ತೆಲಂಗಾಣ: ದೇಶದಾದ್ಯಂತ ಕೊರೊನಾ ಹಾವಳಿಯ ಮಧ್ಯೆಯೇ ಸೋಂಕಿನಿಂದ ಚೇತರಿಸಿಕೊಂಡವರಲ್ಲಿ ಬ್ಲ್ಯಾಕ್ ಫಂಗಸ್ ಕಾಯಿಲೆ ಹೆಚ್ಚಾಗುತ್ತಿದೆ. ಈ ಮಧ್ಯೆ ಹರಿಯಾಣ ಹಾಗೂ ರಾಜಸ್ಥಾನ ರಾಜ್ಯಗಳು ಬ್ಲ್ಯಾಕ್ ಫಂಗಸ್​ನ್ನು ಸಾಂಕ್ರಾಮಿಕ ಎಂದು ಘೋಷಿಸಿದ್ದವು. ಇದೀಗ ನೆರೆರಾಜ್ಯ ತೆಲಂಗಾಣ ಸಹ ಬ್ಲ್ಯಾಕ್ ಫಂಗಸ್​ನ್ನು ಸಾಂಕ್ರಾಮಿಕ ಎಂದು ಘೋಷಿಸುವ ಮೂಲಕ ಕಾಯಿಲೆಯನ್ನು ಗಂಭೀರವಾಗಿ ಪರಿಗಣಿಸಿದೆ.

ತೆಲಂಗಾಣದಲ್ಲಿ ಈವರೆಗೂ 50 ಕ್ಕೂ ಹೆಚ್ಚು ಬ್ಲ್ಯಾಕ್ ಫಂಗಸ್ ಪ್ರಕರಣಗಳು ವರದಿಯಾಗಿದ್ದು ಕಾಯಿಲೆಗೊಳಗಾದವರಿಗೆ ಕೇಂದ್ರ ಆರೋಗ್ಯ ಇಲಾಖೆಯ ಮಾರ್ಗಸೂಚಿಯನ್ವಯ ಚಿಕಿತ್ಸೆ ನೀಡಬೇಕು ಎಂದು ಖಾಸಗಿ ಮತ್ತು ಸರ್ಕಾರಿ ಆಸ್ಪತ್ರೆಗಳಿಗೆ ಹೇಳಿದೆ. ಇನ್ನು ತೆಲಂಗಾಣದಲ್ಲಿ ಬ್ಲ್ಯಾಕ್​ ಫಂಗಸ್​ಗೆ ನೀಡುವ ಔಷಧಿಯ ಕೊರತೆ ಎದುರಾಗಿದೆ ಎಂದು ವರದಿಯಾಗಿದೆ.

The post ರಾಜಸ್ಥಾನದ ಬೆನ್ನಲ್ಲೇ ಬ್ಲ್ಯಾಕ್​ ಫಂಗಸ್​ನ್ನ ಸಾಂಕ್ರಾಮಿಕವೆಂದು ಘೋಷಿಸಿದ ತೆಲಂಗಾಣ appeared first on News First Kannada.

Source: newsfirstlive.com

Source link