ರಾಜಾ-ರಾಣಿ ಬೆನ್ನಲ್ಲೇ ಹೊಸ ಶೋ; ನನ್ನಮ್ಮ ಸೂಪರ್ ಸ್ಟಾರ್​ಗೆ ಜಡ್ಜ್​ಸ್​ ಯಾರ್​ ಗೊತ್ತಾ?

ರಾಜಾ-ರಾಣಿ ಶೋ ಫಿನಾಲೆ ಮುಗಿದಿದ್ದು.. ಪ್ರೇಕ್ಷಕರು ಆ ಶೋನ ಮಿಸ್​ ಮಾಡಿಕೊಳ್ಳಲಿದ್ದಾರೆ.. ಇದೀಗ ರಾಜ-ರಾಣಿ ಬದಲಿಗೆ ಕಲರ್ಸ್​ ಕನ್ನಡ ವಾಹಿನಿಯಲ್ಲಿ ಮತ್ತೊಂದು ಶೋ ನಿಮ್ಮನ್ನು ರಂಜಿಸಲು ಸಜ್ಜಾಗಿದೆ.. ಯೆಸ್​, ಆ ಶೋ ಮತ್ಯಾವುದು ಅಲ್ಲಾ ನನ್ನಮ್ಮ ಸೂಪರ್​ ಸ್ಟಾರ್​. ಅಮ್ಮ ಅಂದ್ರೆ ಕಣ್ಣಿಗೆ ಕಾಣುವ ದೇವರು.. ಅಮ್ಮ ಅಂದ್ರೆ ಮೊದಲ ಗುರು.. ಮಗುವಿನ ಮೊದಲ ತೊದಲ ನುಡಿ ಅಮ್ಮ..

ನಮಗೆ ನೋವಾದಾಗ ಮೊದಲು ನೆನಪಾಗುವ ವ್ಯಕ್ತಿ ಅಮ್ಮ, ಮಗುವಿನ ಲಾಲನೆ ಪೋಷಣೆಯಲ್ಲಿ ತನ್ನನ್ನೆ ತಾನು ಮರೆಯುವ ಜೀವ ಅಂದ್ರೆ ಅಮ್ಮ..ಹೀಗೇ ಪ್ರತಿ ಒಂದು ಹಂತದಲ್ಲಿ ನಮ್ಮ ಜೊತೆಗಿರುವ ವ್ಯಕ್ತಿ ಅಂದ್ರೆ ಅದೂ ಅಮ್ಮ ಮಾತ್ರಾ.. ಇಷ್ಟೆಲ್ಲಾ ಮಾಡುವ ತಾಯಿ ಪ್ರತಿ ಮಗುವಿನ ಸೂಪರ್​ ಸ್ಟಾರ್​..ಇದೀಗ ನನ್ನಮ್ಮ ಸೂಪರ್​ ಸ್ಟಾರ್ ಶೋ ಕೂಡಾ ತಾಯಿ ಮಗುವಿನ ಬಾಂಧವ್ಯವನ್ನು ಎತ್ತಿಹಿಡಿಯುವ ಶೋ..

ಮನೆಯಲ್ಲಿ ಅಮ್ಮಂದಿರು ಮಾಡುವ ಕೆಲಸಕ್ಕೆ ಬೆಲೆ ಕಟ್ಟಲಾಗದು. ಅವರು ಪಡೋ ಶ್ರಮದಿಂದಲೇ ಒಂದು ಮನೆ ಸ್ವರ್ಗದ ರೂಪ ಪಡೆಯೋದು ಅಂತಾ ಹೇಳ್ತಾರೆ ಅದು ಅಕ್ಷರ ಸಹ ಸತ್ಯ. ಮಕ್ಕಳು ಮಾಡುವ ತರ್ಲೆ, ತುಂಟಾಟಗಳನ್ನ ಸಹಿಸಿಕೊಂಡು ಮನೆಯವರನ್ನ ಖುಷಿಯಾಗಿ ಇಡಲು ಸತತವಾಗಿ ಪ್ರಯತ್ನಿಸುತ್ತಾಳೆ. ಅಂತಹ ಅಮ್ಮಂದಿರಗಾಗಿ ಕಲರ್ಸ್​ ಕನ್ನಡ ನನ್ನಮ್ಮ ಸೂಪರ್ ಸ್ಟಾರ್ ಶೋನ ನಿಮ್ಮ ಮುಂದೆ ತರುತ್ತಿದ್ದು ಇನ್ನು ನನ್ನಮ್ಮ ಸೂಪರ್​ ಸ್ಟಾರ್ ಶೋ ಬಗ್ಗೆ ಹೇಳೊದಾದ್ರೆ ಒಟ್ಟು 12 ತಾಯಂದಿರು ಹಾಗೂ 12 ಮಕ್ಕಳು ಈ ಶೋನಲ್ಲಿ ಭಾಗವಹಿಸಲಿದ್ದಾರೆ..

ಪ್ರತಿ ವಾರವೂ ಕೂಡಾ ಒಂದೊಂದು ಸುತ್ತಿನಲ್ಲೂ ತಾಯಿ ಮಗ ಪರ್ಫಾಮ್​ ಮಾಡಲಿದ್ದಾರೆ.. ಇದೂ ಗೇಮ್​ ಶೋ ಮಾತ್ರವಲ್ಲಾ ಡ್ಯಾನ್ಸ್​ ಸ್ಕಿಟ್​ ಜೊತೆಗೆ ಒಂದಿಷ್ಟು ತರ್ಲೆ ತುಂಟತನ ಎಲ್ಲೂ ಇದ್ದು ಪಕ್ಕಾ ಎಂಟರ್​ಟೈನ್​ಮೆಂಟ್​ ಗೋಸ್ಕರ ಈ ಶೋನ ಮಾಡಲಾಗಿದೆ.. ಟಾಕಿಂಗ್​ ಸ್ಟಾರ್​ ಸೃಜನ್​ ಲೊಕೇಶ್​, ಹಿರಿಯ ನಟಿ ತಾರಮ್ಮ ಹಾಗೂ ಅನುಪ್ರಭಾಕರ್ ಈ ಶೋನ ಜಡ್ಜ್​ ಸೀಟ್​ಗಳಲ್ಲಾ ಅಲಂಕರಿಸಲಿದ್ದಾರೆ.. ಹಾಗೂ ನಟಿ ಅನುಪಮಾ ನನ್ನಮ್ಮ ಸೂಪರ್​ ಸ್ಟಾರ್ ಶೋನ ಹೋಸ್ಟ್​ ಆಗಿ ಕಾರ್ಯ ನಿರ್ವಹಿಸಲಿದ್ದಾರೆ..

ಇದನ್ನೂ ಓದಿ: ರಾಜ-ರಾಣಿಯಾಗಿ ಪಟ್ಟಾಭಿಷೇಕ ಮಾಡಿಸಿಕೊಂಡ ನೇಹಾ-ಚಂದು

ಇನ್ನೂ ಎಲ್ಲಾ ಶೋಗಳಂತೆ ಈ ಕಾರ್ಯಕ್ರಮದಲ್ಲಿಯು ಕೂಡಾ ಎಲಿಮನೇಶನ್​ ಪಕ್ಕಾ ಇರತ್ತೆ.. ಎಲಿಮನೇಷನ್​ನಲ್ಲಿ ಸ್ಕೋರ್​ ಮಾತ್ರ ಲೆಕ್ಕವಲ್ಲಾ.. ಪ್ರತಿಯೊಂದು ಕೂಡಾ ಕೌಂಟ್​ ಆಗತ್ತೆ.. ಎಷ್ಟೋ ವರ್ಷಗಳಾದ ಮೇಲೆ ವಿಭಿನ್ನವಾಗಿ ನನ್ನಮ್ಮ ಸೂಪರ್ ಸ್ಟಾರ್ ಅಂತಾ ಹೊಸ ಶೋ ಮೂಡಿ ಬರಲು ಸಜ್ಜಾಗಿದ್ದು, ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ಒಟ್ನಲ್ಲಿ ಸದಾ ಮನೆಯವರ ಹಿತಕ್ಕಾಗಿ ಶ್ರಮ ಪಡುತ್ತಿದ್ದ ಅಮ್ಮಂದಿರಿಗೆ ತಮ್ಮ ಪ್ರತಿಭೆಯನ್ನ ಜಗತ್ತಿಗೆ ಪರಿಚಯಿಸಲು ದೊಡ್ಡ ಪ್ಲಾಟ್​ ಫಾರ್ಮ್​ ಕ್ರಿಯೇಟ್ ಮಾಡಿ ಕೊಡಲು ಸಜ್ಜಾಗಿದೆ ನನ್ನಮ್ಮ ಸೂಪರ್ ಸ್ಟಾರ್.

News First Live Kannada

Leave a comment

Your email address will not be published. Required fields are marked *