ಬೆಂಗಳೂರು: ರಾಜ್ಯದಲ್ಲಿ ಇಂದು 8,164 ಱಪಿಡ್ ಆ್ಯಂಟಿಜೆನ್ ಟೆಸ್ಟ್ ಹಾಗೂ 1,40,926 ಆರ್​​ಟಿಪಿಸಿಆರ್​ ಟೆಸ್ಟ್​​ಗಳೂ ಸೇರಿದಂತೆ ಒಟ್ಟು 1,49,090 ಕೊರೊನಾ ಪರೀಕ್ಷೆಗಳನ್ನು ಮಾಡಲಾಗಿದೆ. ಈ ಪೈಕಿ ಇಂದು 44,438 ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದೆ. ಈ ವರೆಗೆ ಸೋಂಕಿಗೊಳಗಾದವರ ಸಂಖ್ಯೆ 16,46,303 ಕ್ಕೆ ಏರಿಕೆಯಾಗಿದೆ.

ರಾಜ್ಯದಾದ್ಯಂತ ಇಂದು 20, 901 ಮಂದಿ ಸೋಂಕಿನಿಂದ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದು ಈವರೆಗೆ 11,85,299 ಮಂದಿ ಡಿಸ್ಚಾರ್ಜ್ ಆಗಿದ್ದಾರೆ. ಕೊರೊನಾದಿಂದಾಗಿ ಕಳೆದ 24 ಗಂಟೆಗಳಲ್ಲಿ 239 ಮಂದಿ ಸಾವನ್ನಪ್ಪಿದ್ದಾರೆ. ಈವರೆಗೆ ಒಟ್ಟು 16,250 ಮಂದಿ ಸೋಂಕಿಗೆ ಬಲಿಯಾದಂತಾಗಿದೆ. ರಾಜ್ಯದಲ್ಲಿ ಸದ್ಯ 4,44,734 ಆ್ಯಕ್ಟಿವ್ ಕೇಸ್​ಗಳಿವೆ ಎಂದು ಆರೋಗ್ಯ ಇಲಾಖೆ ತನ್ನ ಹೆಲ್ತ್ ಬುಲೆಟಿನ್​ನಲ್ಲಿ ಹೇಳಿದೆ.

The post ರಾಜ್ಯದಲ್ಲಿಂದು 44,438 ಜನರಿಗೆ ಸೋಂಕು​; 4,44,734 ಕ್ಕೇರಿದ ಆ್ಯಕ್ಟಿವ್ ಕೇಸ್​ appeared first on News First Kannada.

Source: newsfirstlive.com

Source link