ನಿನ್ನೆ ಬಿಗ್​ಬಾಸ್​ ಮನೆಯಿಂದ ರಾಜೀವ್​ ಎಲಿಮಿನೇಟ್​ ಆದ ವಿಷಯದ ಬಗ್ಗೆ ಎಲ್ಲರಿಗೂ ತಿಳಿದಿದೆ.. ರಾಜೀವ್​ ಹೊರಬಂದಿದ್ದು ಬಿಗ್​ಬಾಸ್​ ಮನೆಯ ಎಲ್ಲರಿಗೂ ಬೇಸರ ಮೂಡಿಸಿದೆ.. ಆದ್ರೆ ಅತಿ ಹೆಚ್ಚು ಸಂಕಟ ಪಟ್ಟಿದ್ದು ಶುಭಪೂಂಜಾ.

ಎಲಿಮನೇಷನ್​ ಸಂದರ್ಭದಲ್ಲಿ ಬಿಗ್​ಬಾಸ್​ ವಿ ಟಿ ಪ್ಲೇ ಮಾಡಿದಾ ತಕ್ಷಣವೇ ಶುಭಾ ಬೆಡ್​ರೂಮ್​ಗೆ ಹೋಗಿ ಅಳಲು ಪ್ರಾರಂಭಿಸಿದ್ರು.. ಬಳಿಕ ಎಲ್ಲ ಕಂಟೆಸ್ಟೆಂಟ್​ಗಳೂ ಕೂಡಾ ರಾಜೀವ್​ ಅವರನ್ನು ಹಗ್​ ಮಾಡಿ ಸೆಂಡ್​ಆಫ್​ ಕೊಡುವಾಗಲೂ ಶುಭ ರೂಮ್​ನಿಂದ ಹೊರಬರಲಿಲ್ಲ. ಆಗ ರಾಜೀವ್​ ಒಳಗೆ ಹೋಗಿ ಶುಭ ಅವರನ್ನು ಸಮಾಧಾನ ಮಾಡಿ ಹೊರಗೆ ಕರೆದುಕೊಂಡು ಬಂದ್ರು.

ಇನ್ನು ಬಿಗ್​ಬಾಸ್​ ರಾಜೀವ್​ ಬಳಿ ಇದ್ದ ಗೋಲ್ಡ​ನ್​ ಪಾಸ್ಅನ್ನು ಇನ್ನೊಬ್ಬರಿಗೆ ಕೊಡಬೇಕು ಎಂಬ ವಿಶೇಷ ಅಧಿಕಾರವನ್ನು ನೀಡಿದಾಗ.. ರಾಜೀವ್ ಶುಭ ಅವರ ಹೆಸರನ್ನು ಸೂಚಿಸಿ.. ಈ ಪಾಸ್​ ಸಿಗುವ ಟಾಸ್ಕ್​ ಆಡುವಾಗ ನಾನು ಶುಭ ಬಳಿ, ನನಗೆ ಗೋಲ್ಡ​ನ್​ ಪಾಸ್​ ತುಂಬಾನೆ ಮುಖ್ಯ ಅಂತಾ ರಿಕ್ವೆಸ್ಟ್​ ಮಾಡಿದ್ದೆ.. ಶುಭ ನಿಷ್ಕಲ್ಮಶ ಮನಸ್ಸಿಂದ ಆಟ ಆಡಿದ್ರು.. ಅದೇ ಕಾರಣಕ್ಕೆ ಆಗ ನನಗೆ ಪಾಸ್​ ಸಿಕ್ತು.. ಇದೀಗ ನಾನು ಆ ಪಾಸ್​ ಅನ್ನು ಶುಭ ಅವರಿಗೆ ಕೊಡ್ತೀನಿ ಅಂತಾ ಪಾಸ್​ ನೀಡಿದ್ರು.. ರಾಜೀವ್​ ಹೋದ ನಂತರವೂ ಶುಭ ಬಿಕ್ಕಿ ಬಿಕ್ಕಿ ಅತ್ತರು.

The post ರಾಜೀವ್​​ನನ್ನ ಮನೆಯಿಂದ ಕಳಿಸೋವಾಗ ಬಿಕ್ಕಿ ಬಿಕ್ಕಿ ಅತ್ತ ಶುಭಪೂಂಜಾಗೆ ಸಿಕ್ತು ಗಿಫ್ಟ್ appeared first on News First Kannada.

Source: News First Kannada
Read More