ರಾಜ್ಯಕ್ಕೆ ಕಾಲಿಟ್ತಾ ಮಂಕಿಪಾಕ್ಸ್? ಬೆಂಗಳೂರಿನಲ್ಲಿ ಪತ್ತೆಯಾಗಿದ್ದ ಶಂಕಿತ ಕೇಸ್ ಬಗ್ಗೆ ಸಚಿವ ಸುಧಾಕರ್ ಸ್ಪಷ್ಟನೆ | Health minister dr k sudhakar clarifies about monkeypox virus in karnataka


ರಾಜ್ಯದ ಗಡಿಗಳು ಸೇರಿದಂತೆ ವಿಮಾನ ನಿಲ್ದಾಣ, ಪೋರ್ಟ್ ಗಳಲ್ಲಿ ಮುಂಜಾಗೃತಾ ಕ್ರಮ ಕೈಗೊಳ್ಳಲಾಗಿದೆ. 24 ಗಂಟೆಗಳ ಮುಂಜಾಗೃತೆ ವಹಿಸಲಾಗಿದೆ. ಮೂರು ಪಾಳಯದಲ್ಲಿ ಆರೋಗ್ಯ ಇಲಾಖೆ ಅಧಿಕಾರಿಗಳು ಕರ್ತವ್ಯ ನಿರ್ವಹಿಸುತ್ತಿದ್ದಾರೆ.

ರಾಜ್ಯಕ್ಕೆ ಕಾಲಿಟ್ತಾ ಮಂಕಿಪಾಕ್ಸ್? ಬೆಂಗಳೂರಿನಲ್ಲಿ ಪತ್ತೆಯಾಗಿದ್ದ ಶಂಕಿತ ಕೇಸ್ ಬಗ್ಗೆ ಸಚಿವ ಸುಧಾಕರ್ ಸ್ಪಷ್ಟನೆ

ಸಚಿವ ಡಾ. ಕೆ ಸುಧಾಕರ್

ಚಿಕ್ಕಬಳ್ಳಾಪುರ: ಸಚಿವ ಡಾ.ಕೆ.ಸುಧಾಕರ್(Dr K Sudhakar) ಚಿಕ್ಕಬಳ್ಳಾಪುರದಲ್ಲಿ ಪಿಎಲ್ಡಿ ಬ್ಯಾಂಕ್ನ ನೂತನ ಕಟ್ಟಡ ಉದ್ಘಾಟನೆ ಮಾಡಿದರು. 5 ಕೋಟಿ ರೂಪಾಯಿ ವೆಚ್ಚದಲ್ಲಿ ಬ್ಯಾಂಕ್ನ ನೂತನ ಕಟ್ಟಡ ಉದ್ಘಾಟನೆ ಮಾಡಲಾಗಿದೆ. ಕಾರ್ಯಕ್ರಮದಲ್ಲಿ ಸಚಿವ ಸುಧಾಕರ್ಗೆ ಪೌರಾಡಳಿತ ಸಚಿವ ಎಂಟಿಬಿ ನಾಗರಾಜ್, ಶಾಸಕರು, ಸಾಥ್ ಕೊಟ್ಟರು. ಇನ್ನು ಈ ವೇಳೆ ಮಂಕಿಪಾಕ್ಸ್(Monkeypox Virus) ಬಗ್ಗೆ ಮಾತನಾಡಿದ್ದು ರಾಜ್ಯದಲ್ಲಿ ಮಂಕಿಪಾಕ್ಸ್ ಬಂದಿದೆ ಎಂಬ ಅನುಮಾನಗಳಿಗೆ ಸ್ಪಷ್ಟನೆ ನೀಡಿದ್ದಾರೆ.

ಇಥೋಪಿಯಾದಿಂದ ಬಂದ ವ್ಯಕ್ತಿಯಲ್ಲಿ ಮಂಕಿ ಪಾಕ್ಸ್ ಲಕ್ಷಣಗಳು ಕಂಡು ಬಂದ ವಿಚಾರಕ್ಕೆ ಚಿಕ್ಕಬಳ್ಳಾಪುರದಲ್ಲಿ ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಪ್ರತಿಕ್ರಿಯೆ ನೀಡಿದರು. ಮಂಕಿಪಾಕ್ಸ್ ಟೆಸ್ಟಿಂಗ್ ವರದಿ ಬಂದಿದ್ದು ಅದು ಸ್ಮಾಲ್ ಪಾಕ್ಸ್ ಆಗಿದೆ. ರಾಜ್ಯದಲ್ಲಿ ಇಲ್ಲಿಯವರೆಗೂ ಮಂಕಿಪಾಕ್ಸ್ ಬಂದಿಲ್ಲ. ರಾಜ್ಯದ ಗಡಿಗಳು ಸೇರಿದಂತೆ ವಿಮಾನ ನಿಲ್ದಾಣ, ಪೋರ್ಟ್ ಗಳಲ್ಲಿ ಮುಂಜಾಗೃತಾ ಕ್ರಮ ಕೈಗೊಳ್ಳಲಾಗಿದೆ. 24 ಗಂಟೆಗಳ ಮುಂಜಾಗೃತೆ ವಹಿಸಲಾಗಿದೆ. ಮೂರು ಪಾಳಯದಲ್ಲಿ ಆರೋಗ್ಯ ಇಲಾಖೆ ಅಧಿಕಾರಿಗಳು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಬೇರೆ ಬೇರೆ ರಾಜ್ಯದಲ್ಲಿ ಮಂಕಿಪಾಕ್ಸ್ ಕಾಣಿಸಿದೆ. ಆದ್ರೆ ರಾಜ್ಯ ಪ್ರವೇಶ ಮಾಡಲು ಅವಕಾಶ ಕೊಟ್ಟಿಲ್ಲ ಎಂದು ಮಾಹಿತಿ ನೀಡಿದರು.

ಮಂಕಿಪಾಕ್ಸ್ ಮುನ್ನೆಚ್ಚರಿಕೆ ಹಿನ್ನೆಲೆ ಕರ್ನಾಟಕದಲ್ಲಿ ಹೈ ಅಲರ್ಟ್ ಮಾಡಲಾಗಿದೆ. ಸೋಂಕು ಪೀಡಿತ ದೇಶಗಳಿಂದ ಬರುವ ಪ್ರಯಾಣಿಕರಿಗೆ ಆರೋಗ್ಯ ತಪಾಸಣೆ ಮಾಡಲಾಗುತ್ತದೆ. ಬೆಂಗಳೂರು, ಮಂಗಳೂರು ಏರ್ ಪೋರ್ಟ್ಗಳಲ್ಲಿ ಅಧಿಕಾರಿಗಳು ಅಲರ್ಟ್ ಆಗಿದ್ದಾರೆ. ಶೀತ- ಜ್ವರ, ತಲೆನೋವು, ಸ್ನಾಯು ಸೆಳೆತ, ಆಯಾಸ, ಗಂಟಲು ಕೆರೆತ, ಕೆಮ್ಮು, ಚರ್ಮ ತುರಿಕೆ ಲಕ್ಷಣಗಳು ಕಂಡು ಬರುವ ಪ್ರಯಾಣಿಕರಿಗೆ ತಪಾಸಣೆ ತಪಾಸಣೆ ನಡೆಸಲಾಗುತ್ತದೆ ಎಂದು ಸಚಿವ ಸುಧಾಕರ್ ಟ್ವೀಟ್ನಲ್ಲಿ ತಿಳಿಸಿದ್ದರು.

ತಾಜಾ ಸುದ್ದಿ

TV9 Kannada


Leave a Reply

Your email address will not be published. Required fields are marked *