ಬೆಂಗಳೂರು: ಇಸ್ರೇಲ್​ ದೇಶದಿಂದ ಇಂದು ರಾಜ್ಯಕ್ಕೆ ಎರಡು ಆಕ್ಸಿಜನ್ ಜನರೇಟರ್​ಗಳನ್ನು ನೀಡುವ ಮೂಲಕ ನೆರವು ನೀಡಿದೆ. ಈ ಒಂದೊಂದು ಆಕ್ಸಿಜನ್ ಜನರೇಟರ್​ಗಳೂ ಸಹ 100ಕ್ಕಿಂತ ಹೆಚ್ಚು ರೋಗಿಗಳಿಗೆ ಸಾಕಾಗುವಷ್ಟು ಆಕ್ಸಿಜನ್​ನ್ನು ಉತ್ಪಾದಿಸುತ್ತವೆ ಎಂದು ಇಸ್ರೇಲ್ ರಾಯಭಾರಿ ಮಾಹಿತಿ ನೀಡಿದ್ದಾರೆ.

ಇನ್ನು ಇಂಥ ಸಂಕಷ್ಟದ ಸಮಯದಲ್ಲಿ ಇಸ್ರೇಲ್ ಆಕ್ಸಿಜನ್ ಸಿಲಿಂಡರ್​​ಗಳನ್ನು ರಾಜ್ಯಕ್ಕೆ ಕಳುಹಿಸಿರುವುದಕ್ಕೆ ಸಿಎಂ ಬಿ.ಎಸ್. ಯಡಿಯೂರಪ್ಪ ಧನ್ಯವಾದ ಹೇಳಿದ್ದಾರೆ. ಈ ಆಕ್ಸಿಜನ್ ಸಿಲಿಂಡರ್​​ಗಳಿಂದಾಗಿ ರಾಜ್ಯದಲ್ಲಿ ಎದುರಾಗಿರುವ ಆಕ್ಸಿಜನ್ ಕೊರತೆಯ ಸಮಸ್ಯೆ ಕೊಂಚವಾದರೂ ಸುಧಾರಿಸಲಿದೆ ಎನ್ನಲಾಗಿದೆ.

The post ರಾಜ್ಯಕ್ಕೆ ಎರಡು ಆಕ್ಸಿಜನ್ ಜನರೇಟರ್​ ನೆರವು ನೀಡಿದ ಇಸ್ರೇಲ್ appeared first on News First Kannada.

Source: newsfirstlive.com

Source link