ಜೈಪುರ: ರಾಜಸ್ಥಾನ ಡುಂಗರಪುರ ಜಿಲ್ಲೆಯಲ್ಲಿ 300ಕ್ಕೂ ಹೆಚ್ಚು ಮಕ್ಕಳಿಗೆ ಕೊರೊನಾ ಪಾಸಿಟಿವ್ ಬಂದಿದೆ. ಈ ಜಿಲ್ಲೆಯಲ್ಲಿ ಮಕ್ಕಳ ಮೇಲೆ ಕೊರೊನಾ ತೀವ್ರಗತಿಯಲ್ಲಿ ಹರಡುತ್ತಿರೋದಕ್ಕೆ ಅಲ್ಲಿನ ಆರೋಗ್ಯ ಅಧಿಕಾರಿಗಳು ಕಳವಳ ವ್ಯಕ್ತಪಡಿಸಿದ್ದಾರೆ.

ಇದು ಕೊರೊನಾದ ಮೂರನೇ ಅಲೆಯಾ ಅನ್ನೋ ಪ್ರಶ್ನೆ ಶುರುವಾಗಿದೆ. ಆದರೆ ಆರೋಗ್ಯ ಅಧಿಕಾರಿಗಳು ಮಕ್ಕಳು ಈಗಾಗಲೇ ಕೊರೊನಾ ಮೂರನೇ ಅಲೆಯನ್ನ ಎದುರಿಸುತ್ತಿದ್ದಾರೆ ಅಂತಾ ಹೇಳಲು ನಿರಾಕರಿಸಿದ್ದಾರೆ. ಮೇ 12 ರಿಂದ ಇಲ್ಲಿಯವರೆಗೆ ಅತೀ ಹೆಚ್ಚು ಪ್ರಕರಣಗಳು ದಾಖಲಾಗಿವೆ. 19 ವರ್ಷದೊಳಗಿನ 315 ಮಕ್ಕಳಲ್ಲಿ ಸೋಂಕು ಕಾಣಿಸಿಕೊಂಡಿದೆ. 1-9 ವರ್ಷದೊಳಗಿನ 60 ಮಕ್ಕಳಲ್ಲಿ, 9 ರಿಂದ 19 ವರ್ಷದ 255 ಮಕ್ಕಳಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡಿದೆ.

ಎಲ್ಲಾ ಮಕ್ಕಳಿಗೂ ಸೂಕ್ತ ಚಿಕಿತ್ಸೆ ನೀಡಲಾಗಿದೆ. ಕೊರೊನಾ ಮಕ್ಕಳಲ್ಲಿ ಹೆಚ್ಚು ಹಾನಿ ಮಾಡದಂತೆ ಮುನ್ನೆಚ್ಚರಿಕೆ ವಹಿಸಲಾಗಿದೆ. ಈ ವಿಚಾರದಲ್ಲಿ ಸಾಕಷ್ಟು ವ್ಯವಸ್ಥೆಗಳನ್ನ ಹೊಂದಿದ್ದೇವೆ. ಸಕಾಲಕ್ಕೆ ಬೇಕಾಗಿರುವ ಆಕ್ಸಿಜನ್ ವ್ಯವಸ್ಥೆಯನ್ನೂ ಹೊಂದಿದ್ದೇವೆ. ಅಲ್ಲದೇ ಮಕ್ಕಳ ವಾರ್ಡ್​ಗಳಿಗೆ ಸೂಕ್ತ ಕ್ರಮದ ಬಗ್ಗೆ ಪ್ರೋಟೋಕಾಲ್​ಗಳನ್ನೂ ನೀಡಿದ್ದೇವೆ ಅಂತಾ ಅಲ್ಲಿನ ವೈದ್ಯರು ತಿಳಿಸಿದ್ದಾರೆ. ಈ ಮಧ್ಯೆ ರಾಜಸ್ಥಾನದಲ್ಲಿ ನಿನ್ನೆ ಕೊರೊನಾಗೆ 115 ಮಂದಿ ಸಾವನ್ನಪ್ಪಿದ್ದಾರೆ. ಅಲ್ಲದೇ 6,103 ಪಾಸಿಟಿವ್ ಕೇಸ್​ಗಳು ದಾಖಲಾಗಿವೆ.

The post ರಾಜಸ್ಥಾನದ ಡುಂಗರಪುರದಲ್ಲಿ 300ಕ್ಕೂ ಹೆಚ್ಚು ಮಕ್ಕಳಲ್ಲಿ ಕೊರೊನಾ; 3ನೇ ಅಲೆಯೂ ಬಂತಾ..? appeared first on News First Kannada.

Source: newsfirstlive.com

Source link