ಬೆಂಗಳೂರು: ರಾಜ್ಯದಲ್ಲಿ ಇಂದು 29,885 ಱಪಿಡ್ ಆ್ಯಂಟಿಜೆನ್ ಟೆಸ್ಟ್ ಹಾಗೂ 1,07,758 ಆರ್​ಟಿಪಿಸಿಆರ್ ಟೆಸ್ಟ್​ಗಳೂ ಸೇರಿದಂತೆ ಒಟ್ಟು 1,37,643 ಕೊರೊನಾ ಪರೀಕ್ಷೆಗಳನ್ನು ನಡೆಸಲಾಗಿದೆ. ಈ ಪೈಕಿ ಕಳೆದ 24 ಗಂಟೆಗಳಲ್ಲಿ 24,214 ಮಂದಿಗೆ ಕೊರೊನಾ ಪಾಸಿಟಿವ್ ಆಗಿರುವುದು ಪತ್ತೆಯಾಗಿದೆ. ಇನ್ನು ರಾಜ್ಯದಲ್ಲಿ ಈವರೆಗೆ ಸೋಂಕಿಗೊಳಗಾದವರ ಸಂಖ್ಯೆ 25,23,998 ಕ್ಕೆ ಏರಿಕೆಯಾಗಿದೆ.

31,459 ಮಂದಿ ಇಂದು ಸೋಂಕಿನಿಂದ ಗುಣಮಖರಾಗಿದ್ದು ಈವರೆಗೆ ಒಟ್ಟು 20,94,369 ಮಂದಿ ಆಸ್ಪತ್ರೆಗಳಿಂದ ಡಿಸ್ಚಾರ್ಜ್ ಆಗಿದ್ದಾರೆ. ಸೋಂಕಿನಿಂದಾಗಿ ಇಂದು 476 ಮಂದಿ ಸಾವನ್ನಪ್ಪಿದ್ದು ಈವರೆಗೆ ಸೋಂಕಿಗೆ ಬಲಿಯಾದವರ ಸಂಖ್ಯೆ 27,405 ಕ್ಕೆ ಏರಿಕೆಯಾಗಿದೆ. ಸದ್ಯ ರಾಜ್ಯದಲ್ಲಿ 4,02,203 ಆ್ಯಕ್ಟಿವ್ ಕೇಸ್​ಗಳಿವೆ ಎಂದು ಆರೋಗ್ಯ ಇಲಾಖೆಯ ಅಂಕಿಅಂಶಗಳು ಹೇಳುತ್ತಿವೆ.

ಬೆಂಗಳೂರು ನಗರವೊಂದರಲ್ಲೇ ಇಂದು 5,949 ಮಂದಿಗೆ ಕೊರೊನಾ ಪಾಸಿಟಿವ್ ಆಗಿದ್ದರೆ 273 ಮಂದಿ ಕಳೆದ 24 ಗಂಟೆಗಳಲ್ಲಿ ಪ್ರಾಣ ಕಳೆದುಕೊಂಡಿದ್ದಾರೆ. ಹಾಸನದಲ್ಲಿ 1,505 ಜನರಿಗೆ ಕೊರೊನಾ ಪಾಸಿಟಿವ್ ಆಗಿದ್ದು.. ಮೈಸೂರು 2,240, ತುಮಕೂರು 1,219, ಬೆಳಗಾವಿ 1,147, ದಾವಣಗೆರೆ ಜಿಲ್ಲೆಯಲ್ಲಿ 806 ಮಂದಿ ಪಾಸಿಟಿವ್ ಸೋಂಕಿತರು ಇಂದು ಪತ್ತೆಯಾಗಿದ್ದಾರೆ.

The post ರಾಜ್ಯದಲ್ಲಿಂದು 24,214 ಮಂದಿಗೆ ಕೊರೊನಾ ಪಾಸಿಟಿವ್.. 476 ಮಂದಿ ಸಾವು appeared first on News First Kannada.

Source: newsfirstlive.com

Source link