ರಾಜಸ್ಥಾನ್​​ ರಾಯಲ್ಸ್​​ಗೆ ಫುಲ್​​ ಶಾಕ್; ಅಂಥದ್ದೇನು ಮಾಡಿದ್ರು ಕ್ಯಾಪ್ಟನ್​​ ಸಂಜು ಸ್ಯಾಮ್ಸನ್?

ಐಪಿಎಲ್​ ಸೀಸನ್​ 15ರ ಮೆಗಾ ಹರಾಜಿಗೆ, ಕೆಲವೇ ತಿಂಗಳಷ್ಟೇ ಬಾಕಿಯಿದೆ. ಕೆಲ ಪ್ರಮುಖ ಸ್ಟಾರ್​ ಆಟಗಾರರು, ಹಳೆ ಫ್ರಾಂಚೈಸಿ ತೊರೆಯೋಕೆ ಮುಂದಾಗಿದ್ದಾರೆ. ಅದ್ರೆ ಈ ನಡುವೆ ಸಂಜು ಸ್ಯಾಮ್ಸನ್​ರ ನಡೆಯೊಂದು, ಅನುಮಾನ ಹುಟ್ಟಿಹಾಕಿದೆ. ಅಷ್ಟೇ ಅಲ್ಲದೇ ರಾಜಸ್ಥಾನ್ ರಾಯಲ್ಸ್​ನಲ್ಲಿ ಗೊಂದಲಮಯ ವಾತಾವರಣವನ್ನೇ ಸೃಷ್ಟಿಸಿದೆ.

ಐಪಿಎಲ್​ನ ಬಿಗ್​ ಬಿಲಿಯನ್​ ಡೇಗೆ, ಕೆಲ ದಿನಗಳಷ್ಟೇ ಬಾಕಿಯಿವೆ. ಈಗಾಗಲೇ ಮೆಗಾ ಹರಾಜಿಗಾಗಿ ಎಲ್ಲಾ ಫ್ರಾಂಚೈಸಿಗಳು, ಭರ್ಜರಿ ತಯಾರಿಯನ್ನೇ ನಡೆಸಿಕೊಳ್ಳುತ್ತಿವೆ. ಕೆಲ ಸ್ಟಾರ್​ ಆಟಗಾರರು ತಂಡವನ್ನು ತೊರೆದು, ಅದೃಷ್ಟದ ಪರೀಕ್ಷೆಗೆ ಇಳಿಯೋಕೆ ಸನ್ನದ್ಧರಾಗ್ತಿದ್ದಾರೆ. ಈ ನಡುವೆ ರಾಜಸ್ಥಾನ್ ರಾಯಲ್ಸ್​ ನಾಯಕ ಸಂಜು ಸ್ಯಾಮ್ಸನ್​ರ ನಡೆ, ಕುತೂಹಲಕ್ಕೆ ಕಾರಣವಾಗ್ತಿದೆ. ಅಷ್ಟೇ ಅಲ್ಲ..! ಶ್ರೇಯಸ್​ ಅಯ್ಯರ್ ಹಾದಿಯಲ್ಲೇ ಸಂಜು ಸಾಗ್ತಿದ್ದಾರಾ..? ಎಂಬ ಪ್ರಶ್ನೆ ಹುಟ್ಟುಹಾಕುವಂತೆ ಮಾಡಿದೆ.

ಫ್ರಾಂಚೈಸಿಯೊಂದಿಗೆ ಸಂಜು ಸ್ಯಾಮ್ಸನ್ ಮನಸ್ಥಾಪ..?

ಇಂಥದ್ದೊಂದು ಪ್ರಶ್ನೆಯ ಹುಟ್ಟಿಗೆ ಕಾರಣ, ಸಂಜು ಸ್ಯಾಮ್ಸನ್​ ನಡೆಯಾಗಿದೆ. ಸರಿ ಸುಮಾರು 7 ವರ್ಷಗಳ ಒಡನಾಟ ರಾಜಸ್ಥಾನ್ ರಾಯಲ್ಸ್​ ಜೊತೆ ಹೊಂದಿರುವ ಸಂಜು, ಇವತ್ತು ನಾಯಕನ ಹಂತಕ್ಕೆ ಬೆಳೆದಿದ್ದಾರೆ. ಇದಕ್ಕೆ ರಾಜಸ್ಥಾನ್ ರಾಯಲ್ಸ್​ ಫ್ರಾಂಚೈಸಿ ಪಾತ್ರ ಬಹುಪಾಲಿದೆ. ಆದ್ರೀಗ ಹಠಾತ್ ರಾಜಸ್ಥಾನ್ ರಾಯಲ್ಸ್​​ ಫ್ರಾಂಚೈಸಿಯ ಅಧಿಕೃತ ಸೋಶಿಯಲ್ ಮೀಡಿಯಾ ಪೇಜ್​ಅನ್ನ ಸಂಜು, ಅನ್​​ಫಾಲೋ ಮಾಡ್ತಿದ್ದಾರೆ. ಇದು ಫ್ರಾಂಚೈಸಿಯನ್ನ ತೊರೆಯುವ ಮುನ್ಸೂಚನೆಯೇ ಆಗಿದೆ ಎನ್ನಲಾಗ್ತಿದೆ. ಅಷ್ಟೆ ಅಲ್ಲ..! ಮೆಗಾ ಹಾರಾಜಿನ ಮೂಲಕ ಬೇರೊಂದು ತಂಡಕ್ಕೆ ಹಾರುವ ಮುನ್ಸೂಚನೆಯಾ ಎನ್ನಲಾಗ್ತಿದೆ..

ಗೊಂದಲಕ್ಕೆ ಸಿಲುಕಿದ ರಾಜಸ್ಥಾನ್ ರಾಯಲ್ಸ್​ ಫ್ರಾಂಚೈಸಿ..!

ಹೌದು..! ಕಳೆದ ಆವೃತ್ತಿಯಲಷ್ಟೇ ಸಂಜು ಸ್ಯಾಮ್ಸನ್​​ಗೆ ನಾಯಕತ್ವ ಪಟ್ಟ ಕಟ್ಟಿದ್ದ ರಾಜಸ್ಥಾನ್, ಭವಿಷ್ಯದ ತಂಡಕಟ್ಟುವ ಲೆಕ್ಕಚಾರದಲ್ಲಿತ್ತು. ಇದಕ್ಕಾಗಿ ಅನುಭವಿ ಸ್ಟೀವ್​ ಸ್ಮಿತ್​​ರನ್ನೈ ಕೈಬಿಟ್ಟಿತ್ತು. ಇದಲ್ಲದೆ ತಂಡವನ್ನ ಮುನ್ನಡೆಸುವ ಅನುಭವ ಹೊಂದಿದ್ದ ಜೋಸ್ ಬಟ್ಲರ್​ಗೂ ನೀಡದೆ, ಸಂಜು ಸ್ಯಾಮ್ಸನ್​ಗೆ ಜವಾಬ್ದಾರಿ ನೀಡಿತ್ತು. ಆದ್ರೆ ಹರಾಜಿಗೂ ಮುನ್ನ ಸಂಜು ಸ್ಯಾಮ್ಸನ್​ ಆರ್​ಆರ್​ ಇನ್​​ಸ್ಟಾಗ್ರಾಮ್ ಅನ್​ಫಾಲೋ ಮಾಡಿರೋದು, ಫ್ರಾಂಚೈಸಿಗೆ ತಲೆಬಿಸಿ ಹೆಚ್ಚಿಸಿದೆ. ಸದ್ಯ ಈ ಬಗ್ಗೆ ಮಾತನಾಡಿರುವ ಫ್ರಾಂಚೈಸಿ ಈ ಬಗ್ಗೆ ಅಚ್ಚರಿಯನ್ನೇ ವ್ಯಕ್ತಪಡಿಸಿದೆ.

ಸಂಜು ಸ್ಯಾಮ್ಸನ್ ಯಾವ ಕಾರಣಕ್ಕಾಗಿ ಅನ್‌ಫಾಲೋ ಮಾಡಿದ್ದಾರೆ ತಿಳಿದಿಲ್ಲ. ನಾವು ಆತನಿಂದಲೆ ಭವಿಷ್ಯ ತಂಡ ಕಟ್ಟಿದ್ದೆವು. ನಮ್ಮ ರಿಟೆನ್ಶನ್ ಪಟ್ಟಿಯಲ್ಲಿ ಸಂಜು ಮೊದಲಿಗರು.. ಆದ್ರೆ ಸ್ಯಾಮ್ಸನ್ ಇದ್ದಕ್ಕಿದಂತೆ ನಮ್ಮ ಇನ್​ಸ್ಟಾಗ್ರಾಮ್ ಅನ್​​​ಫಾಲೋ ಮಾಡಿರೋದು, ಅಚ್ಚರಿ ಮೂಡಿಸಿದೆ. ಇದರ ಕಾರಣವನ್ನ ನಾವು ಕೂಡ ಕಂಡುಕೊಳ್ಳುವ ಪ್ರಯತ್ನದಲ್ಲಿದ್ದೇವೆ ಎಂದು ರಾಜಸ್ಥಾನ್ ರಾಯಲ್ಸ್​ ಫ್ರಾಂಚೈಸಿ ತಿಳಿಸಿದೆ.

ಸದ್ಯ ಯುವ ನಾಯಕನ ನಡೆಯಿಂದ ರಾಜಸ್ಥಾನ್ ರಾಯಲ್ಸ್​ ಭಾರಿ ಗೊಂದಲಕ್ಕೆ ಒಳಗಾಗಿದೆ. ಅದ್ರೆ, ಮೆಗಾ ಹರಾಜಿನ ಈ ಬೆಳವಣಿಗೆಳ ವೇಳೆ ಸಂಜು ರಾಜಸ್ಥಾನ್​ ರಾಯಲ್ಸ್​ ತಂಡವನ್ನ ಅನ್​​ಫಾಲೋ ಮಾಡ್ತಿರೋದು, ರಾಜಸ್ಥಾನ್ ಫ್ರಾಂಚೈಸಿಯನ್ನ ತೊರೆಯುತ್ತಿದ್ದಾರೆ ಎಂಬ ಅನುಮಾನ ಹುಟ್ಟುಹಾಕದೇ ಇರಲಾರದು.. ಒಟ್ನಲ್ಲಿ ಅದೇನೇ ಆಗಲಿ, ಅಸಲಿ ಸತ್ಯ ಹೊರಬೀಳಲು ಒಂದಷ್ಟು ದಿನ ಕಾಯಲೇಬೇಕಿರೋದಂತು ಸತ್ಯ.

The post ರಾಜಸ್ಥಾನ್​​ ರಾಯಲ್ಸ್​​ಗೆ ಫುಲ್​​ ಶಾಕ್; ಅಂಥದ್ದೇನು ಮಾಡಿದ್ರು ಕ್ಯಾಪ್ಟನ್​​ ಸಂಜು ಸ್ಯಾಮ್ಸನ್? appeared first on News First Kannada.

News First Live Kannada

Leave a comment

Your email address will not be published. Required fields are marked *