ಬೆಂಗಳೂರು: ರಾಜ್ಯದಲ್ಲಿಂದು 4,867 ಜನಕ್ಕೆ ಕೊರೊನಾ ಸೋಂಕು ತಗುಲಿದ್ದು, 142 ಮಂದಿ ಸಾವನ್ನಪ್ಪಿದ್ದಾರೆ. ರಾಜ್ಯದಲ್ಲಿ ಕೋವಿಡ್-19 ಸೋಂಕು ಖಚಿತ ಶೇಕಡಾವಾರು ಪ್ರಮಾಣ ಶೇ.3.25ರಷ್ಟಿದೆ.

ಸದ್ಯ ರಾಜ್ಯದಲ್ಲಿ 1,23,134 ಸಕ್ರಿಯ ಪ್ರಕರಣಗಳಿದ್ದು, ಇಂದು 8,404 ಜನ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಬೆಂಗಳೂರಿನಲ್ಲಿ ನಿಧಾನವಾಗಿ ಕೊರೊನಾ ಪ್ರಕರಣಗಳ ಸಂಖ್ಯೆ ಇಳಿಮುಖವಾಗುತ್ತಿದ್ದು, ಇಂದು ಸಿಲಿಕಾನ್ ಸಿಟಿಯ 1,034 ಜನರು ಕೊರೊನಾ ಸೋಂಕಿಗೆ ತುತ್ತಾಗಿದ್ದಾರೆ. ಬೆಂಗಳೂರಿನಲ್ಲಿ 28 ಸೋಂಕಿತರು ಸಾವನ್ನಪ್ಪಿದ್ದು, ಇಂದು 1,976 ಮಂದಿ ಡಿಸ್ಚಾರ್ಜ್ ಆಗಿದ್ದಾರೆ. ಸದ್ಯ ಬೆಂಗಳೂರಿನಲ್ಲಿ 70.312 ಸಕ್ರಿಯ ಪ್ರಕರಣಗಳಿವೆ.

ಇವತ್ತು 1,49,731 ಸ್ಯಾಂಪಲ್ (ರಾಪಿಡ್ ಆ್ಯಂಟಿಜನ್ 26,519 + ಆರ್ ಟಿ ಪಿಸಿಆರ್ 1,23,212) ಗಳನ್ನು ಕೊರೊನಾ ಪರೀಕ್ಷೆಗೆ ಒಳಪಡಿಸಲಾಗಿದೆ. ಇದುವರೆಗೂ ರಾಜ್ಯದಲ್ಲಿ 28,11,320 ಕೊರೊನಾ ಪ್ರಕರಣಗಳು ವರದಿಯಾಗಿವೆ. 34,025 ಮಂದಿ ಕೊರೊನಾಗೆ ಬಲಿಯಾಗಿದ್ದಾರೆ. ಮರಣ ಪ್ರಮಾಣ ಶೇ.2.91ರಷ್ಟಿದೆ.

ಆರೋಗ್ಯ ಇಲಾಖೆಯ ಬುಲೆಟಿನ್ ಪ್ರಕಾರ, ಬಾಗಲಕೋಟೆ 23, ಬಳ್ಳಾರಿ 106, ಬೆಳಗಾವಿ 93, ಬೆಂಗಳೂರು ಗ್ರಾಮಾಂತರ 134, ಬೆಂಗಳೂರು ನಗರ 1034, ಬೀದರ್ 12, ಚಾಮರಾಜನಗರ 109, ಚಿಕ್ಕಬಳ್ಳಾಪುರ 128, ಚಿಕ್ಕಮಗಳೂರು 152, ಚಿತ್ರದುರ್ಗ 138, ದಕ್ಷಿಣ ಕನ್ನಡ 542, ದಾವಣಗೆರೆ 176, ಧಾರವಾಡ 55, ಗದಗ 17, ಹಾಸನ 364, ಹಾವೇರಿ 18, ಕಲಬುರಗಿ 26, ಕೊಡಗು 206, ಕೋಲಾರ 90, ಕೊಪ್ಪಳ 26, ಮಂಡ್ಯ 154, ಮೈಸೂರು 546, ರಾಯಚೂರು 20, ರಾಮನಗರ 21, ಶಿವಮೊಗ್ಗ 217, ತುಮಕೂರು 182, ಉಡುಪಿ 117, ಉತ್ತರ ಕನ್ನಡ 119, ವಿಜಯಪುರ 34 ಮತ್ತು ಯಾದಗಿರಿಯಲ್ಲಿ 8 ಹೊಸ ಕೊರೊನಾ ಪ್ರಕರಣಗಳು ವರದಿಯಾಗಿವೆ.

The post ರಾಜ್ಯದಲ್ಲಿಂದು 4,867 ಕೊರೊನಾ ಪ್ರಕರಣ, 142 ಸಾವು appeared first on Public TV.

Source: publictv.in

Source link