– ಬೆಂಗಳೂರಿನಲ್ಲಿ 11,199 ಕೇಸ್ – 64 ಸಾವು

ಬೆಂಗಳೂರು: ರಾಜ್ಯದಲ್ಲಿ ಇಂದು ಕೊರೊನಾ ಪ್ರಕರಣಗಳ ಸಂಖ್ಯೆ ನಿನ್ನೆಗಿಂತ ಕಡಿಮೆಯಾಗಿದೆ. ಇಂದು 37,733 ಮಂದಿಗೆ ಕೊರೊನಾ ಬಂದಿದ್ದು, ರಾಜ್ಯಾದ್ಯಂತ ಒಟ್ಟು 217 ಜನ ಕೊರೊನಾಗೆ ಬಲಿಯಾಗಿದ್ದಾರೆ.

ಬೆಂಗಳೂರಿನಲ್ಲಿ ನಿನ್ನೆಗಿಂತ ಕಡಿಮೆ ಕೇಸ್ ಬಂದಿದ್ದು, 21,199 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ನಗರದಲ್ಲಿ ಒಟ್ಟು 64 ಜನ ಬಲಿಯಾಗಿದ್ದಾರೆ. ಬೆಂಗಳೂರಿನ ಬಳಿಕ ಮೈಸೂರಿನಲ್ಲಿ ಕೊರೊನಾ ಪ್ರಕರಣ ಹೆಚ್ಚಳ ಕಂಡಿದ್ದು, ಇಂದು 3,750 ಪ್ರಕರಣ ದಾಖಲಾಗಿದೆ.

ಈ ಮೂಲಕ ರಾಜ್ಯದಲ್ಲಿ ಒಟ್ಟು ಸಕ್ರಿಯ ಪ್ರಕರಣಗಳ ಸಂಖ್ಯೆ 4,21,436ಕ್ಕೆ ಏರಿಕೆ ಕಂಡಿದೆ. ಇಂದು ರಾಜ್ಯದಲ್ಲಿ ಒಟ್ಟು 23,539 ಮಂದಿಗೆ ಲಸಿಕೆ ನೀಡಲಾಗಿದೆ. ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 16,01,865ಕ್ಕೆ ಏರಿಕೆ ಕಂಡಿದೆ. ಈ ಪೈಕಿ 11,64,398 ಮಂದಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.

ಒಟ್ಟು ಇಲ್ಲಿಯವರೆಗೆ 16,011 ಮಂದಿ ಕೊರೊನಾಗೆ ಬಲಿಯಾಗಿದ್ದಾರೆ. ಇಂದು 12,424 ಆಂಟಿಜನ್ ಟೆಸ್ಟ್, 1,45,941 ಆರ್ ಟಿ ಪಿಸಿಆರ್ ಸೇರಿದಂತೆ ಒಟ್ಟು 1,58,365 ಕೊರೊನಾ ಪರೀಕ್ಷೆ ಮಾಡಲಾಗಿದೆ.

ತುಮಕೂರು 1,302, ಬಳ್ಳಾರಿ 1,156,ದಕ್ಷಿಣ ಕನ್ನಡ 996, ಹಾಸನ 792, ಧಾರವಾಡ 741, ಬಾಗಲಕೋಟೆ 691, ಮಂಡ್ಯ 653, ಶಿವಮೊಗ್ಗ 620, ಚಿಕ್ಕಬಳ್ಳಾಪುರದ 820, ಹಾಸನದ 790, ಮಂದಿಗೆ ಸೋಂಕು ಬಂದಿದೆ.

The post ರಾಜ್ಯದಲ್ಲಿ ಇಂದು 37,733 ಕೊರೊನಾ ಪಾಸಿಟಿವ್ – 217 ಬಲಿ appeared first on Public TV.

Source: publictv.in

Source link