ಬೆಂಗಳೂರು: ರಾಜ್ಯದಲ್ಲಿ ಇಂದು ಕೊರೊನಾ ಪಾಸಿಟಿವ್ ಸಂಖ್ಯೆಗಿಂತ, ಸೋಂಕಿನಿಂದ ಡಿಸ್ಚಾರ್ಜ್ ಆದವರ ಸಂಖ್ಯೆಯೇ ಹೆಚ್ಚಿದೆ.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಬಿಡುಗಡೆ ಮಾಡಿರುವ ಇಂದಿನ ಕೊರೊನಾ ಹೆಲ್ತ್​ ಬುಲಿಟಿನ್​ನ ಅಂಕಿ-ಅಂಶಗಳ ಪ್ರಕಾರ.. ಇಂದು ರಾಜ್ಯದಲ್ಲಿ 31,531 ಮಂದಿಗೆ ಸೋಂಕು ಕಾಣಿಸಿಕೊಂಡಿದೆ. ಅಂತೆಯೇ 36,475 ಮಂದಿ ಡಿಸ್ಚಾರ್ಜ್​ ಆಗಿದ್ದಾರೆ.

ಕೊರೊನಾದ ಎರಡನೇ ಅಲೆ ಪೀಕಿಗೆ ಬಂದ ಬಳಿಕ ಇದೇ ಮೊದಲ ಬಾರಿಗೆ ಪಾಸಿಟಿವ್ ಪ್ರಕರಣಗಳಿಂದ ಡಿಸ್ಚಾರ್ಜ್​ ಆಗಿರುವ ಸಂಖ್ಯೆಯೇ ಹೆಚ್ಚಾಗಿದೆ. ಈ ಮೂಲಕ ಕೊರೊನಾ ವಿಚಾರದಲ್ಲಿ ಇಂದು ಸಮಾಧಾನಕರ ಸುದ್ದಿ ಸಿಕ್ಕಂತಾಗಿದೆ. ಆದರೆ ಕೊರೊನಾ ಟೆಸ್ಟಿಂಗ್ ಸಂಖ್ಯೆಯಲ್ಲಿ ಇಳಿಮುಖ ಆಗುತ್ತಿರೋದ್ರಿಂದ ಪ್ರಕರಣಗಳ ಸಂಖ್ಯೆ ಸಹಜವಾಗಿಯೇ ಕಡಿಮೆ ಆಗುತ್ತಿದೆ ಅನ್ನೋ ವಾದವೂ ಇದೆ. ಅಂದ್ಹಾಗೆ ರಾಜ್ಯದಲ್ಲಿ ಇಂದು 9,713 ರ್ಯಾಪಿಡ್ ಆ್ಯಂಟಿಜೆನ್ ಟೆಸ್ಟ್ ಹಾಗೂ 10,3506 ಆರ್​ಟಿಪಿಸಿಆರ್​ ಟೆಸ್ಟ್​ಗಳು ಸೇರಿದಂತೆ ಒಟ್ಟು 1,13, 219 ಕೊರೊನಾ ಪರೀಕ್ಷೆಗಳನ್ನು ನಡೆಸಲಾಗಿದೆ.

The post ರಾಜ್ಯದಲ್ಲಿ ಇಂದು ಪಾಸಿಟಿವ್ ಕೇಸ್​ಗಿಂತ ಡಿಸ್ಚಾರ್ಜ್​ ಸಂಖ್ಯೆಯೇ ಅಧಿಕ appeared first on News First Kannada.

Source: newsfirstlive.com

Source link