ರಾಜ್ಯಕ್ಕೆ ಬೇಕಾಗಿರುವ ಶೇ.50ರಷ್ಟು ಲಸಿಕೆ ಉಚಿತವಾಗಿ ಕೇಂದ್ರ ಪೂರೈಸಬೇಕೆಂದ ಹೈ ಕೋರ್ಟ್

ರಾಜ್ಯಕ್ಕೆ ಬೇಕಾಗಿರುವ ಶೇ.50ರಷ್ಟು ಲಸಿಕೆ ಉಚಿತವಾಗಿ ಕೇಂದ್ರ ಪೂರೈಸಬೇಕೆಂದ ಹೈ ಕೋರ್ಟ್

ಬೆಂಗಳೂರು: ಕೊರೊನಾ ವ್ಯಾಕ್ಸಿನ್ ವಿಚಾರ ಸಂಬಂಧ ಸಲ್ಲಿಕೆಯಾಗಿದ್ದ ಪಿಐಎಲ್​ ಅರ್ಜಿಗಳ ವಿಚಾರಣೆಯು ಮುಖ್ಯ ನ್ಯಾಯಮೂರ್ತಿ ಓಕಾ & ನ್ಯಾ. ಅರವಿಂದ ಕುಮಾರ್ ನೇತೃತ್ವದ ವಿಭಾಗೀಯ ಪೀಠದಲ್ಲಿ ಇಂದು ನಡೆಯಿತು.

ವಿಚಾರಣೆ ವೇಳೆ ಖಾಸಗಿ ಆಸ್ಪತ್ರೆಗಳಲ್ಲಿ ಕೊರೊನಾ ವ್ಯಾಕ್ಸಿನ್ ನೀಡುವ ವಿಚಾರ ಪ್ರಸ್ತಾಪವಾಯ್ತು. ಖಾಸಗಿ ಆಸ್ಪತ್ರೆಗಳ ಒಕ್ಕೂಟ ಫನಾ, ‘ನಾವು ಆಸ್ಪತ್ರೆಗಳಲ್ಲಿ ಕೋವಿಶೀಲ್ಡ್ ಮೊದಲ ಡೋಸ್ ಸಹ ನೀಡುತ್ತಿದ್ದೇವೆ’ ಅಂತಾ ಕೋರ್ಟ್​ಗೆ ತಿಳಿಸಿತು. ಅದಕ್ಕೆ ಹೈಕೋರ್ಟ್​​.. ಖಾಸಗಿ ಆಸ್ಪತ್ರೆಗಳು ಕೋವಿಶೀಲ್ಡ್ ನೀಡುತ್ತಿರುವ ಬಗ್ಗೆ ಏನು ಮಾಡುತ್ತಿದ್ದಿರಿ? ಎಂದು ರಾಜ್ಯ ಸರ್ಕಾರವನ್ನ ಪ್ರಶ್ನೆ ಮಾಡಿತು. ಮುಂದುವರಿದು ಈ ವಿಚಾರದಲ್ಲಿ ಫನಾದ ನಿಲುವು ಸ್ಪಷ್ಟವಾಗಿದೆ. ಇದು ಅವರಿಗೆ ಅಂತಿಮವಾಗಿ ಉದ್ಯಮವಷ್ಟೇ. ಇದು ಆರೋಗ್ಯ ಕ್ಷೇತ್ರದ ಅತ್ಯಂತ ಅಗತ್ಯವಾದ ವಿಭಾಗ ಎಂದು ಹೈಕೋರ್ಟ್​ ಹೇಳಿತು.

ಅದಕ್ಕೆ ಫನಾ ರಿಜಿಸ್ಟರ್ ಮಾಡಿಕೊಂಡವರಿಗೆ ವ್ಯಾಕ್ಸಿನ್ ಕೊಡಬೇಕಲ್ವೇ? ಅಂತಾ ಹೇಳಿತು. ವ್ಯಾಕ್ಸಿನ್ ನೀಡಿಕೆಯಲ್ಲಿ‌ ಖಾಸಗಿ ಆಸ್ಪತ್ರೆಗಳು ಮಾರ್ಗಸೂಚಿ ಉಲ್ಲಂಘಿಸಿವೆ. ಅವರ ವಿರುದ್ಧ ಯಾವುದೇ ಕ್ರಮ ತೆಗೆದುಕೊಂಡಿಲ್ಲವೇಕೆ? ಎಂದು ಹೈಕೋರ್ಟ್ ಸರ್ಕಾರವನ್ನ ಪ್ರಶ್ನೆ ಮಾಡಿತು.

ಶೇ. 50 ರಷ್ಟು ಲಸಿಕೆ ಪೂರೈಸಲು ಆದೇಶ
ಅವರ ಉಲ್ಲಂಘನೆ ಸ್ವಲ್ಪ ಇದೆ, ನೀಡಿರುವುದು 18 ಸಾವಿರ ಡೋಸ್​ಗಳಷ್ಟೇ ಅಂತಾ ನ್ಯಾಯಪೀಠಕ್ಕೆ ಎಎಸ್​ಜಿ ಮಾಹಿತಿ ನೀಡಿದರು. ‘ಇಂದು ವ್ಯತ್ಯಾಸ ಚಿಕ್ಕದು, ನಾಳೆ ದೊಡ್ಡದು ಆಗಬಹುದು. ರಾಜ್ಯಕ್ಕೆ ಬೇಕಾಗಿರುವ ಶೇಕಡಾ 50ರಷ್ಟು ಲಸಿಕೆಯನ್ನು ಉಚಿತವಾಗಿ ಪೂರೈಸಬೇಕು’ ಅಂತಾ ಕೇಂದ್ರ ಸರ್ಕಾರಕ್ಕೆ ಹೈಕೋರ್ಟ್ ವಿಭಾಗೀಯ ಪೀಠ ಆದೇಶ ನೀಡಿತು.

ಉಳಿದ ಶೇಕಡಾ 50% ರಲ್ಲಿ 25%ರಷ್ಟು ಲಸಿಕೆಯನ್ನು ನೇರವಾಗಿ ರಾಜ್ಯ ಸರ್ಕಾರ ಕಾರ್ಯಾದೇಶ ಮಾಡಿ ಪಡೆಯಬಹುದು. ಅಲ್ಲದೇ ಅದನ್ನ ಉಚಿತವಾಗಿ ನೀಡಲು ರಾಜ್ಯ ಬಳಸಬಹುದು. ಇನ್ನುಳಿದ ಶೇಕಡಾ 25%ನ್ನ ಖಾಸಗಿಯವರು ಪೂರೈಕೆದಾರರು ಉತ್ಪಾದಕರಿಂದ ನೇರವಾಗಿ ಖರೀದಿಸಬಹುದು. ರಾಜ್ಯ ಮೊದಲು ಎರಡನೇ ಡೋಸ್ ಅಗತ್ಯವನ್ನ ಪರಿಗಣಿಸಬೇಕು. ಜೊತೆಗೆ 18-44ರ ವಯೋಮಾನದಲ್ಲಿ ಮುಂಚೂಣಿ ಕಾರ್ಯಕರ್ತರಿಗೆ ಕೋವಿಶೀಲ್ಡ್ ಮೊದಲ ಡೋಸ್ ಆದ್ಯತೆ ನೀಡಿ ಎಂದು ಕೋರ್ಟ್​ ಸೂಚಿಸಿತು.

ಆದ್ಯತಾ ಪಟ್ಟಿಯಲ್ಲಿರೋರಿಗೆ ಮೊದಲು ವ್ಯಾಕ್ಸಿನ್
ಶೇ.75ರಷ್ಟು ಲಸಿಕೆಯಲ್ಲಿ ಕೋವ್ಯಾಕ್ಸಿನ್ ಫಸ್ಟ್ ಡೋಸ್ ಯಾವುದೇ ವಯೋಮಾನದವರಿಗೆ ನೀಡಲು ಆಗಿಲ್ಲ. ಸೆಕೆಂಡರಿ ಸದ್ಯ 18-44 ವಯೋಮಾನ ವಿಭಾಗದಲ್ಲಿ ಮುಂಚೂಣಿ ಕಾರ್ಯಕರ್ತರಿಗೆ ಮಾತ್ರ ಕೋವಿಶೀಲ್ಡ್ ಮೊದಲ ಡೋಸ್ ನೀಡಲಾಗಿದೆ. ಕೋವಿಡ್ ನಿಯಂತ್ರಿಸಲು ಲಸಿಕೆ ನೀಡುವುದು ಅತ್ಯಗತ್ಯ. 45 ವರ್ಷ ಮೇಲಿನ, 18-44 ವರ್ಷದವರಲ್ಲಿ ಆದ್ಯತಾ ಪಟ್ಟಿಯಲ್ಲಿರೋರಿಗೆ ಮೊದಲ ಡೋಸ್ ನೀಡಬೇಕು. ಈ ಬಗ್ಗೆ ಸರ್ಕಾರ ಕಾರ್ಯ ಯೋಜನೆ ಸಿದ್ಧಪಡಿಸಬೇಕು. ಮುಂದಿನ ವಾರದೊಳಗೆ ರಾಜ್ಯ ಸರ್ಕಾರ ತನ್ನ ನಿಲುವು ಸ್ಪಷ್ಟಪಡಿಸಬೇಕು.

ಸರ್ಕಾರ ಸಲಹೆ ನೀಡಿದೇ ನಿರ್ದೇಶನ ನೀಡಿಲ್ಲ. ರಿಜಿಸ್ಟರ್ ಮಾಡಿಕೊಂಡೋರಿಗೆ ನಾವು ಕೋವ್ಯಾಕ್ಸಿನ್ ಸಹ ನೀಡಬೇಕಿದೆ. ಇದನ್ನ ಬಿಟ್ಟು ಬೇರೆ ಆಯ್ಕೆ ಇಲ್ಲ ಎಂದು ಫನಾ ಹೇಳ್ತಿದೆ. ಸಂವಿಧಾನ ಕಲಂ 14ರಡಿ ಕೇಂದ್ರ & ರಾಜ್ಯ ಸರ್ಕಾರ ಪರಿಸ್ಥಿತಿ ಪರಿಶೀಲಿಸಬೇಕು. ಶೇಕಡಾ 25 ಲಸಿಕೆ ಪಡೆದಿರುವ ಖಾಸಗಿ ಆಸ್ಪತ್ರೆಗಳಿಗೆ ನಿರ್ದೇಶನ ನೀಡಲು ರಾಜ್ಯ & ಕೇಂದ್ರ ಸರ್ಕಾರಗಳಿಗೆ ಸೂಚಿಸಿತು.

The post ರಾಜ್ಯಕ್ಕೆ ಬೇಕಾಗಿರುವ ಶೇ.50ರಷ್ಟು ಲಸಿಕೆ ಉಚಿತವಾಗಿ ಕೇಂದ್ರ ಪೂರೈಸಬೇಕೆಂದ ಹೈ ಕೋರ್ಟ್ appeared first on News First Kannada.

Source: newsfirstlive.com

Source link