ಬೆಂಗಳೂರು: ಕೊರೊನಾ ಎರಡನೇ ಅಲೆ ಹೆಚ್ಚಾದ ಕಾರಣ, ರಾಜ್ಯದಲ್ಲಿ 14 ದಿನಗಳ ಕ್ಲೋಸ್​ಡೌನ್ ಘೋಷಣೆ ಮಾಡಲಾಗಿದೆ. ಹೀಗಾಗಿ ಇಂದಿನಿಂದ 14 ದಿನಗಳ ಕಾಲ ಯಾವುದೇ ರೀತಿಯ ಅನಗತ್ಯ ಓಡಾಟಕ್ಕೆ ಅವಕಾಶ ಇರೋದಿಲ್ಲ.

ಬಸ್​ಗಳ​ ಸಂಚಾರ ನಿರ್ಬಂಧಿಸಲಾಗಿದೆ. ಸಾರಿಗೆ ಇಲಾಖೆ ನಿಗಮಗಳಾದ ಬಿಎಂಟಿಸಿ, ಕೆಎಸ್​ಆರ್​ಟಿಸಿ ಸೇರಿ ಮೆಟ್ರೋ ಸಂಚಾರವನ್ನ ಕೂಡ ಸಂಪೂರ್ಣ ಬಂದ್ ಮಾಡಲಾಗುತ್ತೆ. ಆದ್ರೆ ಅಂತರ್​​ ರಾಜ್ಯ ಸರಕು ಸಾಗಾಣಿಕೆಗೆ ಮಾತ್ರ ಯಾವುದೇ ಅಡ್ಡಿ ಇಲ್ಲ ಅಂತ ಸ್ಪಷ್ಟಪಡಿಸಲಾಗಿದೆ.

ಇನ್ನು, ಹೋಟೆಲ್​, ರೆಸ್ಟೋರೆಂಟ್​ಗಳಲ್ಲಿ, ಬಾರ್​ಗಳಲ್ಲಿ ಪಾರ್ಸಲ್​ಗಷ್ಟೇ ಅವಕಾಶ ಇರಲಿದೆ. ಬೆಳಗ್ಗರ 6 ಗಂಟೆಯಿಂದ 10 ಗಂಟೆವರೆಗೆ ಮಾತ್ರ ಅಗತ್ಯವಸ್ತುಗಳ ಖರೀದಿಗೆ ಅವಕಾಶವಿರುತ್ತದೆ.

ಇದನ್ನೂ ಓದಿ: ಮದ್ಯ ಖರೀದಿಗೆ 4 ಗಂಟೆಯಷ್ಟೇ ಅವಕಾಶ.. ಇಲ್ಲಿದೆ ರಾಜ್ಯ ಸರ್ಕಾರದ ಹೊಸ ಗೈಡ್​ಲೈನ್ಸ್ ಮಾಹಿತಿ

 

The post ರಾಜ್ಯದಲ್ಲಿ ಇಂದಿನಿಂದ 14 ದಿನಗಳ ಕಾಲ ಕ್ಲೋಸ್​ಡೌನ್ appeared first on News First Kannada.

Source: News First Kannada
Read More