ಬೆಂಗಳೂರು: ಕರ್ನಾಟಕದಲ್ಲಿ ಮಾರಕ ಕೊರೊನಾ ಆರ್ಭಟ ಮುಂದುವರಿದೆ. ಕಳೆದ 24 ಗಂಟೆಯಲ್ಲಿ 1,708 ಮಂದಿಗೆ ಕೊರೊನಾ ವೈರಸ್​​ ಪಾಸಿಟಿವ್ ಕೇಸ್​ಗಳು​​ ಕಾಣಿಸಿಕೊಂಡಿವೆ. ಈ ಮೂಲಕ ಒಟ್ಟು ಸೋಂಕಿತರ ಸಂಖ್ಯೆ 28,83,947ಕ್ಕೆ ಏರಿಕೆಯಾಗಿದೆ.

ಇನ್ನು, ಒಂದೇ ದಿನದಲ್ಲಿ ಈ ಕೋವಿಡ್​​ನಿಂದ 36 ಮಂದಿ ಅಸುನೀಗಿದ್ದಾರೆ. ಇದರಿಂದ ಸೋಂಕಿಗೆ ಇದುವರೆಗೂ ಬಲಿಯಾದವರ ಸಂಖ್ಯೆ 36,157ಕ್ಕೆ ಏರಿಕೆಯಾಗಿದೆ. ಇಂದು ಸುಮಾರು 2,463 ಮಂದಿ ಸಂಪೂರ್ಣ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್​​ ಆಗಿದ್ದಾರೆ. ಇದರೊಂದಿಗೆ ಕೊಒನಾದಿಂದ ಕ್ಯಾರ್​​ ಆದವರ ಸಂಖ್ಯೆ 28,18,476 ಆಗಿದೆ.

ಇಂದಿನ ಕೊರೊನಾ ಪಾಸಿಟಿವಿಟಿ ದರ ಶೇ.1.09 ಇದ್ದು, ಸಾವಿನ ಪ್ರಮಾಣದ ದರ ಶೇ.2.10 ಇದೆ. ಇದರ ನಡುವೆಯೇ ರಾಜ್ಯ ಸರ್ಕಾರ ಅನ್ ಲಾಕ್ 4.O ಜಾರಿಗೆ ಮಾರ್ಗಸೂಚಿ ಬಿಡುಗಡೆ ಮಾಡಿ ಆದೇಶಿಸಿದೆ.

The post ರಾಜ್ಯದಲ್ಲಿಂದು 1,708 ಕೇಸ್​​ ಪತ್ತೆ.. 36 ಮಂದಿ ಸಾವು appeared first on News First Kannada.

Source: newsfirstlive.com

Source link