ರಾಜೀನಾಮೆ ಇಲ್ಲ.. ಆಗಸ್ಟ್​ನಲ್ಲಿ ಮತ್ತೆ ದೆಹಲಿಗೆ ಬರ್ತೇನೆ -ಬಿಎಸ್​ವೈ

ರಾಜೀನಾಮೆ ಇಲ್ಲ.. ಆಗಸ್ಟ್​ನಲ್ಲಿ ಮತ್ತೆ ದೆಹಲಿಗೆ ಬರ್ತೇನೆ -ಬಿಎಸ್​ವೈ

ನವದೆಹಲಿ: ನಾನು ರಾಜೀನಾಮೆ ನೀಡುತ್ತೇನೆ ಅನ್ನೋ ಸುದ್ದಿ ಸುಳ್ಳು. ಆ ಸುದ್ದಿಗೆ ಯಾವುದೇ ಪ್ರಾಮುಖ್ಯತೆ ಬೇಡ ಅಂತಾ ಸಿಎಂ ಬಿಎಸ್​ ಯಡಿಯೂರಪ್ಪ ಸ್ಪಷ್ಟಪಡಿಸಿದ್ದಾರೆ.

ಮಾಧ್ಯಮಗಳ ಜೊತೆ ಮಾತನಾಡಿರುವ ಸಿಎಂ, ರಾಜ್ಯದ ಅಭಿವೃದ್ಧಿ ವಿಚಾರಗಳ ಬಗ್ಗೆ ಹೈಕಮಾಂಡ್ ಜೊತೆ ಚರ್ಚೆ ಮಾಡ್ತಿದ್ದೇನೆ. ಮೇಕೆದಾಟು ಯೋಜನೆ ಸಂಬಂಧ ಕೇಂದ್ರದ ನಾಯಕರ ಬಳಿ ಚರ್ಚೆ ಬಂದಿದ್ದೇನೆ. ಈ ಯೋಜನೆ ಜಾರಿ ಮಾಡಲು ಎಲ್ಲಾ ರೀತಿಯ ಪ್ರಯತ್ನ ಮಾಡಲಾಗುವುದು ಎಂದರು.

ಅಲ್ಲದೇ ಆಗಸ್ಟ್​​ನ ಮೊದಲ ವಾರ ಮತ್ತೆ ದೆಹಲಿಗೆ ಬರುತ್ತೇನೆ. ರಾಜೀನಾಮೆ ಪ್ರಶ್ನೆಯೇ ಇಲ್ಲ. ಮಾಧ್ಯಮಗಳಲ್ಲಿ ವರದಿಯಾಗಿರುವ ಸುದ್ದಿ ಸತ್ಯಕ್ಕೆ ದೂರವಾಗಿದೆ. ಆ ಸುದ್ದಿಗೆ ಪ್ರಾಮುಖ್ಯತೆ ಬೇಡ ಎಂದಿದ್ದಾರೆ.

The post ರಾಜೀನಾಮೆ ಇಲ್ಲ.. ಆಗಸ್ಟ್​ನಲ್ಲಿ ಮತ್ತೆ ದೆಹಲಿಗೆ ಬರ್ತೇನೆ -ಬಿಎಸ್​ವೈ appeared first on News First Kannada.

Source: newsfirstlive.com

Source link