ಬೆಂಗಳೂರು: ರಾಜ್ಯದಲ್ಲಿ ಮೊದಲ ಹಂತದ ಲಾಕ್​ಡೌನ್ ಇವತ್ತಿಗೆ ಮುಕ್ತಾಯವಾಗಿದ್ದು, ಇಂದಿನಿಂದ ಎರಡನೇ ಹಂತದ ಲಾಕ್​ಡೌನ್ ಶುರುವಾಗಿದೆ. ರಾಜ್ಯಾದ್ಯಂತ ಜೂನ್ 7ರವರೆಗೆ ಲಾಕ್​ಡೌನ್ ವಿಸ್ತರಣೆಯಾಗಿದ್ದು, ಇಂದಿನಿಂದ ಇನ್ನಷ್ಟು ಕಠಿಣ ನಿಯಮಗಳು ಜಾರಿಗೊಳ್ಳಲಿವೆ.

ಈ ಮೊದಲಿನಂತೆ ಬೆಳಗ್ಗೆ 6 ರಿಂದ 10 ಗಂಟೆವರೆಗೆ ಅಗತ್ಯ ವಸ್ತು ಖರೀದಿಗೆ ಅವಕಾಶವಿದೆ. 10 ಗಂಟೆ ನಂತರ ಮನೆಯಿಂದ ಆಚೆ ಬರುವುದಕ್ಕೆ ಅವಕಾಶ ನೀಡಲಾಗಿಲ್ಲ. ಅನಾವಶ್ಯಕವಾಗಿ ಓಡಾಡಿದ್ರೆ ಅಂತವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಜೊತೆಗೆ ವಾಹನಗಳನ್ನ ಸೀಜ್ ಮಾಡಿ ಕೇಸ್ ಕೂಡ ದಾಖಲಿಸುವುದಾಗಿ ಎಚ್ಚರಿಕೆ ನೀಡಲಾಗಿದೆ.

ಇನ್ನು ಬೆಳ್ಳಂಬೆಳಗ್ಗೆ ಎಂದಿನಂತೆ ಅಗತ್ಯ ವಸ್ತುಗಳ ಖರೀದಿಗೆ ಜನರು ಆಗಮಿಸುತ್ತಿದ್ದಾರೆ. ಬೆಂಗಳೂರಿನ ಶಿವಾಜಿನಗರದ ರಸೆಲ್ ಮಾರ್ಕೆಟ್ ಬಳಿ ಜನರು ಅಗತ್ಯ ವಸ್ತುಗಳ ಖರೀದಿಯಲ್ಲಿ ಫುಲ್ ಬ್ಯುಸಿಯಾಗಿದ್ದಾರೆ. ನಿಗದಿತ ಸಮಯದಲ್ಲಿ ಅಗತ್ಯ ವಸ್ತುಗಳ ಖರೀದಿಗೆ ಸಿಲಿಕಾನ್ ಸಿಟಿಜನ ಮುಗಿಬಿದಿದ್ದಾರೆ. ಬೆಳ್ಳಂಬೆಳಗ್ಗೆಯೇ ವಾಹನ ಸಂಚಾರವು ಹೆಚ್ಚಿನ ಮಟ್ಟದಲ್ಲಿ ಕಾಣ್ತಿದ್ದು, ಹಣ್ಣು ತರಕಾರಿ ಖರೀದಿಗೆ ಮಾರ್ಕೆಟ್​​ನತ್ತ ಜನರು ಮುಖ ಮಾಡ್ತಿದ್ದಾರೆ.

The post ರಾಜ್ಯದಲ್ಲಿ ಇಂದಿನಿಂದ 2ನೇ ಹಂತದ ಲಾಕ್​​ಡೌನ್, ನಿಯಮಗಳು ಮತ್ತಷ್ಟು ಬಿಗಿ appeared first on News First Kannada.

Source: newsfirstlive.com

Source link