 ಗಂಟೆಗಳು ಬೇಕಾಗುತ್ತದೆ. ಈ ಪ್ರತಿಮೆಯೊಳಗೆ 4 ಲಿಫ್ಟ್‌ಗಳಿವೆ. ಇದು ಪೂರ್ಣಗೊಳ್ಳಲು 10 ವರ್ಷಗಳನ್ನು ತೆಗೆದುಕೊಂಡಿತು.

ರಾಜಸ್ಥಾನದಲ್ಲಿ 369 ಅಡಿಯ ವಿಶ್ವದ ಅತಿ ಎತ್ತರದ ಶಿವನ ಪ್ರತಿಮೆ ಇಂದು ಉದ್ಘಾಟನೆ; ಏನಿದರ ವಿಶೇಷತೆ?

ಲೋಕಾರ್ಪಣೆಯಾಗಲಿರುವ ಶಿವನ ಪ್ರತಿಮೆ

ಜೈಪುರ: ರಾಜಸ್ಥಾನದ (Rajasthan) ರಾಜ್‌ಸಮಂದ್ ಜಿಲ್ಲೆಯ ನಾಥದ್ವಾರ ಪಟ್ಟಣದಲ್ಲಿ ಸ್ಥಾಪಿಸಲಾಗಿರುವ 369 ಅಡಿ ಎತ್ತರದ ಶಿವನ ಪ್ರತಿಮೆಯನ್ನು (Shiva Statue) ಇಂದು (ಶನಿವಾರ) ಲೋಕಾರ್ಪಣೆ ಮಾಡಲಾಗುವುದು. ಉದಯಪುರದಿಂದ 45 ಕಿಮೀ ದೂರದಲ್ಲಿ ನಿರ್ಮಿಸಲಾಗಿರುವ ಈ ಪ್ರತಿಮೆ ವಿಶ್ವದ ಅತಿ ಎತ್ತರದ ಶಿವನ ಪ್ರತಿಮೆಯೆಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ನಾಥದ್ವಾರದಲ್ಲಿರುವ ವಿಶ್ವದ ಅತಿ ಎತ್ತರದ ಶಿವನ ಪ್ರತಿಮೆಯು ಒಳಗಿನಿಂದ ತುಂಬಾ ದೊಡ್ಡದಾಗಿದೆ. ಅದರೊಳಗೆ ಒಂದು ಸಣ್ಣ ಹಳ್ಳಿಯ ಜನರು ವಾಸಿಸಬಹುದು ಅಷ್ಟು ವಿಶಾಲವಾಗಿದೆ. ಅದರೊಳಗೆ ನಿರ್ಮಿಸಿರುವ ಸಭಾಂಗಣದಲ್ಲಿ 10 ಸಾವಿರ ಜನ ಸೇರಬಹುದು.

ಈ ಕಾರ್ಯಕ್ರಮದಲ್ಲಿ ರಾಜಸ್ಥಾನದ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್, ವಿಧಾನಸಭಾ ಸ್ಪೀಕರ್ ಸಿಪಿ ಜೋಶಿ ಮತ್ತು ಇತರ ಗಣ್ಯರು ಪಾಲ್ಗೊಳ್ಳಲಿದ್ದಾರೆ. ತತ್ ಪದಂ ಸಂಸ್ಥಾನದಿಂದ ಈ ವಿಶ್ವದ ಅತಿ ಎತ್ತರದ ಶಿವನ ಪ್ರತಿಮೆಯನ್ನು ನಿರ್ಮಿಸಲಾಗಿದೆ. ಈ ಸ್ಥಳದಲ್ಲಿ ಧಾರ್ಮಿಕ, ಆಧ್ಯಾತ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳ ಸರಣಿ ನಡೆಯಲಿದೆ. ಈ ಶಿವನ ಪ್ರತಿಮೆಯ ಉದ್ಘಾಟನೆಯ ನಂತರ ಇಂದಿನಿಂದ (ಅಕ್ಟೋಬರ್ 29) ನವೆಂಬರ್ 6ರವರೆಗೆ 9 ದಿನಗಳ ಕಾಲ ಧಾರ್ಮಿಕ ಕಾರ್ಯಕ್ರಮವು ಮುಂದುವರಿಯುತ್ತದೆ.

TV9 Kannada


Leave a Reply

Your email address will not be published.