ಬೆಂಗಳೂರು: ರಾಜ್ಯ ಉಪಚುನಾವಣಾ ಫಲಿತಾಂಶದಲ್ಲಿ ಬಿಜೆಪಿ ಬಸವಕಲ್ಯಾಣ ವಿಧಾನಸಭೆ ಹಾಗೂ ಬೆಳಗಾವಿ ಲೋಕಸಭಾ ಉಪಚುನಾವಣೆಯಲ್ಲಿ ಗೆಲುವು ಪಡೆದಿದ್ದು, ಮಸ್ಕಿ ಕ್ಷೇತ್ರದಲ್ಲಿ ಸೋಲುಂಡಿದೆ. ಚುನಾವಣಾ ಮತ ಎಣಿಕೆಯ ನಡುವೆಯೂ ರಾಜ್ಯ ಮುಖ್ಯ ಕಾರ್ಯದರ್ಶಿಯೊಂದಿಗೆ ಫೋನ್​ ಮೂಲಕ ಚರ್ಚೆ ನಡೆಸಿರುವ ಸಿಎಂ ಬಿಎಸ್​ ಯಡಿಯೂರಪ್ಪ ಅವರು, ರಾಜ್ಯಕ್ಕೆ 30 ಟನ್​ ಆಕ್ಸಿಜನ್​​ ತರಿಸಲು ಅಗತ್ಯವಿರುವ ಸಿದ್ಧತೆ ತಯಾರಿ ನಡೆಸಲು ಹೇಳಿದ್ದಾರೆ.
ರಾಜ್ಯದಲ್ಲಿ ಉಂಟಾಗಿರುವ ಆಕ್ಸಿಜನ್​ ಸಮಸ್ಯೆಯನ್ನು ದೂರವಾಗಿಸಲು ಸರ್ಕಾರ ಭುವನೇಶ್ವರದಿಂದ 30 ಟನ್​​​ ಆಕ್ಸಿಜನ್​ ತರಿಸಿಕೊಳ್ಳಲು ಏರ್​ ಲಿಫ್ಟ್​ ಮೂಲಕ ಎರಡು ಖಾಲಿ ಟ್ಯಾಂಕರ್​​ಗಳನ್ನು ರವಾನೆ ಮಾಡಿತ್ತು. ನಾಳೆ ಬೆಳಗ್ಗೆ ಭುವನೇಶ್ವರದಿಂದ ರಸ್ತೆ ಮಾರ್ಗವಾಗಿ ಆಕ್ಸಿಜನ್ ತುಂಬಿರುವ ಟ್ಯಾಂಕರ್​​ಗಳು ಹೊರಡಲಿದ್ದು, ಮಂಗಳವಾರ ಅಥವಾ ಬುಧವಾರ ರಾಜ್ಯಕ್ಕೆ ಟ್ಯಾಂಕರ್​​ಗಳು ತಲುಪುವ ಸಾಧ್ಯತೆ ಇದೆ.

The post ರಾಜ್ಯಕ್ಕೆ ಭುವನೇಶ್ವರದಿಂದ 30 ಟನ್​​ ಆಕ್ಸಿಜನ್​​- ಸಿಎಸ್​ರೊಂದಿಗೆ ಸಿಎಂ ಬಿಎಸ್​​ವೈ ಚರ್ಚೆ appeared first on News First Kannada.

Source: newsfirstlive.com

Source link