ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಪಾಸಿಟಿವಿಟಿ ರೇಟ್​​​ ವಿಚಾರದಲ್ಲಿ ಮೈಸೂರು ಮೊದಲ ಸ್ಥಾನದಲ್ಲಿದೆ. ಶೇಕಡ 30.23ರಷ್ಟು ಪಾಸಿಟಿವಿಟಿ ರೇಟ್ ಮೂಲಕ ರಾಜ್ಯದಲ್ಲೇ ಹೆಚ್ಚು ಪಾಸಿಟಿವಿಟಿ ರೇಟ್ ಹೊಂದಿದ ಜಿಲ್ಲೆಯಾಗಿದೆ.

ಇನ್ನೂ ಚಿಕ್ಕಮಗಳೂರು ಜಿಲ್ಲೆ ಶೇಕಡ 24.20 ರಷ್ಟು ಪಾಸಿಟಿವಿಟಿ ರೇಟ್​​​ನೊಂದಿಗೆ ಎರಡನೆ ಸ್ಥಾನದಲ್ಲಿದೆ. ಮೂರನೇ ಸ್ಥಾನದಲ್ಲಿ ಶೇಕಡ 19.71ರಷ್ಟು ಪಾಸಿಟಿವಿಟಿ ರೇಟ್ ಹೊಂದಿರೋ ಚಿತ್ರದುರ್ಗ ಜಿಲ್ಲೆ ಇದೆ. ಬೀದರ್ ಜಿಲ್ಲೆ ಕಡೇ ಸ್ಥಾನದಲ್ಲಿದ್ದು ಪಾಸಿಟಿವಿಟಿ ರೇಟ್ ಶೇಕಡ 0.85ರಷ್ಟಿದೆ.

7 ದಿನಗಳ ಪಾಸಿಟಿವಿಟಿ ರೇಟ್​​ನ ಚಿತ್ರಣ ಇದ್ದಾಗಿದ್ದು, ರಾಜ್ಯದ ಸರಾಸರಿ ಪಾಸಿಟಿವಿಟಿ ರೇಟ್ ಶೇಕಡ 11.21%ರಷ್ಟಿದೆ.

The post ರಾಜ್ಯದಲ್ಲಿ ಅತೀ ಹೆಚ್ಚು ಪಾಸಿಟಿವಿಟಿ ರೇಟ್​​ ಇರೋದು ಈ ಜಿಲ್ಲೆಯಲ್ಲಿ appeared first on News First Kannada.

Source: newsfirstlive.com

Source link