ರಾಜ್ಯದಲ್ಲಿ ಅನ್​ಲಾಕ್​​: ಬೆಂಗಳೂರಿನ ಮಾಲ್​​ಗಳು ಓಪನ್, ದೇಗುಲಗಳಲ್ಲಿ ಭಕ್ತರಿಗೆ ದರ್ಶನ

ರಾಜ್ಯದಲ್ಲಿ ಅನ್​ಲಾಕ್​​: ಬೆಂಗಳೂರಿನ ಮಾಲ್​​ಗಳು ಓಪನ್, ದೇಗುಲಗಳಲ್ಲಿ ಭಕ್ತರಿಗೆ ದರ್ಶನ

ಬೆಂಗಳೂರು: ಇಂದಿನಿಂದ ರಾಜ್ಯದಲ್ಲಿ ಮೂರನೇ ಹಂತದ ಲಾಕ್​ಡೌನ್ ಸಡಿಲಿಕೆ ಜಾರಿಯಾಗಿದೆ. ಸಿನಿಮಾ ಥಿಯೇಟರ್​ಗಳನ್ನ ಹೊರತುಪಡಿಸಿ ಉಳಿದ ಬಹುತೇಕ ಎಲ್ಲಾ ಕ್ಷೇತ್ರಗಳ ಅನ್​​ಲಾಕ್​​ಗೆ  ಸರ್ಕಾರ ಅನುಮತಿ ನೀಡಿದೆ. 
ಈ ಹಿನ್ನೆಲೆ ಬೆಂಗಳೂರಿನಲ್ಲಿ ಎಲ್ಲಾ ಮಾಲ್​ಗಳು ತಿಂಗಳ ಬಳಿಕ ಓಪನ್ ಆಗಿವೆ. ಇಂದು ಬೆಳಗ್ಗೆ 10 ಗಂಟೆಗೆ ಸಿಬ್ಬಂದಿ ಮಾಲ್ ತೆರೆದಿದ್ದಾರೆ. ಕೋರಮಂಗಲದ ಫೋರಮ್ ಮಾಲ್ ಓಪನ್‌ ಮಾಡಿದ ಸಿಬ್ಬಂದಿ, ಮಾಲ್‌ ಸುತ್ತ ಅಳವಡಿಸಿದ್ದ ಬ್ಯಾರಿಕೇಡ್ ತೆರವುಗೊಳಿಸಿದ್ದಾರೆ. ಈಗಾಗಲೆ ಮಾಲ್ನಲ್ಲಿ‌ರೋ ಶಾಪಿಂಗ್ ಮಳಿಗೆಗಳು ಓಪನ್ ಆಗಿವೆ.
ಹಗ
ಹಾಗೇ ರಾಜ್ಯದ ಬಹುತೇಕ ದೇವಸ್ಥಾನಗಳಲ್ಲಿ ಇಂದಿನಿಂದ ಭಕ್ತರ ಪ್ರವೇಶಕ್ಕೆ ಅನುಮತಿ ನೀಡಲಾಗಿದೆ. ದಕ್ಷಿಣ ಕನ್ನಡ ಜಿಲ್ಲೆ ಸುಳ್ಯ ತಾಲೂಕಿನಲ್ಲಿರೋ ಶ್ರೀಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯಕ್ಕೆ ರಾಜ್ಯದ ವಿವಿಧ ಭಾಗದಿಂದ ಭಕ್ತರು ಆಗಮಿಸುತ್ತಿದ್ದಾರೆ. ಸರತಿ ಸಾಲಿನಲ್ಲಿ ನಿಂತು ಶ್ರೀ ಸುಬ್ರಹ್ಮಣ್ಯ ದರ್ಶನ ಪಡೆಯುತ್ತಿದ್ದಾರೆ. 2 ತಿಂಗಳ ಬಳಿಕ ಜನರಿಗೆ ದೇವರ ದರ್ಶನಕ್ಕೆ ಅವಕಾಶ ಸಿಕ್ಕಿದೆ. ದರ್ಶನ ಹಾಗೂ ಮಂಗಳಾರತಿಗೆ ಮಾತ್ರ ಅವಕಾಶವಿದೆ. ಶ್ರೀ ಕ್ಷೇತ್ರದಲ್ಲಿ ಸರ್ಪಸಂಸ್ಕರ, ಆಶ್ಲೇಷ ಬಲಿ ಸೇವೆಗೆ ಅವಕಾಶವಿಲ್ಲ. ಮುಂಜಾನೆ 7 ರಿಂದ 11:30 ರವರೆಗೆ , ಮಧ್ಯಾಹ್ನ 12:15ರಿಂದ 1:30ರವರೆಗೆ ಮತ್ತು ಅಪರಾಹ್ಣ 2:30ರಿಂದ ಸಾಯಂಕಾಲ 6:30 ರವರೆಗೆ ಮತ್ರ ದೇವರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ.
ಇನ್ನು ಉತ್ತರ ಕನ್ನಡ ಜಿಲ್ಲೆಯ ಶಿರಸಿ ಮಾರಿಕಾಂಬಾ, ಗೋಕರ್ಣ ಮಹಾಬಲೇಶ್ವರ, ಮುರುಡೇಶ್ವರ ಸೇರಿದಂತೆ ಬಹುತೇಕ ಎಲ್ಲಾ ದೇವಾಲಯಗಳು ಮುಂಜಾನೆಯಿಂದ ಬಾಗಿಲು ತೆರೆದಿವೆ. ಮೊದಲ ದಿನ ಕೇವಲ ಬೆರಳೆಣಿಕೆಯಷ್ಟು ಭಕ್ತರು ಮಾತ್ರ ದೇವಸ್ಥಾನಕ್ಕೆ ಆಗಮಿಸಿದ್ದಾರೆ. ಹೊರನಾಡು ಅನ್ನಪೂರ್ಣೇಶ್ವರಿ ದೇಗುಲ, ಮೈಸೂರಿನಲ್ಲಿ ನಾಡ ಅಧಿದೇವತೆ ಚಾಮುಂಡೇಶ್ವರಿ ದೇಗುಲ, ಉಡುಪಿಯ ಪ್ರಸಿದ್ಧ ಅನಂತೇಶ್ವರ ದೇವಸ್ಥಾನ ಸೇರಿದಂತೆ ಬಹುತೇಕ ದೇವಾಲಯಗಳಲ್ಲಿ ಬೆಳಗ್ಗೆಯಿಂದ ಭಕ್ತರು ದರ್ಶನ ಪಡೆಯುತ್ತಿದ್ದಾರೆ.

The post ರಾಜ್ಯದಲ್ಲಿ ಅನ್​ಲಾಕ್​​: ಬೆಂಗಳೂರಿನ ಮಾಲ್​​ಗಳು ಓಪನ್, ದೇಗುಲಗಳಲ್ಲಿ ಭಕ್ತರಿಗೆ ದರ್ಶನ appeared first on News First Kannada.

Source: newsfirstlive.com

Source link