ಬೆಂಗಳೂರು: ಕೆಲವು ದಿನಗಳ ಹಿಂದೆ ಹೈಕೋರ್ಟ್ ರಾಜ್ಯಕ್ಕೆ ನೀಡುವ ಆಕ್ಸಿಜನ್ ಪ್ರಮಾಣವನ್ನ 1,200 ಮೆಟ್ರಿಕ್ ಟನ್​ಗೆ ಹೆಚ್ಚಿಸುವಂತೆ ಆದೇಶ ಹೊರಡಿಸಿತ್ತು. ಸದ್ಯ ಈ ಕುರಿತು ರಾಜ್ಯ ಸರ್ಕಾರ ಹೈಕೋರ್ಟ್​​ಗೆ.. ಸದ್ಯಕ್ಕೆ ಆಕ್ಸಿಜನ್ ಪೂರೈಕೆ ಪ್ರಮಾಣವನ್ನ 1,135 ಮೆಟ್ರಿಕ್ ಟನ್​ಗೆ ಹೆಚ್ಚಿಸಲಾಗಿದೆ. ರಾಜ್ಯದೊಳಗೆ ಆಕ್ಸಿಜನ್ ಹಂಚಿಕೆಗೆ ಮಾರ್ಗಸೂಚಿ ರೂಪಿಸಲಾಗಿದೆ ಎಂದು ಹೇಳಿದೆ.

ಕೇಂದ್ರ ಸರ್ಕಾರದ ಎಎಸ್ ಜಿ ಎಂ.ಬಿ.ನರಗುಂದ್ ಹೇಳಿಕೆ ನೀಡಿ.. ಆಕ್ಸಿಜನ್ ಪೂರೈಕೆಯನ್ನು 1,200 ಮೆ.ಟನ್ ಗೆ ಹೆಚ್ಚಳ ಮಾಡಲಾಗಿದೆ. ನಾಳೆ ಈ ಸಂಬಂಧ ವಿಡಿಯೋ ಕಾನ್ಫರೆನ್ಸ್ ಏರ್ಪಡಿಸಲಾಗಿದೆ.. ಎಜಿ ನೇತೃತ್ವದಲ್ಲಿ ಸಂಬಂಧಪಟ್ಟವರೊಂದಿಗೆ ಸಭೆ ನಡೆಯಲಿದೆ ಎಂದಿದ್ದಾರೆ.

ಈ ವೇಳೆ ಹೇಳಿಕೆ ದಾಖಲಿಸಿಕೊಂಡ ಹೈಕೋರ್ಟ್​..ಹಂಚಲಾಗಿರುವ ಆಕ್ಸಿಜನ್ ಪ್ರಮಾಣ ಸಾಕಾಗುತ್ತಿದೆಯೇ.? ಮುಂದಿನ ಒಂದು ವಾರದ ಬೇಡಿಕೆ ಲೆಕ್ಕಾಚಾರ ಮಾಡಿದ್ದೀರಾ.? ಎಂದು ರಾಜ್ಯ ಸರ್ಕಾರಕ್ಕೆ ಪ್ರಶ್ನಿಸಿದೆ. ಅಲ್ಲದೇ ಈ ಬಗ್ಗೆ ಅಂಕಿ ಅಂಶ ಸಲ್ಲಿಸಲು ಹೈಕೋರ್ಟ್ ಸೂಚನೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಸೂಚನೆ ನೀಡಿದೆ. ಸಿಜೆ ಎ.ಎಸ್.ಒಕಾ, ನ್ಯಾ.ಅರವಿಂದ್ ಕುಮಾರ್ ರವರಿದ್ದ ಪೀಠದಲ್ಲಿ ಈ ವಿಚಾರಣೆ ನಡೆದಿದೆ.

The post ರಾಜ್ಯಕ್ಕೆ ಆಕ್ಸಿಜನ್ ಪೂರೈಕೆಯನ್ನು 1,200 ಮೆಟ್ರಿಕ್​ ಟನ್​ಗೆ ಹೆಚ್ಚಿಸಲಾಗಿದೆ- ಹೈಕೋರ್ಟ್​ಗೆ ಕೇಂದ್ರ ಮಾಹಿತಿ appeared first on News First Kannada.

Source: newsfirstlive.com

Source link