ರಾಜ್ಯದಲ್ಲಿ ಇಂದು 58,395 ಜನ ಗುಣಮುಖರಾಗಿದ್ದು ಈವರೆಗೂ ಒಂದೇ ದಿನದಲ್ಲಿ ಚೇತರಿಕೆಗೊಂಡ ಅತೀ ಹೆಚ್ಚು ಸಂಖ್ಯೆಯಾಗಿದೆ ಅಂತಾ ಆರೋಗ್ಯ ಸಚಿವ ಡಾ.ಕೆ ಸುಧಾಕರ್ ಮಾಹಿತಿ ನೀಡಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿರುವ ಡಾ.ಸುಧಾಕರ್.. ರಾಜ್ಯದಲ್ಲಿ ಇಂದು 30,309 ಪ್ರಕರಣಗಳು ಪತ್ತೆಯಾಗಿದ್ದು, ಗುಣಮುಖ ಹೊಂದಿದವರ ಸಂಖ್ಯೆ ಹೊಸ ಪ್ರಕರಣಗಳ ಸಂಖ್ಯೆಯನ್ನು ಮೀರಿಸಿದೆ. ಬೆಂಗಳೂರಿನಲ್ಲಿ 8,676 ಪ್ರಕರಣಗಳು ಪತ್ತೆಯಾಗಿದ್ದು, 31,795 ಜನ ಗುಣಮುಖ ಹೊಂದಿದ್ದಾರೆ ಅಂತಾ ತಿಳಿಸಿದ್ದಾರೆ.

The post ರಾಜ್ಯದಲ್ಲಿಂದು 50 ಸಾವಿರಕ್ಕೂ ಅಧಿಕ ಸೋಂಕಿತರು ಡಿಸ್ಚಾರ್ಜ್: ಕನ್ನಡಿಗರಿಗೆ ಭರ್ಜರಿ ಗುಡ್​​ನ್ಯೂಸ್ appeared first on News First Kannada.

Source: newsfirstlive.com

Source link