ಬೆಂಗಳೂರು: 2023ರ ಚುನಾವಣೆಗೂ ಮುನ್ನ ಕಮಲ ಮನೆ ಬಹುದೊಡ್ಡ ಬದಲಾವಣೆಯ ಪರ್ವಕ್ಕೆ ಸಾಕ್ಷಿಯಾಗುವ ಲಕ್ಷಣ ಹೆಚ್ಚಾಗಿದೆ. ಪಕ್ಷ ಸಂಘಟಿಸಿ, ಚುನಾವಣೆಗೆ ಸಿದ್ಧತೆ ಮಾಡಿಕೊಳ್ಳುವುದರ ಜೊತೆಗೆ ಕಮಲ ಸಾರಥಿ ಕಟೀಲ್ ಬದಲಾವಣೆಗೂ ತೆರೆಮರೆಯ ಸಿದ್ಧತೆ ನಡೆದಿದೆಯಂತೆ. ಈ ಚಿಂತನೆ ಹೈಕಮಾಂಡ್ ಮೈಂಡ್ಗೆ ಬರುತ್ತಲೇ ಮೂವರು ರೇಸ್ಗೆ ಇಳಿದುಬಿಟ್ಟಿದ್ದಾರೆ.
2023ರ ಚುನಾವಣೆಗೂ ಮುನ್ನ ಬಿಜೆಪಿಯಲ್ಲಿ ಬದಲಾವಣೆ ಪರ್ವ
ನಳಿನ್ ಕುಮಾರ್ ಕಟೀಲ್ ಉತ್ತರಾಧಿಕಾರಿಗಾಗಿ ‘ಹೈ’ ಹುಡುಕಾಟ?
ಹೌದು. ಹೀಗೊಂದು ವಿಚಾರ ಸದ್ಯ ಸಂಚಲನ ಸೃಷ್ಟಿಸಿದೆ. 2023ರ ಚುನಾವಣೆಗೂ ಮುನ್ನ ಕಮಲ ಮನೆಯಲ್ಲಿ ಬದಲಾವಣೆ ಪರ್ವ ನಡೆಯಲಿದೆ. ಸಿಎಂ ಬಳಿಕ ಪಕ್ಷದಲ್ಲೂ ಬದಲಾವಣೆಯ ಮಂತ್ರ ಜಪಿಸಿರುವ ಹೈಕಮಾಂಡ್, ಬಿಜೆಪಿ ಸಾರಥಿ ಬದಲಿಸಲು ಚಿಂತನೆ ನಡೆಸಿದೆ ಎನ್ನಲಾಗ್ತಿದೆ. ಕಟೀಲ್ ಉತ್ತರಾಧಿಕಾರಿಗಾಗಿ ಹುಡುಕಾಟ ಕೂಡ ನಡೆಯುತ್ತಿದೆಯಂತೆ.
ಕೇಸರಿ ಪಡೆಗೆ ಹೊಸ ಸಾರಥಿ?
ಬಿಜೆಪಿಯಲ್ಲಿ ಮಹತ್ವದ ಬದಲಾವಣೆಗೆ ತೆರೆಮರೆಯ ಸಿದ್ಧತೆ ನಡೆದಿದೆ. ನಳಿನ್ ಕುಮಾರ್ ಕಟೀಲ್ ಉತ್ತರಾಧಿಕಾರಿಗಾಗಿ ಬಿಜೆಪಿ ಹುಡುಕಾಟದಲ್ಲಿದೆ. ಪಕ್ಷ ಸಂಘಟಿಸಿ, ಚುನಾವಣೆಗೆ ಸಿದ್ಧತೆ ಮಾಡಿಕೊಳ್ಳುವ ಜೊತೆಗೆ ಕಟೀಲ್ ಸ್ಥಾನಕ್ಕೆ ಬೇರೆಯವರನ್ನು ತರಬೇಕೆ ಎಂಬ ಚರ್ಚೆ ಕೂಡ ನಡೀತಿದೆ. ಹೈಕಮಾಂಡ್ನಿಂದ ಕಟೀಲ್ ಬದಲಾವಣೆ ಬಗ್ಗೆ ಚಿಂತನೆ ನಡೆದಿರೋದು ಸದ್ಯ ಬಿಜೆಪಿ ರಾಜ್ಯಾಧ್ಯಕ್ಷ ಯಾರಾಗ್ತಾರೆ ಎಂಬ ಕುತೂಹಲಕ್ಕೆ ಕಾರಣವಾಗಿದೆ.
ಮೂವರಲ್ಲಿ ಯಾರಿಗೆ ಸಾರಥಿ ಪಟ್ಟ?
- ಸಿ.ಟಿ.ರವಿ, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ
- ಆರ್.ಅಶೋಕ್, ಕಂದಾಯ ಸಚಿವ
- ಅರವಿಂದ ಲಿಂಬಾವಳಿ, ರಾಜ್ಯ ಉಪಾಧ್ಯಕ್ಷ
ಇತ್ತ ಉತ್ತರಾಧಿಕಾರಿಗಾಗಿ ಹುಡುಕಾಟ ನಡೆಯುತ್ತಿರುವ ಬೆನ್ನಲ್ಲೇ ಸಿಎಂ ನಿವಾಸದಲ್ಲಿ ಕಟೀಲ್ ರಹಸ್ಯ ಸಭೆ ನಡೆಸಿದ್ದಾರಂತೆ.
ಸಿಎಂ ನಿವಾಸದಲ್ಲಿ ರಹಸ್ಯ ಸಭೆ
- ಸಿಎಂ ಖಾಸಗಿ ನಿವಾಸಕ್ಕೆ ಭೇಟಿ ನೀಡಿ ಚರ್ಚೆ ನಡೆಸಿದ ಕಟೀಲ್
- ಸುಮಾರು 40 ನಿಮಿಷಗಳ ಕಾಲ ಸಿಎಂ ಜೊತೆ ಗೌಪ್ಯ ಮಾತುಕತೆ
- ರಾಜ್ಯಕ್ಕೆ ಬಿಜೆಪಿ ಉಸ್ತುವಾರಿ ಆಗಿರುವ ಅರುಣ್‌ಸಿಂಗ್ ಆಗಮನ
- ಬಿಬಿಎಂಪಿ ಚುನಾವಣೆಗೆ ಬಿಜೆಪಿ ಸಿದ್ಧತೆ ಕುರಿತಂತೆ ಮಾತುಕತೆ
- ಮೊನ್ನೆ ನಡೆದಿರುವ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಣಿ ಬಗ್ಗೆ ಚರ್ಚೆ
2023ರ ಗೆಲುವಿಗಾಗಿ ಕಾರ್ಯತಂತ್ರ ರೂಪಿಸುತ್ತಿರುವ ಬಿಜೆಪಿ ಸದ್ಯ ರಾಜ್ಯ ಸಾರಥಿಯ ಬದಲಾಣೆಗೂ ಚಿಂತನೆ ನಡೆಸಿದೆ. ಕಟೀಲ್ ಉತ್ತರಾಧಿಕಾರಿಗಾಗಿ ಬಿಜೆಪಿ ಶೋಧ ಆರಂಭವಾಗಿದ್ದು, ಹಾಗೊಂದು ವೇಳೆ ಬದಲಾವಣೆ ಫಿಕ್ಸೇ ಆದ್ರೆ ರೇಸ್ನಲ್ಲಿರೋ ಮೂವರಲ್ಲಿ ರಾಜ್ಯಾಧ್ಯಕ್ಷ ಯಾರಾಗ್ತಾರೆ ಅನ್ನೋದೆ ಸದ್ಯದ ಕುತೂಹಲ.
ವಿಶೇಷ ವರದಿ: ಮಧುಸೂದನ್, ಪೊಲಿಟಿಕಲ್ ಬ್ಯೂರೋ