ಬೆಂಗಳೂರು: ರಾಜ್ಯದಲ್ಲಿ ಆಕ್ಸಿಜನ್ ಕೊರತೆ ಹಿನ್ನೆಲೆ ಕೇಂದ್ರ ಸರ್ಕಾರ ಎರಡನೇ ಹಂತದಲ್ಲಿ 120 ಟನ್ ಆಕ್ಸಿಜನ್​ನ್ನು ರಾಜ್ಯಕ್ಕೆ ಕಳುಹಿಸಿದೆ.

ಕಳಿಂಗನಗರದಿಂದ ಬೆಂಗಳೂರಿನ ವೈಟ್​ಫೀಲ್ಡ್​​ ರೈಲು ನಿಲ್ದಾಣಕ್ಕೆ ಆಕ್ಸಿಜನ್ ಹೊತ್ತು ತಂದ ರೈಲು ತಲುಪಿದೆ. ಎರಡನೇ ಆಕ್ಸಿಜನ್ ರೈಲು ಆಗಮಿಸಿದ ಬಗ್ಗೆ ರೈಲ್ವೇ ಇಲಾಖೆ ಅಧಿಕೃತ ಟ್ವಿಟರ್​ ಖಾತೆಯಲ್ಲಿ ಮಾಹಿತಿ ನೀಡಿದ್ದು.. ಕರ್ನಾಟಕದ ಎರಡನೇ ಆಕ್ಸಿಜನ್ ಎಕ್ಸ್​ಪ್ರೆಸ್ ರೈಲು ಕಳಿಂಗನಗರದಿಂದ 120 ಟನ್ ಆಕ್ಸಿಜನ್ ಹೊತ್ತು ಇಂದು ಬೆಳಗಿನ ಜಾವ ಬೆಂಗಳೂರಿಗೆ ತಲುಪಿದೆ ಎಂದು ಹೇಳಿದೆ.

ಇತ್ತೀಚೆಗೆ ಟಾಟಾನಗರದಿಂದ ಮೊದಲ ಹಂತದಲ್ಲಿ 120 ಟನ್ ಆಕ್ಸಿಜನ್ ಹೊತ್ತು ತಂದಿದ್ದ ಎಕ್ಸ್​ಪ್ರೆಸ್ ರೈಲು ನಂತರ ಇಲ್ಲಿಂದ ಖಾಲಿ ಕಂಟೈನರ್​ಗಳನ್ನ ತುಂಬಿಕೊಂಡು ಕಳಿಂಗನಗರಕ್ಕೆ ತೆರಳಿತ್ತು. ಇದೀಗ ಅದೇ ಖಾಲಿ ಕಂಟೈನರ್​ಗಳಲ್ಲಿ ರಾಜ್ಯಕ್ಕೆ ಆಕ್ಸಿಜನ್ ಬಂದಿಳಿದಿದೆ.
ಇನ್ನು ಇಂದು ಸಂಜೆ ಆಕ್ಸಿಜನ್ ಹೊತ್ತು ತರಲಿರುವ ಮೂರನೇ ರೈಲು ಬೆಂಗಳೂರು ತಲುಪಲಿದೆ. ಈ ರೈಲಿನಲ್ಲೂ ಸಹ 120 ಟನ್ ಆಕ್ಸಿಜನ್ ರಾಜ್ಯಕ್ಕೆ ಬಂದಿಳಿಯಲಿದೆ ಎನ್ನಲಾಗಿದೆ.

The post ರಾಜ್ಯಕ್ಕೆ ಬಂತು ಮತ್ತೊಂದು ಆಕ್ಸಿಜನ್ ಹೊತ್ತ ರೈಲು.. 120 ಟನ್ ಪ್ರಾಣವಾಯು ಹೊತ್ತುತಂದ ಎಕ್ಸ್​ಪ್ರೆಸ್ appeared first on News First Kannada.

Source: newsfirstlive.com

Source link