2021ರ ಐಪಿಎಲ್​ ಆವೃತ್ತಿಯಲ್ಲಿ ರಾಜಸ್ಥಾನ ರಾಯಲ್ಸ್ ತಂಡ ಇದುವರೆಗೂ ಆಡಿರುವ 5 ಪಂದ್ಯಗಳಲ್ಲಿ ಹಲವು ಏಳುಬೀಳುಗಳನ್ನು ಕಂಡಿದೆ. ಸರಣಿಯಲ್ಲಿ ಆರಂಭಿಕ ಪಂದ್ಯದಲ್ಲಿ 4 ರನ್​ಗಳ ಸೋಲುಂಡಿದ್ದ ಆರ್​ಆರ್​, ಆ ಬಳಿಕ ನಡೆದ ಡೆಲ್ಲಿ ವಿರುದ್ಧ ಗೆಲುವು ಪಡೆದರೆ ಉಳಿದ ಎರಡು ಪಂದ್ಯಗಳಲ್ಲೂ ಸೋಲುಂಡಿತ್ತು. ಆದರೆ ನಿನ್ನೆ ನಡೆದ ಕೋಲ್ಕತ್ತಾ ನೈಟ್​ ರೈಡರ್ಸ್​ ವಿರುದ್ಧ ಪಂದ್ಯದಲ್ಲಿ ಗೆಲುವಿನ ಸಿಹಿ ಪಡೆದ ಆರ್​ಆರ್​, ಗೆಲುವಿನ ಹಾದಿಗೆ ಮರಳಿದೆ.

ಟೂರ್ನಿಯಲ್ಲಿ ಇದುವರೆಗೂ ಆರ್​ಆರ್ ತಂಡ ತೋರಿದ ಪ್ರದರ್ಶನದ ಕುರಿತು ಪ್ರತಿಕ್ರಿಯೆ ನೀಡಿರುವ ಟೀಂ ಇಂಡಿಯಾ ಮಾಜಿ ಆಟಗಾರ ವೀರೇಂದ್ರ ಸೆಹ್ವಾಗ್, ಆರ್​​ಆರ್​ ಕ್ಯಾಪ್​​ನ ಇತರೆ ಆಟಗಾರರು ಸಂಜು ನಾಯಕತ್ವದ ಕುರಿತು ಸಂತೋಷವಾಗಿಲ್ಲ ಎನಿಸುತ್ತಿದೆ. ತಮ್ಮೊಂದಿಗೆ ಇದ್ದ ಆಟಗಾರನನ್ನೇ ಏಕಾಏಕಿ ಕ್ಯಾಪ್ಟನ್​ ಮಾಡಿದ್ದು, ಆಟಗಾರರ ಒಳ ಹಾಗೂ ಹೊರ ಮನಸ್ಸುಗಳನ್ನು ಆರ್ಥೈಸಿಕೊಳ್ಳಲು ಅವರಿಗೆ ಇನ್ನು ಸಮಯಬೇಕಿದೆ ಎನಿಸುತ್ತಿದೆ.

ಬೌಲರ್​ ರನ್​ ಕೊಟ್ಟಾಗ ನಾಯಕ ಆತನ ಬಳಿ ಹೋಗಿ ಕೇವಲ ಸಲಹೆಗಳನ್ನಷ್ಟೇ ನೀಡಬೇಕು. ಇದು ಬೌಲರ್​​ಗಳಲ್ಲಿ ವಿಶ್ವಾಸವನ್ನು ಹೆಚ್ಚಿಸುತ್ತದೆ. ಇದು ಬ್ಯಾಟ್ಸ್​​​ಮನ್​​ಗಳಿಗೂ ಅನ್ವಯವಾಗುತ್ತದೆ. ತಂಡದ ವಿದೇಶಿ ಆಟಗಾರರು ತಮ್ಮಲ್ಲೇ ಹೆಚ್ಚು ಸಂವಹನ ನಡೆಸುವುದಿಲ್ಲ ಎನಿಸುತ್ತಿದೆ ಎಂದು ಸೆಹ್ವಾಗ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

The post ರಾಜಸ್ಥಾನ ಆಟಗಾರರಿಗೆ ಸಂಜು ಸ್ಯಾಮ್ಸನ್​ ನಾಯಕತ್ವ ಇಷ್ಟವಿಲ್ಲ ಅನ್ಸುತ್ತೆ- ಸೆಹ್ವಾಗ್ appeared first on News First Kannada.

Source: News First Kannada
Read More