ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಸೋಂಕು ಏರಿಕೆ ಹಾಗೂ ಆಕ್ಸಿಜನ್ ಕೊರತೆ ಹಿನ್ನೆಲೆ ರಾಜ್ಯದ ಹೈಕೋರ್ಟ್​ ಕರ್ನಾಟಕಕ್ಕೆ ಆಕ್ಸಿಜನ್ ಪೂರೈಕೆ ಹೆಚ್ಚಳ ಮಾಡುವಂತೆ ಕೇಂದ್ರಕ್ಕೆ ಹೇಳಿತ್ತು. ಇದೀಗ ಕರ್ನಾಟಕ ಹೈಕೋರ್ಟ್​ನ ಆದೇಶವನ್ನ ಪ್ರಶ್ನಿಸಿ ಕೇಂದ್ರ ಸರ್ಕಾರ ಸುಪ್ರೀಂಕೋರ್ಟ್ ಮೊರೆಹೋಗಿದೆ.

ರಾಜ್ಯಕ್ಕೆ ನೀಡುತ್ತಿರುವ ಆಕ್ಸಿಜನ್ ಪ್ರಮಾಣವನ್ನ 1700 ಮೆಟ್ರಿಕ್ ಟನ್ ಗೆ ಹೆಚ್ಚಳ ಮಾಡುವಂತೆ ಕೇಂದ್ರಕ್ಕೆ ಸೂಚಿಸಿ ಕರ್ನಾಟಕ ಹೈಕೋರ್ಟ್​ ಆದೇಶ ನೀಡಿತ್ತು. ಕೇಂದ್ರ ಕೇವಲ ₹862 ಗೆ ಮಾತ್ರ ಹೆಚ್ಚಳ ಮಾಡಿತ್ತು. ದೆಹಲಿ ಆಕ್ಸಿಜನ್ ಪ್ರಕರಣ ವಿಚಾರಣೆ ವೇಳೆ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು ಈ ವಿಚಾರವನ್ನು ನ್ಯಾ. ಚಂದ್ರಚೂಡ ಅವರ ಪೀಠದ ಮುಂದೆ ಪ್ರಸ್ತಾಪ ಮಾಡಿದ್ದಾರೆ. ಇದಕ್ಕೆ ಹೇಳಿಕೆ ನೀಡಿದ ನ್ಯಾ. ಚಂದ್ರಚೂಡ ಅವರ ಪೀಠ ಮುಖ್ಯನ್ಯಾಯಮೂರ್ತಿ ಎನ್​.ವಿ. ರಮಣ ಅವರ ಪೀಠದ ಮುಂದೆ ಪ್ರಸ್ತಾಪಿಸಲು ಸೂಚನೆ ನೀಡಿದೆ.

The post ರಾಜ್ಯಕ್ಕೆ ಆಕ್ಸಿಜನ್ ಪೂರೈಕೆ ಹೆಚ್ಚಿಸುವಂತೆ ಹೈಕೋರ್ಟ್ ಆದೇಶ; ಪ್ರಶ್ನಿಸಿ ಸುಪ್ರೀಂ ಮೊರೆ ಹೋದ ಕೇಂದ್ರ appeared first on News First Kannada.

Source: newsfirstlive.com

Source link