ಬೆಂಗಳೂರು: ರಾಜ್ಯದಲ್ಲಿ ಇಂದು 43,233 ಱಪಿಡ್ ಆ್ಯಂಟಿಜೆನ್ ಟೆಸ್ಟ್ ಹಾಗೂ 1,15,041 ಆರ್​ಟಿಪಿಸಿಆರ್​ ಟೆಸ್ಟ್​ಗಳು ಸೇರಿದಂತೆ ಒಟ್ಟು 1,58,274 ಕೊರೊನಾ ಪರೀಕ್ಷೆಗಳನ್ನು ನಡೆಸಲಾಗಿದೆ. ಈ ಪೈಕಿ ಇಂದು 12,209 ಮಂದಿಗೆ ಕೊರೊನಾ ಸೋಂಕಿರುವುದು ದೃಢಪಟ್ಟಿದೆ. ರಾಜ್ಯದಲ್ಲಿ ಈವರೆಗೆ ಸೋಂಕಿಗೊಳಗಾದವರ ಸಂಖ್ಯೆ 26,95,523 ಕ್ಕೆ ಏರಿಕೆಯಾಗಿದೆ.

ಇಂದು 25,659 ಮಂದಿ ಸೋಂಕಿನಿಂದ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ. ಈವರೆಗೆ 24,09,417 ಮಂದಿ ಗುಣಮುಖರಾದಂತಾಗಿದೆ. ಇಂದು 320 ಮಂದಿ ಕೊರೊನಾ ಸೋಂಕಿನಿಂದ ಸಾವನ್ನಪ್ಪಿದ್ದು ಈವರೆಗೆ ಸೋಂಕಿನಿಂದಾಗಿ ಸಾವನ್ನಪ್ಪಿದವರ ಸಂಖ್ಯೆ 31,580ಕ್ಕೆ ಏರಿಕೆಯಾಗಿದೆ. ಸದ್ಯ ರಾಜ್ಯದಲ್ಲಿ 2,54,505 ಆ್ಯಕ್ಟಿವ್ ಪ್ರಕರಣಗಳಿವೆ ಎಂದು ಆರೋಗ್ಯ ಇಲಾಖೆಯ ಅಂಕಿ-ಅಂಶಗಳು ಹೇಳುತ್ತಿವೆ.

ಇನ್ನು ಬೆಂಗಳೂರು ಒಂದರಲ್ಲೇ 2944 ಹೊಸ ಪ್ರಕರಣಗಳು ದಾಖಲಾಗಿ, 187 ಮಂದಿ ಪ್ರಾಣವನ್ನ ಕಳೆದುಕೊಂಡಿದ್ದಾರೆ. ಇನ್ನು ಬೆಳಗಾವಿ 418, ಚಿಕ್ಕಮಗಳೂರು 416, ದಕ್ಷಿಣ ಕನ್ನಡ 609, ಹಾಸನ 655, ಮಂಡ್ಯ 571, ಮೈಸೂರು 1237, ತುಮಕೂರು 698, ಉಡುಪಿ 494 ಹಾಗೂ ಉತ್ತರ ಕನ್ನಡದಲ್ಲಿ 360 ಪ್ರಕರಣಗಳು ದಾಖಲಾಗಿವೆ. ಇನ್ನು ರಾಜ್ಯದಲ್ಲಿ ಪಾಸಿಟಿವಿಟಿ ರೇಟ್​ ಕುಸಿದಿದ್ದು, 7.71ಕ್ಕೆ ಬಂದು ನಿಂತಿದೆ. ಮೃತಪಟ್ಟವರ ಶೇಕಡವಾರು ಪ್ರಮಾಣ ಶೇಕಡಾ 2.62ಕ್ಕೆ ನಿಂತಿದೆ.

The post ರಾಜ್ಯದಲ್ಲಿ ಇಂದು ಕೊರೊನಾ ಹಾವಳಿಗೆ 320 ಮಂದಿ ದುರ್ಮರಣ appeared first on News First Kannada.

Source: newsfirstlive.com

Source link