ರಾಜ್ಯದಲ್ಲಿಂದು 8,249 ಜನರಿಗೆ ಕೊರೊನಾ: 5% ಗಿಂತ ಕೆಳಗಿಳಿದ ಪಾಸಿಟಿವಿಟಿ ರೇಟ್

ರಾಜ್ಯದಲ್ಲಿಂದು 8,249 ಜನರಿಗೆ ಕೊರೊನಾ: 5% ಗಿಂತ ಕೆಳಗಿಳಿದ ಪಾಸಿಟಿವಿಟಿ ರೇಟ್

ಬೆಂಗಳೂರು: ರಾಜ್ಯದಲ್ಲಿ ಇಂದು 50,320 ಱಪಿಡ್ ಆ್ಯಂಟಿಜೆನ್ ಟೆಸ್ಟ್ ಹಾಗೂ 1,19,375 ಆರ್​ಟಿಪಿಸಿಆರ್ ಟೆಸ್ಟ್​ಗಳೂ ಸೇರಿದಂತೆ ಒಟ್ಟು 1,69,695 ಕೊರೊನಾ ಪರೀಕ್ಷೆಗಳನ್ನು ನಡೆಸಲಾಗಿದ್ದು ಈ ಪೈಕಿ ಇಂದು 8,249 ಮಂದಿಗೆ ಕೊರೊನಾ ಪಾಸಿಟಿವ್ ಆಗಿರುವುದು ದೃಢಪಟ್ಟಿದೆ. ಇನ್ನು ಈವರೆಗೆ ಸೋಂಕಿಗೊಳಗಾದವರ ಸಂಖ್ಯೆ 27,47,539 ಕ್ಕೆ ಏರಿಕೆಯಾಗಿದೆ.

ಇಂದು 14,975 ಸೋಂಕಿತರು ಗುಣಮುಖರಾಗಿದ್ದು ಈವರೆಗೆ 25,11,105 ಮಂದಿ ಆಸ್ಪತ್ರೆಗಳಿಂದ ಡಿಸ್ಚಾರ್ಜ್ ಆಗಿದ್ದಾರೆ. ಇಂದು 159 ಮಂದಿ ಸೋಂಕಿನಿಂದಾಗಿ ಸಾವನ್ನಪ್ಪಿದ್ದು ಈವರೆಗೆ 32,644 ಮಂದಿ ಕೊರೊನಾಗೆ ಬಲಿಯಾದಂತಾಗಿದೆ. ಸದ್ಯ ರಾಜ್ಯದಲ್ಲಿ 2,03,769 ಆ್ಯಕ್ಟಿವ್ ಕೇಸ್​​ಗಳಿವೆ ಎಂದು ಆರೋಗ್ಯ ಇಲಾಖೆಯ ಅಂಕಿ ಅಂಶಗಳು ಹೇಳುತ್ತಿವೆ.

The post ರಾಜ್ಯದಲ್ಲಿಂದು 8,249 ಜನರಿಗೆ ಕೊರೊನಾ: 5% ಗಿಂತ ಕೆಳಗಿಳಿದ ಪಾಸಿಟಿವಿಟಿ ರೇಟ್ appeared first on News First Kannada.

Source: newsfirstlive.com

Source link