ಬೆಂಗಳೂರು: ಸಿಎಂ ಬಿಎಸ್​ ಯಡಿಯೂರಪ್ಪ ಅವರನ್ನ ಸಿಎಂ ಹುದ್ದೆಯಿಂದ ಕೆಳಗೆ ಇಳಿಸುತ್ತಾರೆ ಅನ್ನೋ ವಿಚಾರ ತಿಳಿಯುತ್ತಿದ್ದಂತೆ, ಈ ಹಿಂದೆ ಕಾಂಗ್ರೆಸ್-ಜೆಡಿಎಸ್​ ನೇತೃತ್ವದ​ ಸರ್ಕಾರ ಬೀಳಿಸಿ ಬಿಎಸ್​ವೈ ಸಂಪುಟದಲ್ಲಿ ಸಚಿವರಾಗಿರುವ ವಲಸಿಗರಿಗೆ ಟೆನ್ಯನ್ ಶರುವಾಗಿದೆ ಅಂತಾ ಹೇಳಲಾಗುತ್ತಿದೆ.

ಇಂದು ಸಂಜೆ ಸಿಎಂ ಬಿಎಸ್ ಯಡಿಯೂರಪ್ಪ ಅವರು ಕ್ಯಾಬಿನೆಟ್ ಸಭೆ ನಡೆಸಿದರು. ಸಭೆ ಬಳಿಕ ಬಿಎಸ್​ ಯಡಿಯೂರಪ್ಪರ ಕಚೇರಿಗೆ ಸಚಿವರಾದ ಡಾ.ಸುಧಾಕರ್, ಬಿಸಿ ಪಾಟೀಲ್, ಶಿವರಾಮ್ ಹೆಬ್ಬಾರ್​, ಎಸ್​ಟಿ ಸೋಮಶೇಖರ್​​ ಸೇರಿದಂತೆ ಇಡೀ ಬಾಂಬೇ ಟೀಂ ದೌಡಾಯಿಸಿತ್ತು. ಸಚಿವ ಈ ಭೇಟಿ ಹಲವು ಚರ್ಚೆಗಳಿಗೆ ಕಾರಣವಾಗಿತ್ತು. ಹೀಗಾಗಿ ಗರಂ ಆಗಿಯೇ ಪ್ರತಿಕ್ರಿಯಿಸಿದ ಬಿಸಿ ಪಾಟೀಲ್.. ಯಾಕ್ರೀ ಮಾತಾಡ್ತೀರಿ ಸುಮ್ನೆ.. ಏನೇನೋ ಮಾತಾಡ್ಬೇಡಿ.. ನಮಗ್ಯಾಕೆ ಆತಂಕ.. ಅದೆಲ್ಲ ಇಲ್ಲ. ರಾಜೀನಾಮೆ ಕೊಡುವಂತಹ ಪ್ರಶ್ನೆಯೇ ಬಂದಿಲ್ಲ. ರಾಜೀನಾಮೆ ನೀಡೋಕೆ ನಮ್ಗೆ ತಲೆ ಕೆಟ್ಟಿದ್ಯಾ ಅಂತಾ ಪ್ರಶ್ನೆ ಮಾಡಿದರು.

ಬಳಿಕ ಸಚಿವ ಡಾ.ಸುಧಾಕರ್​ ಪ್ರತಿಕ್ರಿಯಿಸಿ.. ಇಂದು ಕ್ಯಾಬಿನೆಟ್ ಸಭೆ ಇತ್ತು.. ಸಹಜವಾಗಿ ನಾವು ಯಡಿಯೂರಪ್ಪ ಅವರನ್ನ ಭೇಟಿಯಾಗಿ ಮಾತನಾಡಿಸಿಕೊಂಡು ಬಂದಿದ್ದೇವೆ. ಈ ವೇಳೆ ರಾಜ್ಯದಲ್ಲಿ ನಡೆಯುತ್ತಿರುವ ಬೆಳವಣಿಗೆಗಳ ಬಗ್ಗೆ ನಾನು ಪ್ರಸ್ತಾಪ ಮಾಡಿದೆ. 25ರ ಬಳಿಕ ಹೈಕಮಾಂಡ್ ನಾಯಕರು ಸಂದೇಶ ನೀಡಲಿದ್ದಾರೆ. ಆ ಬಳಿಕ ತಮ್ಮ ನಿರ್ಧಾರವನ್ನ ಪ್ರಕಟ ಮಾಡೋದಾಗಿ ತಿಳಿಸಿದ್ದಾರೆ ಎಂದರು.

ಮಾನ್ಯ ಬಿಎಸ್​ವೈ ಅವರ ನಾಯಕತ್ವವ್ನ ಒಪ್ಪಿ, ಬಿಜೆಪಿ ಸಿದ್ಧಾಂತ, ತತ್ವ ಒಪ್ಪಿ ನಾವು ಪಕ್ಷ ಸೇರಿದ್ದೇವೆ. ಹೈಕಮಾಂಡ್ ನಾಯಕರ ಮಾರ್ಗದರ್ಶನ ಮತ್ತು ಸಲಹೆಯಂತೆ ಬಿಜೆಪಿಯಲ್ಲಿ ಮುಂದುವರಿಯುತ್ತೇವೆ. ಕಳೆದ ಒಂದೂವರೆ ವರ್ಷದಿಂದ ಬಿಎಸ್​ವೈ ಜೊತೆ ಕೆಲಸ ಮಾಡ್ಕೊಂಡು ಬಂದಿದ್ದೇವೆ. ಇಂತಹ ಸಂದರ್ಭದಲ್ಲಿ ನಾವು ಅವರ ಜೊತೆ ಇರೋದು ಮಾನವ ಧರ್ಮ. ಅದಕ್ಕಾಗಿ ನಾವು ಅವರ ಜೊತೆ ಇರುತ್ತೇವೆ. ಅದರಲ್ಲಿ ತಪ್ಪು ಏನೂ ಇಲ್ಲ ಅಂತಾ ಸ್ಪಷ್ಟಪಡಿಸಿದರು.

The post ರಾಜೀನಾಮೆ ಕೊಡೋಕೆ ನಮ್ಗೆ ತಲೆ ಕೆಟ್ಟಿದ್ಯಾ?’ ಎಂದ ಬಿ.ಸಿ.ಪಾಟೀಲ್ -ಅಷ್ಟಕ್ಕೂ ಆಗಿದ್ದೇನು? appeared first on News First Kannada.

Source: newsfirstlive.com

Source link